Featured
ದೇಶಾದ್ಯಂತ ಕೊರೊನಾಸುರನ ಘರ್ಜನೆ: 8 ಲಕ್ಷ ದಾಟಲಿದೆ ಸೋಂಕಿತರ ಸಂಖ್ಯೆ..!
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 26,506 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದ ಬೆನ್ನ್ಲಲೆ ಇಡೀ ಭಾರತದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ದಾಟಬಹುದೆಂದು ವರದಿಯೊಂದು ಎಚ್ಚರಿಸಿದೆ.
ಸದ್ಯ ಭಾರತದಲ್ಲಿ 2.76 ಲಕ್ಷ ಪ್ರಕರಣಗಳು ಸಕ್ರಿಯವಾಗಿದ್ದು 4.95 ಲಕ್ಷ ಮಂದಿ ಆಸ್ಪತ್ರೆಯಿಂದ ಚೇತರಿಸಿಕೊಂಡಿದ್ದಾರೆ.
ಅಮೇರಿಕಾ, ಬ್ರೆಜಿಲ್ ನಂತರ ಕೊರೊನಾದಿಂದ ಅತಿ ಹೆಚ್ಚು ಬಳಲಿದ ರಾಷ್ಟ್ರ ಭಾರತ ಆಗಿದೆ.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲ್ಲೇ ಇದ್ದು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ರೀತಿಯಲ್ಲಿ ಸೋಂಕಿನ ಸುನಾಮಿಗೆ ಪತರಗುಟ್ಟಿವೆ. ಅತಿ ಹೆಚ್ಚು ಬಳಲಿರುವ ರಾಜ್ಯವೆಂದರೆ ಅದು ಮಹಾರಾಷ್ಟ್ರ 2.3 ಲಕ್ಷ ಸೋಂಕಿತರಿದ್ದು 9,667 ಮಂದಿ ಸಾವನಪ್ಪಿದ್ದಾರೆ.
ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 32,362 ಮಂದಿಗೆ ಸೋಂಕಿದ್ದು 862 ಜನ ಸಾವನಪ್ಪಿದ್ದಾರೆ.
ಯಾವೆಲ್ಲಾ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಬಹುದು ಅಂತಾ ನೋಡುವುದಾದರೆ ಕರ್ನಾಟಕದಲ್ಲಿ 53,546 ಮಂದಿಗೆ ಸೋಂಕಿದ್ದು ಆಗಸ್ಟ್ 4ರ ವೇಳೆಗೆ 69,387 ಮಂದಿ ಸೋಂಕಿಗೆ ಒಳಗಾಗಬಹುದೆಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರ 1,43,181 ಪ್ರಕರಣಗಳಿದ್ದು ಆಗಸ್ಟ್1 ರ ವೇಳೆಗೆ ಮತ್ತ 2,31,832 ಪ್ರಕರಣಗಳು ದಾಖಲಾಗಬಹುದು.
ತಮಿಳುನಾಡಿನಲ್ಲಿ 53,117 ಪ್ರಕರಣಗಳಿದ್ದು ಜುಲೈ 20ರ ವೇಳೆಗೆ 68,379 ಮಂದಿಗೆ ಸೋಂಕು ತಗುಲಬಹುದು.
ಆಂಧ್ರ ಪ್ರದೇಶದಲ್ಲಿ 34, 632 ಪ್ರಕರಣಗಳಿದ್ದು ಆಗಸ್ಟ್ 16ರ ವೇಳೆಗೆ 43,313 ಮಂದಿಗೆ ಸೋಂಕು ಬರಬಹುದೆಂದು ಅಂದಾಜಿಸಲಾಗಿದೆ.
ತೆಲಾಂಗಣದಲ್ಲಿ 24,232 ಪ್ರಕರಣಗಳಿದ್ದು ಆಗಸ್ಟ್ 16ರ ವೇಳೆಗೆ 26,883 ಪ್ರಕರಣಗಳು ದಾಖಲಾಗಿವೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ