Featured
Karavali Utsava | ಬೆಂಗಳೂರಲ್ಲಿ ಕರಾವಳಿಗರ ಉತ್ಸವ

ಬೆಂಗಳೂರಿನ ಜೆ.ಪಿ ನಗರದ ಆರ್ ಬಿ ಐ ಲೇಔಟ್ ನಲ್ಲಿರೋ ಬಿಬಿಎಂಪಿ ಆಟದ ಮೈದಾನದಲ್ಲಿ ಕರಾವಳಿಗರ ಒಕ್ಕೂಟ (ರಿ) ಬೆಂಗಳೂರು ಇವರ ನೇತೃತ್ವದಲ್ಲಿ ನಮ್ಮ ಕರಾವಳಿ ಉತ್ಸವ 2024 ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಕರಾವಳಿಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು , ಮನು ಹಂದಾಡಿ ಯವರಿಂದ ನಗೆ ಹಬ್ಬ , ಕಾಮಿಡಿ ಕಿಲಾಡಿ ಗಳು ಖ್ಯಾತಿಯ ರಾಕೇಶ್ ಪೂಜಾರಿ ಮೂಡಬಿದ್ರೆ ಇವರ ನಗೆ ಬುಗ್ಗೆ , ಅಂಭಾ ಭವಾನಿ ಮರಾಠಿ ಸಾಂಸ್ಕ್ರತಿಕ ಕಲಾ ವೇದಿಕೆ (ರಿ) ಪರ್ಕಳ ಇವರಿಂದ ಕರಾವಳಿ ಕಲಾ ವೈಭವ , ಹುಲಿ ಕುಣಿತ, ಮಹಾಗಣಪತಿ ಯಕ್ಷಗಾನ ಮಂಡಳಿ ನಡೂರು ಮಂದಾರ್ತಿ ಇವರಿಂದ ಶಿವದೂತ ಪಂಜುರ್ಲಿ ಯಕ್ಷಗಾನ, ಗ್ರಾಮೀಣ ಕ್ರೀಡೆಗಳಾದ ಹಗ್ಗ ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಚುಕ್ಕಿ ರಂಗೋಲಿ, ಚಿತ್ರಕಲೆ, ಕೊಟ್ಟೆ ಕಟ್ಟುವ ಸ್ಪರ್ಧೆ ಹಾಗೂ ಇನ್ನೂ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಕರಾವಳಿಯ ಸ್ವಾದಿಷ್ಟ ಖಾದ್ಯಗಳ ಆಹಾರ ಮೇಳ ದಲ್ಲಿ ರುಚಿ ರುಚಿಯ ಕರಾವಳಿ ಖಾದ್ಯಗಳ ಅನಾವರಣ ನಡೆಯಲಿದ್ದು ಸುಮಾರು ಎಂಬತ್ತು ಸಾವಿರದಿಂದ 1 ಲಕ್ಷ ಜನ ಸೇರುವ ನಿರೀಕ್ಷೆಯಿದೆ.
ನಮ್ಮ ಕರಾವಳಿ ಉತ್ಸವ
ಸ್ಥಳ : ಬಿಬಿಎಂಪಿ ಆಟದ ಮೈದಾನ, ಆರ್ ಬಿ ಐ ಲೇಔಟ್, ಜೆಪಿ ನಗರ
ಸಮಯ- ಭಾನುವಾರ ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ..

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?