Featured
ಕೊರೊನಾ ಜಿಲ್ಲಾ ಅಂಕಿ-ಅಂಶ ರದ್ದು – ಒಟ್ಟಾರೆಯಾಗಿ ಪ್ರತಿ ದಿನ ಸಂಜೆ ಬರಲಿದೆ ಕೊರೊನಾ ಲೆಕ್ಕಾಚಾರ..!

ರೈಸಿಂಗ್ ಕನ್ನಡ :
ಬೆಂಗಳೂರು :
ಕರ್ನಾಟಕದ ಪ್ರತಿ ಜಿಲ್ಲೆಗಳಲ್ಲಿ ಬಿಡುಗಡೆಮಾಡಲಾಗುತ್ತಿದ್ದ ಆರೋಗ್ಯ ಬುಲೆಟಿನ್ ಸ್ಥಗಿತಗೊಳ್ಳಲಿದೆ. ರಾಜ್ಯಮಟ್ಟದಲ್ಲಿ ಎಲ್ಲಾ ಜಿಲ್ಲೆಗಳ ಮಾಹಿತಿಯನ್ನು ಸೇರಿಸಿ ದಿನಕ್ಕೆ ಒಂದು ಬುಲೆಟಿನ್ ಪ್ರಕಟವಾಗಲಿದೆ.
ಆರೋಗ್ಯ ಇಲಾಖೆ ರಾಜ್ಯದ ಕೊರೊನಾ ವೈರಸ್ ಅಂಕಿ ಅಂಶಗಳ ಕುರಿತು ಒಂದು ಬುಲೆಟಿನ್ ಅನ್ನು ಪ್ರತಿದಿನ ಸಂಜೆ ಬಿಡುಗಡೆ ಮಾಡುತ್ತದೆ. ಆದರೆ, ಪ್ರತಿ ಜಿಲ್ಲೆಗಳು ಸಹ ಜಿಲ್ಲಾ ಮಟ್ಟದಲ್ಲಿ ಬುಲೆಟಿನ್ ನೀಡುತ್ತಿದ್ದವು. ಇನ್ನು ಜಿಲ್ಲಾ ಬುಲೆಟಿನ್ ಬರುವುದಿಲ್ಲ.
ಹೊಸ ಪ್ರಕರಣ, ಮರಣ ಹೊಂದಿದವರ ಸಂಖ್ಯೆ, ಸಕ್ರಿಯ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸಿ ಜಿಲ್ಲೆಗಳು 4 ಗಂಟೆ ಸುಮಾರಿಗೆ ಬುಲೆಟಿನ್ ಹೊರಡಿಸುತ್ತಿದ್ದವು. ಜಿಲ್ಲೆಗಳಿಂದ ಬರುವ ಮಾಹಿತಿ ಸಂಗ್ರಹಿಸಿ ರಾಜ್ಯಮಟ್ಟದ ಬುಲೆಟಿನ್ ಸಂಜೆ 7 ಗಂಟೆ ಸುಮಾರಿಗೆ ಬಿಡುಗಡೆ ಆಗುತ್ತಿತ್ತು. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬಿಡುಗಡೆ ಮಾಡುವ ಮಾಹಿತಿಯಲ್ಲಿ ಕೆಲವು ಬದಲಾವಣೆಗಳು ಆಗಿ ಗೊಂದಲ ಉಂಟಾಗುತ್ತಿತ್ತು.
ರಾಜ್ಯಮಟ್ಟದಲ್ಲಿಯೇ ಜಿಲ್ಲಾ ಮಟ್ಟದ ಮಾಹಿತಿಯನ್ನು ಪ್ರಕಟಿಸುವುದಾಗಿ ಸರ್ಕಾರ ಹೇಳಿದೆ. ಆದ್ದರಿಂದ, ಜಿಲ್ಲೆಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಬುಲೆಟಿನ್ ಸ್ಥಗಿತಗೊಳಿಸಲಿವೆ. ಪ್ರತಿ ದಿನ ಸಂಜೆ 7 ಗಂಟೆ ಸುಮಾರಿಗೆ ಪ್ರಕಟವಾಗುವ ರಾಜ್ಯ ಬುಲೆಟಿನ್ನಲ್ಲಿಯೇ ಜಿಲ್ಲೆಯಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪ್ರಕಟವಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?