Featured
ತುಮಕೂರಿನಲ್ಲಿ ಹೆಮ್ಮಾರಿ ಕೊರೊನಾಗೆ ಮೂರು ಬಲಿ : 59 ಜನರಿಗೆ ಪಾಸಿಟಿವ್

ರೈಸಿಂಗ್ ಕನ್ನಡ:
ಪ್ರತಿನಿಧಿ, ಕೆ.ಆರ್ ಬಾಬು, ತುಮಕೂರು:
ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದ್ದು ಶುಕ್ರವಾರ ಮೂವರು ಸಾವನಪ್ಪಿದ್ದಾರೆ.ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ವರದಿಯಲ್ಲಿ ಮೂರು ಸಾವು, 59 ಹೊಸ ಪ್ರಕರಣಗಳು ದಾಖಲಾಗಿವೆ.
ತುಮಕೂರು ನಗರದ 70 ವರ್ಷದ ವೃದ್ಧ, ಕೊರಟಗೆರೆ ತಾಲ್ಲೂಕಿನಲ್ಲಿ 62 ವರ್ಷದ ವೃದ್ಧ ಮತ್ತು ಕುಣಿಗಲ್ ಹೌಸಿಂಗ್ ಬೋರ್ಡ್‍ನಾ 75 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

ಜಿಲ್ಲಾವಾರು ಪಾಸಿಟಿವ್ ವರದಿ
ತುಮಕೂರು ನಗರ 22, ಮಧುಗಿರಿ 8, ಗುಬ್ಬಿ 7, ತಿಪಟೂರು 7,
ಕುಣಿಗಲ್ 5, ತುರುವೇಕೆರೆ 5, ಚಿಕ್ಕನಾಯಕನಹಳ್ಳಿ 2, ಶಿರಾ 1,
ಪಾವಗಡ1, ಕೊರಟಗೆರೆ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಶುಕ್ರವಾರ 35 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ.430 ಸಕ್ರಿಯ ಪ್ರಕರಣಗಳಿವೆ.
11 ಜನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 29,659 ಜನರಿಗೆ ಈವರೆಗೂ ಕೊರೊನಾ ಟೆಸ್ಟ್ ಮಾಡಲಾಗಿದೆ. 25,930 ಜನರಿಗೆ ನೆಗೆಟಿವ್ ವರದಿ ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಸಾವನಪ್ಪಿದವರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯಾಧಿಕಾರಿ ನಾಗೇಂದ್ರಪ್ಪ ತಿಳಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?