ರಾಜ್ಯ
ಕೊರೊನಾ ವಿರುದ್ಧ ಯೋಗಾ ಅಭಿಯಾನ
![](https://risingkannada.com/wp-content/uploads/2020/06/WhatsApp-Image-2020-06-20-at-1.14.52-PM.jpeg)
ರೈಸಿಂಗ್ ಕನ್ನಡ ವೆಬ್ :
ಬೆಂಗಳೂರು :
ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ ಮತ್ತು ಆಚಾರ್ಯ ಯೋಗ ಯೂತ್ ಕ್ಲಬ್ ಜಂಟಿಯಾಗಿ ಕೊರೋನಾ ಮತ್ತು ಯೋಗ ಜಾಗೃತಿ ಜಾಥಾ ಆಯೋಜಿಸಿತ್ತು. ಜಾಥಾದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಮೊದಲು ಟೆಂಪರೇಚರ್ ಚೆಕ್ ಮಾಡಿ, ನಂತರ ಸ್ಯಾನಿಟೈಸರ್, ಗ್ಲೌಸ್ ಹಾಗೂ ಮಾಸ್ಕ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಚೀನಾ ಗಡಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಯೋಗ ಕೇಂದ್ರಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಯೋಗ ಮಾಡಿ ರೋಗ ಮುಕ್ತರಾಗಿ ಎಂದು ಕಾಂಗ್ರೆಸ್ ಮುಖಂಡರಾದ ಎಂ ರಾಜ್ ಕುಮಾರ್ ಸಂದೇಶ ನೀಡಿದ್ರು. ಪ್ರಸ್ತುತ ಸನ್ನಿವೇಷದಲ್ಲಿ ಸಾಮಾಜಿಕ ಅಂತರ ಎಷ್ಟು ಮುಖ್ಯ ಅನ್ನೋದನ್ನ ಬಿಬಿಎಂಪಿ ಸದಸ್ಯರಾದ ನಳಿನಿ ಎಂ ಮಂಜು ಅವರು ತಿಳಿಸಿಕೊಟ್ರು. ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸುವುದು ತುಂಬಾ ಮುಖ್ಯವಾಗಿದೆ ಎಂದು ಶ್ರೀ ರಾಜರಾಜೇಶ್ವರಿ ವಿದ್ಯಾ ಶಾಲೆಯ ಅಧ್ಯಕ್ಷರಾದ ಶ್ರೀ ಗೋಪಾಲನ್ ಅವರು ಹೇಳಿದರು. ಈ ಜಾಗೃತಿ ನಡಿಗೆಯನ್ನು ತುಂಬ ವ್ಯವಸ್ಥಿತವಾಗಿ ಹಾಗೂ ಎಲ್ಲಾ ತರಹದ ಮುಂಜಾಗರೂಕತೆಯನ್ನು ತೆಗೆದುಕೊಂಡು ನಡೆಸಿರುವುದು ತುಂಬಾ ಸಂತಸ ತಂದಿದೆ ಎಂದು ಗಾರ್ಡನ್ ಸಿಟಿ ಕೋಪರೇಟಿವ್ ಸೊಸೈಟಿಯ ಚೇರ್ಮೆನ್ ಆದ ಶ್ರೀ ಮೋಹನ್ .ಕೆ ಅವರು ನುಡಿದರು.
ಬಿಜೆಪಿ ಮುಖಂಡರಾದ ಶಶಿಕಾಂತ್ ರಾವ್, ಜಗದೀಶ್ ಆರ್ ಚಂದ್ರ, ರಾಜರಾಜೇಶ್ವರಿ ಅಸೋಸಿಯೇಷನ್ ಯೂತ್ ಅಧ್ಯಕ್ಷರಾದ ವೀರು ರಜಪೂತ, ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಕಾರ್ಯದರ್ಶಿಗಳಾದ ರಮೇಶ್ ಶ್ರೀಮತಿ ಹಾಗೂ ಆಚಾರ್ಯ ಯೋಗ ಯೂತ್ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಕೆ.ಎಸ್ ಮೋಹನ್ ಕುಮಾರ್ ಹಾಗೂ ಕಾರ್ಯದರ್ಶಿಯವರಾದ ರಾಜೇಶಾಚಾರಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಯೋಗ ಜಾಗೃತಿ ನಡಿಗೆಯಲ್ಲಿ ಸುಮಾರು 60 ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಾಥಾದಲ್ಬಿಲಿ ಬಿಎಂಪಿ ಕೌನ್ಸಿಲರ್ ಶ್ರೀಮತಿ ನಳಿನಾ ಎಂ ಮಂಜು, ಕಾಂಗ್ರೆಸ್ ಮುಖಂಡರಾಜ ಎಂ. ರಾಜಕುಮಾರ್, ಬಿಜೆಪಿ ಮುಖಂಡರಾದ ಜಗದೀಶ್ ಸೇರಿಂದತೆ ಸಾಕಷ್ಟು ಜನಪ್ರತಿನಿಧಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.
You may like
ಶ್ರೀರಾಮನ 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿಯಿಂದ ರಾಮರಾಜ್ಯ ನಿರ್ಮಾಣ
ಟಾಸ್ ಗೆದ್ದ ಬೆಂಗಳೂರು ಟೀಂ, ಆರ್ಸಿಬಿ ಪ್ಲೇಯಿಂಗ್ 11ನಿಂದ ಸಿರಾಜ್-ಮ್ಯಾಕ್ಸಿ ಔಟ್!
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಪೊಲೀಸರ ವಶಕ್ಕೆ!
ಹಾರ್ದಿಕ್ ಪಾಂಡ್ಯಗೆ ಬ್ಯಾಟ್ ಹಿಡಿಯಲು ಪಾಠ ಹೇಳಿದ ಅನಿಲ್ ಕುಂಬ್ಳೆ!
ಬಾಲಕಿ ದತ್ತು ವಿಚಾರ : ಸೋನು ಶ್ರೀನಿವಾಸಗೌಡ ಅರೆಸ್ಟ್