Featured
ಯಾದಗಿರಿ ಲಾಕ್‌ಡೌನ್‌ಗೆ ಸೂಚನೆ – 1500 ಗಡಿಯತ್ತ ಕೊರೊನಾ ಸೋಂಕಿತರ ಸಂಖ್ಯೆ

ರೈಸಿಂಗ್ ಕನ್ನಡ :
ಯಾದಗಿರಿ:
ಮಹಾಮಾರಿ ಕೊರೊನಾ ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆ. ಬುಧವಾರ ಯಾದಗಿರಿ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗಲಿದೆ ಎಂದು ರೈಸಿಂಗ್ ಕನ್ನಡಕ್ಕೆ ಅಪಾರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ತಿಳಿಸಿದ್ದಾರೆ.
ಬರೋಬ್ಬರಿ ನಾಲ್ಕು ದಿನಗಳಲ್ಲಿ 300 ಕ್ಕೂ ಅಧಿಕ ಕೊರೊನಾ ಕೇಸ್ ಪತ್ತೆ ಆಗಿದ್ದು ಜಿಲ್ಲಾಡಳಿತಕ್ಕೆ ಆತಂಕ ತಂದಿದೆ. ಅದರಲ್ಲಿ ಪ್ರತಿ ದಿನವು ಕೂಡ ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ಇತರ ಕಡೆಯಿಂದ ಜನರು ಆಗಮಿಸುತ್ತಿದ್ದು ಮತ್ತಷ್ಟು ಕೊರೊನಾ ಸೋಂಕು ಹೆಚ್ಚಾಗ್ತಿದೆ. ಪರೀಕ್ಷೆ ಮಾಡಿಸಿಕೊಳ್ಳದೆ ತಮ್ಮೂರಿಗೆ ತೆರಳುತ್ತಿದ್ದು ಜಿಲ್ಲಾಡಳಿತಕ್ಕೆ ಭಾರೀ ತಲೆನೋವು ಉಂಟುಮಾಡಿದೆ.
ಜಿಲ್ಲೆಯಲ್ಲಿ ಒಟ್ಟು 1,450 ಕೊರೊನಾ ಸೋಂಕು ಪತ್ತೆಯಾಗಿದ್ದು, 925 ಜನರು ಗುಣಮುಖ, 515 ಸಕ್ರಿಯ ಪ್ರಕರಣಗಳಿವೆ ಎನ್ನಲಾಗಿದೆ. ಸೋಂಕು ತಡೆಗಟ್ಟಲು ನಾಳೆಯಿಂದ ಯಾದಗಿರಿ ಜಿಲ್ಲೆ ಸಂಪೂರ್ಣ ಲಾಕ್ಡೌನ್ ಇರಲಿದೆ. ಒಂದು ವಾರಗಳ ಕಾಲ ಅಂದ್ರೆ ಜುಲೈ 23 ವರೆಗೂ ಲಾಕ್ ಡೌನ್ ಇರಲಿದೆ.

ಜನರು ಅನಗತ್ಯ ರಸ್ತೆ ಮೇಲೆ ಓಡಾಟ ನಡೆಸದೆ ಮನೆಯಲ್ಲೆ ಇರಬೇಕು. ಯಾವುದೇ ಖಾಸಗಿ ವಾಹನಗಳು, ಅಟೋ ಸಂಚಾರವು ಇರುವುದಿಲ್ಲ. ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಎಲ್ಲವು ಬಂದ್ ಇರಲಿವೆ ಎಂದಿದ್ದಾರೆ ಜಿಲ್ಲಾಧಿಕಾರಿಗಳು. ಲಾಕ್ ಡೌನ್ ಹಿನ್ನೆಲೆ ಜನರು ವಾರದ ವರೆಗೆ ಬೇಕಾಗುವ ಅವಶ್ಯಕ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಕೊರೊನಾ ಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ವಾರದ ವರೆಗೆ ಲಾಕ್ ಡೌನ್ ನಿಯಮ ಪಾಲನೆ ಮಾಡುತ್ತಿದೆ. ಈಗಾಗಲೇ ದಿನವೊಂದು ಪೊಲೀಸ್ ಠಾಣೆ, ಕಚೇರಿ ಗಳು ಹಾಗೂ ಮನೆ, ಬಡಾವಣೆಗಳು ಸೀಲ್ ಡೌನ್ ಆಗ್ತಿವೆ. ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಜಿಲ್ಲಾಡಳಿತ ಲಾಕ್ ಡೌನ್ ಗೆ ಸಿದ್ದತೆ ಮಾಡಿಕೊಂಡಿದೆ.

You may like

ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ

ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್

ಗದಗದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬೀದಿ ನಾಟಕ ಕಲಾ ತಂಡ: ಜಿಲ್ಲಾಧಿಕಾರಿಗೆ ಮನವಿ

ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೊನಾ ಸೋಂಕು

ಯಾದಗಿರಿಯ ಚಂಡರಕಿ ಗ್ರಾಮದ ಅಭಿವೃದ್ಧಿ ಮರಿಚಿಕ್ಕೆ: ಗ್ರಾಮಸ್ಥರಿಂದ ಬಿಹಿಷ್ಕರದ ಬಿಸಿ

ಅನ್ಲಾಕ್ ನಂತರ ಮೈಲಾಪುರ ದೇವಸ್ಥಾನ ಓಪನ್: ನಾಲ್ಕು ತಿಂಗಳ ನಂತರ ಭಕ್ತರ ದರ್ಶನಕ್ಕೆ ಅವಕಾಶ
















