Featured
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ವಿರುದ್ಧ ನಾಳೆ ಕಾಂಗ್ರೆಸ್ ಪ್ರತಿಭಟನೆ : ಸೈಕಲ್ ಜಾಥಾ, ಚಳವಳಿ
ರೈಸಿಂಗ್ ಕನ್ನಡ ಬೆಂಗಳೂರು :
ಕಳೆದ 20 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇದೆ. ಕೊರೋನಾ ಸಂಕಷ್ಟದಲ್ಲಿ ಜನ ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಪೆಟ್ರೋಲ್ ಕಂಪನಿಗಳು ದರವನ್ನ ಹೆಚ್ಚು ಮಾಡುತ್ತಲೇ ಬಂದಿವೆ. 20 ದಿನಗಳಲ್ಲಿ ಸರಿ ಸುಮಾರು 10 ರೂಪಾಯಿಗೂ ಹೆಚ್ಚು ದರ ಏರಿಕೆಯಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಈಗ ತೊಡೆತಟ್ಟಿದೆ. ದೇಶಾದ್ಯಂತ ಜೂನ್ 29ರಂದು ಸೋಮವಾರ ಪ್ರತಿಭಟನೆಗೆ ಮುಂದಾಗಿದೆ. ಎಲ್ಲರ ಗಮನ ಸೆಳೆಯೋ ಉದ್ದೇಶದಿಂದ ಸೈಕಲ್ ಚಳವಳಿ ನಡೆಸಲು ಕಾಂಗ್ರೆಸ್ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೈಕಲ್ ಜಾಥಾ ಮಾಡಲು ನಿರ್ಧರಿಸಲಾಯ್ತು.
ಸಭೆ ಬಳಿಕ ಮಾತ್ನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾನು ಹಾಗೂ ಸಿದ್ದರಾಮಯ್ಯ ಅವರು ಸೈಕಲ್ನಲ್ಲಿ ಓಡಾಡುತ್ತೇವೆ. ಸಾಕಷ್ಟು ಕಾರ್ಯಕರ್ತರು ಕೂಡ ಸೈಕಲ್ನಲ್ಲಿ ಬರ್ತಾರೆ ಅಂತ ಮಾಹಿತಿ ನೀಡಿದ್ರು.
ಸೈಕಲ್ ಜನ ಸಾಮಾನ್ಯರ ಫೇವರಿಟ್. ಹೀಗಾಗಿಯೇ, ಜನ ಸಾಮಾನ್ಯರ ಗಮನ ಸೆಳೆಯೋಕೆ ಕಾಂಗ್ರೆಸ್ ಈ ರೀತಿಯ ಪ್ಲಾನ್ ಮಾಡಿದೆ. ಕೇವಲ ಕರ್ನಾಟಕದಲ್ಲೇ ಅಲ್ಲದೇ ಇಡೀ ದೇಶಾದ್ಯಂತ ಸೈಕಲ್ ಚಳವಳಿ ಮಾಡ್ತಿದೆ ಕಾಂಗ್ರೆಸ್.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?