Featured
ಕೊರೊನಾ ತನಿಖೆಗೆ ಮುಂದಾದ WHO : ಚೀನಾ ಮೇಲೆ ಎಲ್ಲಾ ರಾಷ್ಟ್ರಗಳ ಕೆಂಗಣ್ಣು – ಸಂಕಷ್ಟದಲ್ಲಿ ಡ್ರ್ಯಾಗನ್ ರಾಷ್ಟ್ರ..!

ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಇಡೀ ಜಗತನ್ನೇ ಅಲ್ಲೋಲ್ಲ ಕಲ್ಲೋಲ ಮಾಡಿರುವ ಹೆಮ್ಮಾರಿ ಕೊರೊನಾಗೆ ಚೀನಾ ದೇಶವೇ ನೇರ ಕಾರಣವೆಂಬ ಗಂಭೀರ ಆರೋಪ ಮೇಲಿಂದ ಮೇಲೆ ಕೇಳಿಬರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ಆಯೋಗವನ್ನ ಚೀನಾಗೆ ಕಳುಹಿಸಲಿದ್ದು ತನಿಖೆಗೆ ಮುಂದಾಗಿದೆ.
ಕೊರೊನಾ ವೈರಾಣು ಹರಡುವಿಕೆ ಬಗ್ಗೆ ಚೀನಾ ಮೇಲೆ ಸಾಕಷ್ಟು ಅನುಮಾನಗಳು ಬಂದಿದ್ದವು. ಅದರಲ್ಲೂ ದೊಡ್ಡಣ ಅಮೆರಿಕಾ ಉದ್ದೇಶ ಪೂರ್ವಕವಾಗಿಯೇ ಚೀನಾ ಲ್ಯಾಬ್ನಲ್ಲೆ ತಯಾರಾದ ಜೈವಿಕ ಅಸ್ತ್ರ ಎಂದು ಹೇಳಿತ್ತು.
ಇತ್ತಿಚೆಗೆ ಭಾರತ ಸೇರಿದಂತೆ 169 ರಾಷ್ಟ್ರಗಳು ಕೊರೊನಾ ವೈರಸ್ ಮೂಲವನ್ನ ತನಿಖೆ ನಡೆಸುವಂತೆ ಸಹಿ ಹಾಕಿದ್ದವು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ತನಿಖೆಗೆ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಹಿರಿಯ ಸೈಂಟಿಸ್ಟ್ ಡಾ.ಸೌಮ್ಯ ಸ್ವಾಮಿನಾಥನ್ ಮೊದಲ ವೈರಸ್ ಚೀನಾದಲ್ಲಿ ಪತ್ತೆ ಆದ್ದರಿಂದ ಅಲ್ಲಿ ಅಧ್ಯಯನ ಮಾಡಲಾಗುತ್ತದೆ. ಪ್ರಾಣಿಗಳಿಂದ ಮನುಷ್ಯನಿಗೆ ಹೇಗೆ ಸೋಂಕು ತಗುಲಿತು. ವೈರಸ್ ಮೂಲ ಯಾವುದು ? ವೈರಸ್ ಬಗ್ಗೆ ಚೀನಾ ಸರ್ಕಾರ ಮತ್ತು ಅಲ್ಲಿನ ಆರೋಗ್ಯ ಇಲಾಖೆ ಪಾರದರ್ಶಕ ಮಾಹಿತಿ ಕೊಡುತ್ತದೆಯೆ ಅನ್ನೋದು ತನಿಖೆ ನಡೆಸಲಿದೆ ಎಂದು ಹೇಳಿದರು.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಕೊರೊನಾ ಅಬ್ಬರ: 6 ಲಕ್ಷ ದಾಡಿದ ಕೊರೊನಾ ಕೇಸ್: 87 ಮಂದಿ ಬಲಿ
ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಕೊರೊನಾ ಅಬ್ಬರ: 69 ಲಕ್ಷ ದಾಟಿದ ಕೊರೊನಾ ನಂಬರ್: ಸಾವಿನ ಸಂಖ್ಯೆ 96,318ಕ್ಕೆ ಏರಿಕೆ