Featured
ಕೋಟೆನಾಡಿನ ಪೊಲೀಸರಲ್ಲಿ ಮಹಾಮಾರಿಯ ಭೀತಿ- ನೂರಕ್ಕೂ ಹೆಚ್ಚು ಆರಕ್ಷರು ಕ್ವಾರಂಟೈನ್

ಚಿತ್ರದುರ್ಗ:
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೆ ಇಬ್ಬರು ಪೊಲೀಸರಿಗೆ ಕೊರೋನಾ ಧೃಡವಾಗಗಿದೆ. ಮಹಾಮಾರಿ ಕೊರೊನಾ ಪೋಲೀಸ್ ಇಲಾಖೆಯಲ್ಲೂ ಭೀತಿ ಸೃಷ್ಟಿಸಿದೆ. 30 ವರ್ಷದ DAR ಕಾನ್ಸ್ ಟೇಬಲ್ ಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಮತ್ತೊಂದು ಕಡೆಯಲ್ಲಿ ಹೊಸದುರ್ಗ ಪೊಲೀಸ್ ಠಾಣೆಯ 45 ವರ್ಷದ ಪೋಲೀಸ್ ಗೆ ಸೋಂಕು ತಗುಲಿದೆ. ಪೊಲೀಸ್ ಗೆಸ್ಟ್ ಹೌಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. DARನ DYSP ಕಚೇರಿ ಸೇರಿದಂತೆ ಕ್ವಾಟ್ರಸ್ ಆವರಣವನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ. ಸೋಂಕಿತ ಪೊಲೀಸ್ ವಾಸವಿದ್ದ ಕ್ವಾರ್ಟ್ರಸ್ ಸುತ್ತ ಸೀಲ್ ಡೌನ್ ಕೂಡ ಮಾಡಲಾಗಿದೆ.
ಇನ್ನೊಂದೆಡೆ ಹೊಸದುರ್ಗ ಪೊಲೀಸ್ ಠಾಣೆಯನ್ನು ಸ್ಯಾನಿಟೈಸೇಷನ್ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಹೊಸದುರ್ಗ ಠಾಣೆಯ PSI ಸೇರಿ 35 ಕ್ಕೂ ಹೆಚ್ಚು ಸಿಬ್ಬಂದಿಗಳು ಕ್ಯಾರಂಟೈನ್ ಆಗಿದ್ದಾರೆ. ಕಳೆದ ವಾರವೂ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಶ್ರೀರಾಂಪುರ ಠಾಣೆ ಪೇದೆಗೆ ಸೋಂಕಿನಿಂದ ಸೀಲ್ ಡೌನ್ ಮಾಡಿದ್ದರು . ಈಗ ಮತ್ತೊರ್ವ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಡವಾದ ಹಿನ್ನಲೆ ಮತ್ತೆ ಸೀಲ್ ಡೌನ್ ಮಾಡಲಾಗಿದೆ.
ಈ ಮಧ್ಯೆ ಚಿತ್ರದುರ್ಗ ಜಿಲ್ಲಾ ಪೊಲೀಸರಲ್ಲಿ ಕೊರೋನಾ ಆತಂಕ ಹೆಚ್ಚಾಗುತ್ತಿದೆ. 2 ದಿನಗಳ ಹಿಂದೆ ಚಿಕ್ಕಜಾಜೂರು ಠಾಣೆ ಪೇದೆಗೂ ಸೋಂಕು ದೃಡವಾಗಿತ್ತು. ಸೋಂಕು ದೃಡವಾದ ಹಿನ್ನಲೆ ಚಿಕ್ಕಜಾಜೂರು ಠಾಣೆಯನ್ನೂ ಸೀಲ್ ಡೌನ್ ಮಾಡಲಾಗಿತ್ತು. ದಿನೇ ದಿನೆ ಪೊಲೀಸರಿಗೆ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಆತಂಕ ಸೃಷ್ಠಿಯಾಗಿದೆ. ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಹೋಂ ಕ್ವಾರಂಟೈನ್ ಆಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?