Featured
ಪರಪ್ಪನ ಅಗ್ರಹಾರಕ್ಕೂ ವಕ್ಕರಿಸಿದ ಕೊರೊನಾ – 20 ಕೈದಿಗಳು, 6 ಸಿಬ್ಬಂದಿಗೂ ಪಾಸಿಟಿವ್..!
ರೈಸಿಂಗ್ ಕನ್ನಡ :
ಬೆಂಗಳೂರು :
ಕೊರೊನಾ ಸೋಂಕು ಯಾರನ್ನೂ ಬಿಡುತ್ತಿಲ್ಲ. ರಾಜ್ಯದಲ್ಲಿ ಪೊಲೀಸ್ ಇಲಾಖೆಗೂ ಇದರ ಭಯ ಹೆಚ್ಚಾಗೇ ಇದೆ. ಬೆಂಗಳೂರಿನಲ್ಲೇ ಈಗಾಗಲೇ 30ಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸೀಲ್‌ಡೌನ್ ಕೂಡ ಮಾಡಲಾಗಿದೆ. ಜೊತೆಯಲ್ಲೇ ಬಂಧಿತರಾಗಿರೋ ಕೈದಿಗಳಿಂದಲೂ ಜೈಲುಗಳಲ್ಲಿ ಕೊರೊನಾ ಆತಂಕ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದೀಗ ಪರಪ್ಪನ ಅಗ್ರಹಾರ ಜೈಲಿಗೂ ಕೊರೊನಾ ವ್ಯಾಪಿಸಿದೆ.
ಪರಪ್ಪನ ಅಗ್ರಹಾರದ 26 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 20 ವಿಚಾರಣಾಧೀನ ಕೈದಿಗಳು, ಆರು ಮಂದಿ ಜೈಲಿನ ಸಿಬ್ಬಂದಿಯಲ್ಲೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಇಲ್ಲಿನ ವಿಶೇಷ ಜೈಲಿನಲ್ಲಿರುವ ಕೈದಿಗಳಿಗೂ ಸೋಂಕು ಕಾಣಿಸಿಕೊಂಡಿದೆ. ಕೊರೋನಾ ಭೀತಿಯಿಂದಾಗಿ ಹೊಸದಾಗಿ ಬಂಧಿತರಾದ ವಿಚಾರಣಾಧೀನ ಕೈದಿಗಳನ್ನು ಪರಪ್ಪನ ಅಗ್ರಹಾರದ ಹೊರಗಿರುವ ಮಹಿಳಾ ವಿಶೇಷ ಜೈಲಿನಲ್ಲಿ ಇರಿಸಿ, ಕ್ವಾರಂಟೈನ್ ಮಾಡಲಾಗುತ್ತಿತ್ತು. ಆ ಆರೋಪಿಗಳಲ್ಲಿ 20 ಜನರಿಗೆ ಸೋಂಕು ದೃಢಪಟ್ಟಿದೆ.
ಕೊರೋನಾ ಪಾಸಿಟಿವ್ ಬಂದ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಜೈಲಿನ ಹೊರ ಭಾಗದಲ್ಲಿ ಓಡಾಡಿದ್ದ ಕೆಲ ಸಿಬ್ಬಂದಿಗೂ ತಪಾಸಣೆ ಮಾಡಿಸಲು ಸಿದ್ದತೆ ನಡೆಸಲಾಗಿದೆ. ಕಾರಾಗೃಹದಲ್ಲಿ ಐದು ಸಾವಿರಕ್ಕೂ ಹೆಚ್ಚು ಕೈದಿಗಳಿದ್ದು ಜೈಲಾಧಿಕಾರಿಗಳಲ್ಲಿ ಆತಂಕ ಬೇರೆ ಶುರುವಾಗಿದೆ. ಅಷ್ಟೇ ಅಲ್ಲದೆ ವಿಶೇಷ ಮಹಿಳಾ ಜೈಲಿನಲ್ಲಿ ಕೆಲಸ ಮಾಡಲು ಉಳಿದ ಸಿಬ್ಬಂದಿಗೆ ಭಯ ಶುರುವಾಗಿದ್ದು, ಅಧಿಕಾರಿಗಳು ಧೈರ್ಯ ಹೇಳಿದ್ದಾರೆ.
ಈ ನಡುವೆ ಜೈಲಿನಲ್ಲಿ ಎಲ್ಲಾ ಕೈದಿಗಳಿಗೂ ಬ್ಯಾರಕ್ ಬಿಟ್ಟು ಹೊರ ಬರದಂತೆ ಸೂಚಿಸಲಾಗಿದೆ.. ಹಾಗೇ ಸಿಬ್ಬಂದಿ ಸುಮ್ಮನೆ ವಿಚಾರಣಾಧಿನಾ ಕೈದಿಗಳೊಂದಿಗೆ ಚರ್ಚಿಸದಂತೆ ಖಡಕ್ ವಾರ್ನಿಂಗ್ ಕೊಡಲಾಗಿದೆ. ವಿಚಾರಣಾಧೀನ ಕೈದಿಗಳು ಉಳಿದಿದ್ದ ಬ್ಯಾರಕ್ ಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು,ಯಾರೂ ಆ ಕಡೆ ಹೋಗದಂತೆ ನಿರ್ಬಂಧಿಸಲಾಗಿದೆ. ಒಟ್ಟಿನಲ್ಲಿ ಯಾರನ್ನ ಯಾರು ಕಾಪಾಡಬೇಕೋ. ಯಾರನ್ನ ಯಾರು ರಕ್ಷಿಸಬೇಕೋ ಅನ್ನೋ ಪ್ರಶ್ನೆ ಎಲ್ಲ ಕಡೆ ಶುರುವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?