Featured
ಸೈಕಲ್ ಏರಿದ ಕಾಂಗ್ರೆಸ್ ನಾಯಕರು- ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಜಾಥಾ- ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ
![](https://risingkannada.com/wp-content/uploads/2020/06/Siddu-CYCLE.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ದೇಶದಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸೈಕಲ್ ಜಾಥಾ ನಡೆಸಿತು. ತೈಲ ಕಂಪನಿಗಳು ಸತತವಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಕೆ ಮಾಡುತ್ತಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ತೈಲ ಕಂಪನಿಗಳು ಮಾತ್ರ ಬೆಲೆ ಏರಿಸುತ್ತಲೆ ಇವೆ. ಪೆಟ್ರೋಲ್, ಡಿಸೇಲ್ ಬೆಲೆ ಸೋಮವಾರವೂ ಏರಿಕೆ ಕಂಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮನೆಯ ಅಂಗಳದಲ್ಲೇ ಸೈಕಲ್ ಓಡಿಸಿದ್ರು. ಸಿದ್ಧರಾಮಯ್ಯಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಹಾಗೂ ಮಾಜಿ ಶಾಸಕ ಚೆಲುವರಾಯಸ್ವಾಮಿ ಸಾಥ್ ನೀಡಿದ್ರು.
1974ರಿಂದ ಸೈಕಲ್ ಹೊಡೆದಿರಲಿಲ್ಲ. ಈಗ ಸೈಕಲ್ ಓಡಿಸ್ತಾ ಇರೋದು ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಇದ್ದರೂ ಜನಗಳ ಕೈಯಿಂದ ಸುಲಿಗೆ ಮಾಡ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರಲ್ ಗೆ 130 ಡಾಲರ್ ಇದ್ರೂ, ಸರಕಾರ ತೈಲ ಬೆಲೆ ಕಡಿಮೆ ಮಾಡ್ತಿಲ್ಲ. ನನ್ನ ಪ್ರಕಾರ ಪೆಟ್ರೋಲ್ ಗೆ ಲೀಟರ್ಗೆ 25 ರೂ ಮಾಡಬೇಕಾಗಿತ್ತು. ಮನಮೋಹನ್ ಸಿಂಗ್ ಸರ್ಕಾರ ಸಬ್ಸಿಡಿ ಕೊಟ್ಟಿತ್ತು. ಈಗ ಈ ಸರ್ಕಾರ ಯಾವುದೂ ಕೊಟ್ಟಿಲ್ಲ. ಸಾಮನ್ಯ ಜನರ ಜೀವನ ದುಬಾರಿಯಾಗಿದೆ. ರೈತರಿಗೆ ಹಾಗೂ ಇಂಡಸ್ಟ್ರೀಸ್ ಗಳಿಗೆ ದುಬಾರಿಯಾಗಿದೆ. ಕೋವಿಡ್ ಇದ್ರು ಕಳೆದ 10 ದಿನಗಳಿಂದ 11 ರೂ ಹೆಚ್ಚಿಸಿದ್ದಾರೆ.
- ಸಿದ್ಧರಾಮಯ್ಯ. ಮಾಜಿ ಮುಖ್ಯಮಂತ್ರಿ
ನರೇಂದ್ರ ಮೋದಿ ಸರ್ಕಾರ ಬಡವರ ಮೇಲೆ ಬರೆ ಹಾಕ್ತಿದೆ. ಕೇಂದ್ರ ಸರ್ಕಾರದ ಕಚೇರಿ ಮೇಲೆ ಪ್ರತಿಭಟನೆ ಮಾಡ್ತಿವಿ. ಈ ನಡುವೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ತಮ್ಮ ಸದಾಶಿವ ನಗರ ನಿವಾಸದಿಂದ ಕೆಪಿಸಿಸಿ ತನಕ ಸೈಕಲ್ ಸವಾರಿ ಮಾಡಿದ್ರು. ಡಿಕೆಶಿಗೆ ಶಾಸಕ ಬೈರತಿ ಸುರೇಶ್, ಮಾಜಿ ಮೇಯರ್ ಸಂಪತ್ ರಾಜ್, ನಲಪಾಡ್ ಸೇರಿದಂತೆ ನೂರಾರು ಕಾರ್ಯಕರ್ತರು ಸಾಥ್ ನೀಡಿದ್ರು.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?