Featured
ದೇಶಾದ್ಯಂತ 24 ಗಂಟೆಯಲ್ಲಿ 40,425 ಕೊರೊನಾ ಸೋಂಕು : ಸೋಂಕಿನಲ್ಲಿ ತನ್ನ ದಾಖಲೆಯನ್ನೇ ಮುರಿದ ಮಹಾರಾಷ್ಟ್ರ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 40,425 ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿದೆ.
ಕೊರೊನಾ ಆರ್ಭಟಕ್ಕೆ ಭಾನುವಾರ 618 ಮಂದಿ ಕೊನೆಯುಸಿರೆಳೆದಿದ್ದು ಒಟ್ಟು ಸಾವಿನ ಸಂಖ್ಯೆ 27,497 ಕ್ಕೆ ಏರಿಕೆಯಾಗಿದೆ. 3,90,459 ಪ್ರಕರಣಗಳು ಸಕ್ರಿಯವಾಗಿದ್ದು 7,00,086 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಕಿಲ್ಲರ್ ಕೊರೊನಾದಿಂದ ಅತಿ ಹೆಚ್ಚು ಹಾನಿಯಾಗಿರುವ ಮಹಾರಾಷ್ಟ್ರದ ಭಾನುವಾರ ಈ ಹಿಂದಿನ ಎಲ್ಲ ದಾಖಲೆಗಳನ್ನ ಮುರಿದಿದೆ. ಒಂದೇ ದಿನದಲ್ಲ 9 ಸಾವಿರ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 3,10,455 ಕ್ಕೆ ಏರಿದೆ. 258 ಮಂದಿ ಇತ್ತಿಚೆಗೆ ಸಾವನಪ್ಪಿದ್ದು ಒಟ್ಟು ಸಾವಿನ ಸಂಖ್ಯೆ 11,854ಕ್ಕೆ ಏರಿದೆ.
ಕೊರೊನಾದಿಂದ ಬಳಲಿರುವ ಎರಡನೇ ರಾಜ್ಯ ತಮಿಳುನಾಡು. 1,70,693 ಪ್ರಕರಣಗಳು ದಾಖಲಾಗಿವೆ. 50,297 ಸಕ್ರಿಯ ಪ್ರಕರಣಗಳಿದೆ.2,481 ಮಂದಿ ಬಲಿಯಾಗಿದ್ದಾರೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,22,793 ಸೋಂಕಿತರಿದ್ದಾರೆ.

16,031 ಸಕ್ರಿಯ ಪ್ರಕರಣಗಳಿವೆ. ಈಗಾಗಲೇ 1,03,134 ಮಂದಿ ಚೇತರಿಸಿಕೊಂಡಿದ್ದಾರೆ.3,628 ಮಂದಿ ಸಾವನಪ್ಪಿದ್ದಾರೆ.
You may like

ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ

ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?

ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!

ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?

ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್

3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?






















