Featured
ದೇಶಾದ್ಯಂತ ಮುಂದುವರೆದ ಕೊರೊನಾ ಮಹಾಸ್ಪೋಟ: 22 ಲಕ್ಷ ದಾಟಿದ ಕೇಸ್ : ಒಂದೇ ದಿನ ದಾಖಲೆಯ 1,007 ಸಾವು

ರೈಸಿಂಗ್ ಕನ್ನಡ :
ನವದೆಹಲಿ:
ದೇಶಾದ್ಯಂತ ಕೊರೊನಾ ಮಹಾಸ್ಫೋಟ ಆಗಿದ್ದು ಸೋಂಕಿತರ ಸಂಖ್ಯೆ 22 ಲಕ್ಷ ಗಡಿ ದಾಟಿದೆ. ಸಾವಿನಲ್ಲೂ ಕ್ರೂರಿ ಕೊರೊನಾ ಅಟ್ಟಹಾಸ ಮೆರೆದಿದೆ.
ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ದಿನಗಳಲ್ಲೆ 1 ಲಕ್ಷ ಕೊರೊನಾ ಸೋಂಕು ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 62,064 ಹೊಸ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22,15,075ಕ್ಕೆ ಏರಿದೆ.
ಇನ್ನು ಸಾವಿನಲ್ಲಿ ಕೊರೊನಾ ಶತಕ ಬಾರಿಸಿದೆ. ಕಳೆದ 24 ಗಂಟೆಯಲ್ಲಿ 1,007 ಮಂದಿ ಕೊನೆಯುಸಿರೆಳೆದಿದ್ದಾರೆ. ಒಟ್ಟು ಸಾವಿನ ಸಂಖ್ಯೆ 44,386ಕ್ಕೆ ಏರಿದೆ.
ದೇಶದಲ್ಲಿ ಒಟ್ಟು 6,34,945 ಸಕ್ರಿಯ ಪ್ರಕರಣಗಳಿವೆ. 15,35744 ಮಂದಿ ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ.ಕೊರೊನಾದಿಂದ ಹೆಚ್ಚು ಬಳಲುತ್ತಿರುವ ಮಹಾರಾಷ್ಟ್ರದಲ್ಲಿ ಭಾನುವಾರ ದಾಖಲೆಯ 12,822 ಹೊಸ ಕೇಸ್ ಪತ್ತೆಯಾಗಿದೆ. ತಮಿಳುನಾಡಲ್ಲಿ 5,994 ಮಂದಿಗೆ ಹೊಸ ಸೋಂಕು ಹಾಗೂ 119 ಮಂದಿ ಕೊನೆಯುಸಿರೆಳೆದಿದ್ದಾರೆ. ಆಂಧ್ರಪ್ರದೇಶದಲ್ಲಿ 10,080 ಪ್ರಕರಣ 97 ಮಂದಿ ಸಾವನಪ್ಪಿದ್ದಾರೆ
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?