ಟಾಪ್ ನ್ಯೂಸ್
ಸಂವಿಧಾನ 75: ಅರ್ಥಗರ್ಭಿತ ಆಚರಣೆಗೆ ವಿಚಾರಗೋಷ್ಠಿಗಳು
ಅರ್ಥಗರ್ಭಿತವಾಗಿ ಸಂವಿಧಾನ ಐಕ್ಯತಾ ಸಮಾವೇಶ ಮೂಡಿ ಬರಲು ವಿವಿಧ ಕಾರ್ಯಕ್ರಮಗಳನ್ನ ರೂಪಿಸಲಾಗಿದೆ. ಪ್ರಮುಖವಾಗಿ ಯುವ ಜನತೆಯಲ್ಲಿ ಅರಿವು ಮೂಡಿಸಲು ವಿಶೇಷ, ಗೋಷ್ಠಿಗಳನ್ನ ಆಯೋಜಿಸಲಾಗಿದೆ.
ಫೆಬ್ರವರಿ 24ರಂದು ಮಧ್ಯಾಹ್ನ 2 ಗಂಟೆ ಮೊದಲ ಸೆಮಿನಾರ್ ಆರಂಭವಾಗಲಿದ್ದು, 21ನೇ ಶತಮಾನದಲ್ಲಿ ಸಾಂವಿಧಾನಿಕತೆ ಮತ್ತು ಪ್ರಜಾಪ್ರಭುತ್ವ ವಿಚಾರವಾಗಿ ಪ್ರೋ. ಗೋಪಾಲ್ ಗುರು, ಪ್ರೋ. ಸುಧೀರ್ ಕೃಷ್ಣಸ್ವಾಮಿ, ಪ್ರೋ ತರುನಬ್ ಖೈತಾನ್, ಪ್ರೋ. ನಂದಿನಿ ಸುಂದರ್ ಮಂಡಿಸಲಿದ್ದಾರೆ.
ಇನ್ನು ಮಧ್ಯಹ್ನಾ 3.30ಕ್ಕೆ ಸಮಾನತೆ ಮತ್ತು ಸಮತೆಯನ್ನು ಖಾತ್ರಿ ಪಡಿಸುವುದರ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಪ್ರೋ.ಸುಖದೇವ್ ತೊರಟ್, ಮಿಸ್. ಜಯನಾ ಕೊಥಾರಿ, ಪ್ರೋ. ಸಂಜಯ್ ಜೈನ್, ಪ್ರೋ. ರೋಚನಾ ಭಾಜ್ಪೈ ಹಾಗೂ ಪ್ರೋ. ಮೀನಾ ಥಂಡಾ ಮಂಡಿಸಲಿದ್ದಾರೆ.
ಇನ್ನು ಸಂಜೆ 5 ಗಂಟೆಗೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪುನರುಚ್ಚರಿಸುವ ವಿಚಾರವಾಗಿ ಡಾ. ಗೋವಿಂದ ರಾವ್, ಪ್ರೋಫೆಸರ್ ಗಳಾದ ಖಾಮ್ ಖಾನ್, ಅಶುತೋಷ್ ವರ್ಷ್ಣೆ, ಶ್ರೀಮತಿ ಯಾಮಿನಿ ಅಯ್ಯರ್ ಮಂಡಿಸಲಿದ್ದಾರೆ.ಇನ್ನುಳಿದಂತೆ ಸಂವಿಧಾನ ಕಲ್ಯಾಣ ಮತ್ತು ಅಭಿವೃದ್ದಿ, ಕರ್ನಾಟಕದಲ್ಲಿನ ಅಭಿವೃದ್ದಿಯ ದೃಷ್ಟಿಕೋನ ಹಾಗೂ ಪ್ರಜಾಪ್ರಭುತ್ವ ಮತ್ತು ಎಲ್ಲರನ್ನೂ ಒಳಗೊಂಡ ಕರ್ನಾಟಕ ವಿಚಾರ ಕುರಿತಂತೆ 20ಕ್ಕೂ ಹೆಚ್ಚು ಪ್ರೊಫೆಸರ್ ಗಳು, ತಜ್ಞರು ವಿಚಾರಗೋಷ್ಠಿ ಮಂಡಿಸಲಿದ್ದಾರೆ. ಒಟ್ಟು ನಾಲ್ಕು ವಿಚಾರಗೋಷ್ಠಿಗಳು ನಾಲ್ಕು ಸ್ಥಳಗಳಲ್ಲಿ ಆಯೋಜಿಸಲಾಗಿದೆ.
ಎರಡನೇ ದಿನ ಅಂದ್ರೆ, ಫೆಬ್ರವರಿ 25ರಂದು ಸಮಾರೋಪದ ದಿನ ಕೂಡ ಬೆಳಿಗ್ಗೆ 9.30ರಿಂದಲೇ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ವಿಚಾರಗೋಷ್ಠಿ ಮತ್ತು ಸಂವಾದ ನಡೆಯಲಿದೆ. ಪ್ರಜಾಪ್ರಭುತ್ವಕ್ಕೆ ಸಾಂಸ್ಥಿಕ ಸುರಕ್ಷತೆಗಳು, ಆದಾಯದ ಅಸಮಾನತೆ ಮತ್ತು ಸಾರ್ವತ್ರಿಕ ಮೂಲ ಆದಾಯ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು, ಹಾಗೂ ಪ್ರಜಾಪ್ರಭುತ್ವ ಮತ್ತು ಮತದಾನ ವಿಚಾರ ಕುರಿತಂತೆ ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ, ಮೊಯ್ಲಿ, ಪತ್ರಕರ್ತ ದಿನೇಶ್ ಅಮೀನಮಟ್ಟು, ಪ್ರಶಾಂತ್ ಭೂಷಣ್, ಡಾ.ಎಸ್ ವೈ ಖುರೇಷಿ ಸೇರಿದಂತೆ ಸುಮಾರು 30ಕ್ಕೂ ತಜ್ಞರು, ವಿಚಾರವಂತರು, ವಿಷಯಗಳು ಕುರಿತು ಗೋಷ್ಠಿ ನಡೆಸಲಿದ್ದಾರೆ.
ಇನ್ನು ಎರಡನೇ ಸೆಮಿನಾರ್ ಬೆಳಿಗ್ಗೆ 11.30ಕ್ಕೆ ಆರಂಭವಾಗಲಿದ್ದು, ಸಾಂವಿಧಾನಿಕ ಸಂಸ್ಕೃತಿ ಮತ್ತು ಪ್ರಜ್ಞೆ ರೂಪಿಸುವಿಕೆ ಬಗ್ಗೆ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಸಕಾರಾತ್ಮಕ ಕ್ರಮಗಳ ಕುರಿತು ಮತ್ತು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದ ಹೆಜ್ಜೆಗುರುತುಗಳು ಹಾಗೂ ಯುವಜನತೆ, ಉದ್ಯೋಗ, ಮತ್ತು ರಾಷ್ಟ್ರ ನಿರ್ಮಾಣದ ಆಯಾಮಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?