Featured
ಕೊರೊನಾದಿಂದ ಮದುಮಗ ಬಲಿ – ಮದುವೆಗೆ ಬಂದಿದ್ದ 100 ಮಂದಿಗೆ ಸೋಂಕು..!
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಮದುವೆ ಸಂಭ್ರಮವೊಂದು, ಇಡೀ ಗ್ರಾಮವನ್ನ ಸಂಕಷ್ಟಕ್ಕೆ ಸಿಲುಕಿಸಿದ ಘಟನೆ ಬಿಹಾರದದಲ್ಲಿ ನಡೆದಿದೆ. ಈ ಮದುವೆ ಬಗ್ಗೆ ಇದೀಗ ಬಿಹಾರ ಸರ್ಕಾರವೇ ತಲೆಕೆಡಿಸಿಕೊಂಡು ಕೂತಿದೆ. ಹೌದು ಆಗಿದ್ದು ಇಷ್ಟೆ, ಬಿಹಾರದ ಪಲಿಗಂಜ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ 95 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪಾಟ್ನಾದ ಗುರುಗ್ರಾಮದಲ್ಲಿ ಸಾಫ್ಟ್‌ವೇರ್ ಎಂಜನಿಯರ್ ಆಗಿದ್ದ ಯುವಕ ವಿವಾಹಕ್ಕೂ ಪೂರ್ವ ಭಾರೀ ಜ್ವರದಿಂದ ಬಳಲುತ್ತಿದ್ದ. ಆದ್ರೂ ಲೆಕ್ಕಸಿದ ಮನೆಯವರು ಮದುವೆಯನ್ನ ಮಾಡಿ ಮುಗಿಸಿದ್ರು. ವಿವಾಹದ ಬಳಿಕ ಮತ್ತಷ್ಟು ಅನಾರೋಗ್ಯ ಪೀಡಿತನಾದ ಆತ ಮೃತಪಟ್ಟ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಜನ, ಕೋವಿಡ್ ಪರೀಕ್ಷೆ ನಡೆಸದೆ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ರು.
ಈ ವಿಚಾರ ಸ್ಥಳೀಯ ಆಡಳಿತದ ಗಮನಕ್ಕೆ ಬಂದಾಗ ಎಚ್ಚೆತ್ತುಕೊಂಡಿದ್ದಾರೆ. ಮದುಮಗನ ನಿಕಟ ಸಂಬಂಧಿಕರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಪೈಕಿ 15 ಜನರಿಗೆ ಕೊರೊನಾ ತಗುಲಿರುವುದು ಜೂನ್ 15 ರಂದು ದೃಢಪಟ್ಟಿತ್ತು.
ಇದಾದ ಬಳಿಕ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನ ಪರೀಕ್ಷೆಗೆ ಒಳಪಡಿಸಿದಾಗ, ಸುಮಾರು 80 ಮಂದಿಗೆ ಸೋಂಕು ಬಂದಿರೋದು ದೃಢಪಟ್ಟಿದೆ. ಈ ಪ್ರಕರಣ ಇದೀಗ ಇಡೀ ಬಿಹಾರವನ್ನ ಕಾಡುತ್ತಿದೆ. ಪಲಿಗಂಜ್ ಗ್ರಾಮದಲ್ಲಿ ಜನ ಮನೆಬಾಗಿಲು ತೆರೆಯೋಕು ಹೆದರುತ್ತಿದ್ದಾರೆ. ಒಂದು ಮನೆಯವರು ಮಾಡಿದ ತಪ್ಪಿಗೆ ಇದೀಗ ಸಂಪೂರ್ಣ ಗ್ರಾಮವೇ ಸೀಲ್‌ಡೌನ್ ಆಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?