Featured
ತುಮಕೂರಲ್ಲಿ ಕಿಲ್ಲರ್ ಕೊರೊನಾಗೆ ಆರು ಮಂದಿ ಬಲಿ: ಒಂದೇ ದಿನ ದಾಖಲೆಯ 171 ಕೇಸ್,96 ಮಂದಿ ಡಿಸ್ಚಾರ್ಜ್
ರೈಸಿಂಗ್ ಕನ್ನಡ:
ತುಮಕೂರು:
ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆದಿದ್ದು ಒಂದೇ ದಿನ ಆರು ಮಂದಿ ಸಾವನಪ್ಪಿದ್ದಾರೆ.ದಿನದ 24 ಗಂಟೆಯಲ್ಲಿ ದಾಖಲೆಯ 171 ಹೊಸ ಕೇಸ್ ದಾಖಲಾಗಿ ಆತಂಕ ಹುಟ್ಟಿಸಿದೆ.
ಮಂಗಳವಾರ ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಜಿಲ್ಲೆಯ ಆರು ಮಂದಿ ಬಲಿಯಾಗಿದ್ದಾರೆ.ತುಮಕೂರು ತಾಲ್ಲೂಕು ಒಂದರಲ್ಲೆ ಇಂದು 5 ಮಂದಿ ಸಾವನ್ನಪ್ಪಿದ್ದಾರೆ. ತುಮಕೂರು ನಗರದ ಪಿ. ಎಚ್. ಕಾಲೋನಿಯಲ್ಲಿ 53 ವರ್ಷದ ವ್ಯಕ್ತಿ ಹಾಗೂ 52 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ, ಸದಾಶಿವನಗರದಲ್ಲಿ 78 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಹೆಬ್ಬೂರಿನಲ್ಲಿ 52 ವರ್ಷದ ವ್ಯಕ್ತಿ ಹಾಗೂ ಮುತ್ಸಾಂದ್ರದಲ್ಲಿ 58 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ತುರುವೇಕೆರೆ ಪಟ್ಟಣದಲ್ಲಿ ಖಜಾನಾ ಲೇ ಹೌಟ್ ನಲ್ಲಿ 65 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಉಸಿರಾಟ ಹಾಗೂ ಜ್ವರ ದಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೇ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಜಿಲ್ಲೆಯಲ್ಲಿ ಈವರೆಗೆ ಒಟ್ಟು 86 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,850 ಕ್ಕೆ ಏರಿಕೆಯಾಗಿದ್ದು ಸಾವಿನ ಸಂಖ್ಯೆ 86 ಕ್ಕೆ ಏರಿಕೆಯಾಗಿದೆ.
ತಾಲ್ಲೂಕುವಾರು ಹೊಸ ಪ್ರಕರಣಗಳು
ತುಮಕೂರು 55 , ಚಿ ನಾ ಹಳ್ಳಿ 8 , ಪಾವಗಡ 9, ತಿಪಟೂರು 16, ಮದುಗಿರಿ 8, ಕೊರಟಗೆರೆ 10, ಕುಣಿಗಲ್ 19, ತುರುವೇಕೆರೆ 5, ಶಿರಾ 27, ಗುಬ್ಬಿ 14, ಒಟ್ಟು 171 ಜನ ಸೋಂಕಿತರು ಇಂದು ಪತ್ತೆಯಾಗಿದ್ದಾರೆ.
96 ಜನ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಜಿಲ್ಲೆಯಲ್ಲಿ ಇಂದು 96 ಜನ ಸೋಂಕಿತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ 2,850 ಮಂದಿ ಸೋಂಕಿತರಲ್ಲಿ ಈವರೆಗೆ 1,789 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಉಳಿದ 975 ಮಂದಿ ಸಕ್ರಿಯ ಸೋಂಕಿತರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?