Featured
ಭಾರತದಲ್ಲಿ ಕೊರೊನಾ ಲಸಿಕೆ : ಸ್ವದೇಶಿ ‘ಕೋವಾಕ್ಸಿನ್’ ಮೊದಲ ಮಾನವ ಪ್ರಯೋಗಕ್ಕೆ ಚಾಲನೆ
![](https://risingkannada.com/wp-content/uploads/2020/07/coronavirus-4833616_640.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ಹೆಮ್ಮಾರಿ ಕೊರೊನಾಗೆ ವಿಶ್ವದ ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಮತ್ತು ರಷ್ಯಾ ದೇಶ ಲಸಿಕೆ ಕಂಡು ಹಿಡಿದಿವೆ ಎನ್ನುವ ಸಿಹಿ ಸುದ್ದಿ ಸಿಕ್ಕಿದ ಬೆನ್ನಲ್ಲೇ ನಮ್ಮ ಭಾರತದಲ್ಲಿ ಸ್ವದೇಶಿ ನಿರ್ಮಿತ ‘ಕೋವಾಕ್ಸಿನ್’ ಔಷಧಿಯನ್ನ ದೆಹಲಿಯ ಅಖಿಲ ಭಾರತ ವೈದ್ಯಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) 30 ವರ್ಷದ ಯುವಕನ ಮೇಲೆ ಪ್ರಯೋಗ ಮಾಡಿದೆ.
ಮಾನವ ಪ್ರಯೋಗದ ಮೊದಲ ಹಂತ ಇದಾಗಿದ್ದು ಇತ್ತೀಚೆಗಷ್ಟೆ ಏಮ್ಸ್ ನೈತಿಕ ಸಮಿತಿ ಅನುಮೋದನೆ ನೀಡಿತ್ತು. ಕೋವಾಕ್ಸಿನ್ ಅನ್ನ ಹೈದ್ರಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಸಿದ್ಧಪಡಿಸಿದೆ. ದೆಹಲಿಯ ನಿವಾಸಿಯೊಬ್ಬರಿಗೆ ಕೋವಾಕ್ಸಿನ್ ಈಗಾಗಲೇ ನೀಡಲಾಗಿದೆ ಎಂದು ಅಧ್ಯಯನದ ತನಿಖಾಧಿಕಾರಿ ಪ್ರೊಫೆಸರ್ ಡಾ.ಸಂಜಯ್ ರೈ ಮಾಹಿತಿ ನೀಡಿದ್ದಾರೆ.
![](https://risingkannada.com/wp-content/uploads/2020/07/COVID_VACCINE_coronavirus_Oxford_vaccine.jpeg)
ದೆಹಲಿಯ 30 ವರ್ಷದ ಯುವಕನಿಗೆ ಕೋವಾಕ್ಸಿನ್ ಔಷಧಿಯನ್ನ ನೀಡಲಾಗಿತ್ತು. ಎರಡು ಗಂಟೆಗಳ ಕಾಲ ಸೂಕ್ಷ್ಮವಾಗಿ ಗಮನಿಸಲಾಯಿತು. ಆತನಿಗೆ ಯಾವುದೇ ಅಸ್ವಸ್ಥತೆ ಕಂಡುಬರಲಿಲ್ಲ. ಆರೋಗ್ಯ ಸಾಮಾನ್ಯವಾಗಿತ್ತು ಎಂದಿದ್ದಾರೆ. ಆ ಯುವಕನ ಆರೋಗ್ಯದ ಮೇಲೆ ಇನ್ನು ಒಂದು ವಾರದ ಕಾಲ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಔಷಧ ಪ್ರಯೋಗಕ್ಕಾಗಿ ಸ್ವಯಂ ಸೇವಕರು ತಾವಾಗಿಯೇ ಮುಂದೆ ಬಂದಿದ್ದಾರೆ. 3500ಕ್ಕೂ ಹೆಚ್ಚು ಸ್ವಯಂ ಸೇವಕರು ಹೆಸರುಗಳನ್ನ ನೋಂದಾಯಿಸಿಕೊಂಡಿದ್ದಾರೆ. ಸದ್ಯ 22 ವಿಷಯಗಳ ಮೇಲೆ ತಪಾಸಣೆ ನಡೆಸಲಾಗಿದೆ. ಇವರುಗಳ ಆರೋಗ್ಯದ ಫಲಿತಾಂಶದ ನಂತರ ಅವರ ಮೇಲೆ ಪ್ರಯೋಗ ಮಾಡುವುದಾಗಿ ವೈದ್ಯ ಸಂಜಯ್ ರೈ ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?