Featured
ಬೀದರ್‌ನಲ್ಲಿ ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ : ಸಿಟಿ ತೊರೆಯುತ್ತಿರುವ ಸ್ಥಳೀಯರು
![](https://risingkannada.com/wp-content/uploads/2020/07/bidar-1407-2.jpg)
ರೈಸಿಂಗ್ ಕನ್ನಡ :
ಪ್ರತಿನಿಧಿ : ವಿಶ್ವಕುಮಾರ್, ಬೀದರ್:
ರಾಜ್ಯದ ಮುಕುಟ, ಗಡಿಭಾಗ ಬೀದರ್ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲಾ ಸಾವಿನ ಸಂಖ್ಯೆಯಲ್ಲೂ ದಿನದಿಂದ ದಿನಕ್ಕೆ ಗಣನೀಯ ಏರಿಕೆ ಕಂಡಿದೆ. ಇದರ ಪರಿಣಾಮ ಗಡಿ ಭಾಗದ ಜನರು, ಜಿಲ್ಲೆಯನ್ನ ತೊರೆದು ಹೋಗುತ್ತಿದ್ದಾರೆ.
ಕರ್ನಾಟಕದ ಕಾಶ್ಮೀರ ಅಂದರೆ ಅದು ಬೀದರ್ ಜಿಲ್ಲೆ. ಜಿಲ್ಲೆಯಲ್ಲಿ ಆರಂಭದಲ್ಲಿ ನಿಯಂತ್ರಣದಲ್ಲಿದ್ದ ಕೊರೊನ ಮಹಾಮಾರಿ ದಿನ ಕಳೆದಂತೆ ಏರಿಕೆಯಾಗ ತೊಡಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,061 ಜನರಿಗೆ ಸೋಂಕು ದೃಢಪಟ್ಟಿದ್ದು, 53 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇತ್ತ ಇನ್ನು 366 ಪ್ರಕರಣಗಳು ಸಕ್ರಿಯವಾಗಿದ್ದು ಜನ ಆತಂಕದಲ್ಲೆ ಬದುಕುವಂತಾಗಿದೆ.ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದ ಜಿಲ್ಲೆಗಳ ಪಟ್ಟಿಯಲ್ಲಿ ಮೂರನೆ ಸ್ಥಾನದಲ್ಲಿದೆ.. ಹೀಗಾಗಿ ಜಿಲ್ಲೆಯ ಜನತೆಯಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಮನೆ ಮಾಡಿದೆ.ಹೀಗಾಗಿ ಜನ ತಮ್ಮ ಜೀವ ರಕ್ಷಣೆಗಾಗಿ ಊರನ್ನ ಬಿಟ್ಟು ಹೋಗಲು ಮುಂದಾಗಿದ್ದಾರೆ.
ನಗರದ ಕೆಲ ಭಾಗದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಜನ ಇವತ್ತಿನ ಪರಿಸ್ಥಿತಿಯಲ್ಲಿ ತಮ್ಮ ಜೀವ ಕೈಯಲ್ಲಿ ಹಿಡಿದು ಬದುಕು ಮಾಡುವಂತಾಗಿದೆ. ಜೀವ ಉಳಿದರೆ ಮುಂದೆ ಹೇಗೋ ಬದುಕು ಮತ್ತೆ ಕಟ್ಟಿಕೊಳ್ಳಬಹುದು ಅಂತಾ ಜನತೆ ಈಗ ಊರು ಬಿಟ್ಟು ಬೇರೊಂದು ಕಡೆ ಮುಖಮಾಡಿದ್ದಾರೆ.
ಇತ್ತ ರಾಜ್ಯದಲ್ಲಿಕೋರೊನಾ ಸೊಂಕಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೊಷಿಸಿದೆ. ಕೇಂದ್ರಸರ್ಕಾರ ಘೋಷಣೆಮಾಡಿದ 30 ಡೆಂಜರ್ ಜಿಲ್ಲೆಗಳಲ್ಲಿ ಬೀದರ್ ಜಿಲ್ಲೆ ಸಹ ಒಂದಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಬೀದರ್ ಜಿಲ್ಲೆ ಬಗ್ಗೆ ನಿರ್ಲಕ್ಷ್ಯ ತೊರಿಸಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳನ್ನ ಲಾಕ್ ಡೌನ್‌ಮಾಡಿದೆ, ಇದು ಜಿಲ್ಲೆಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ.
ಜಿಲ್ಲೆಯ ಜನತೆ ಲಾಕ್ ಡೌನ್ ಗೆ ಬೆಂಬಲ ಸೂಚಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಲಾಕ್ ಡೌನ್ ಘೋಷಣೆಗೆ ಮುಂದಾಗದೆ ಇರೋದು ವಿಪರ್ಯಾಸವಾಗಿದೆ. ಇತ್ತ ಮಹಾರಾಷ್ಟ್ರ ಅತ್ತ ತೆಲಂಗಾಣ ರಾಜ್ಯಗಳಲ್ಲೂ ಬೀದರ್ ಜಿಲ್ಲೆಯ ಜನತೆ ತಮ್ಮ ಹಸಿವಿನ ಜೋಳಿಗೆ ತುಂಬಿಸಿ ಕೊಳ್ಳಲು ಹೋದವರ ಬದುಕು ಸಹ ಮೂರಾಬಟ್ಟೆಯಾಗಿದೆ.
ಎರಡು ರಾಜ್ಯಗಳಲ್ಲೂ ಕೊರೊನಾ ಮಹಾಮಾರಿ ಹೆಚ್ಚಾಗಿದ್ದು ಇತ್ತ ತಮ್ಮ ಊರುಗಳಿಗೂ ಬಾರದಂತಾಗಿದೆ.ಬಂದರೆ ಇತ್ತವು ಮಹಾಮಾರಿ ಶರವೇಗದಲ್ಲಿ ಬಹರಡುತ್ತಿದ್ದು, ಜನತೆ ಮತ್ತಷ್ಟು ಕಂಗಾಲಾಗದ್ದಾರೆ. ಈಗಲಾದರು ರಾಜ್ಯಸರ್ಕಾರ ಬೀದರ್ ಜಿಲ್ಲೆಯನ್ನ ಲಾಕ್ ಡೌನ್ ಮಾಡುತ್ತಾ ಎಂದು ಕಾದು ನೋಡಬೇಕಿದೆ.
You may like
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ