Featured
ಖಾಸಗಿ ಆಸ್ಪತ್ರೆಗಳಿಗೆ 2500 ಬೆಡ್ ಕೊಡಲು ಸೂಚನೆ- ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ- ಸಿ.ಎಂ.ಬಿಎಸ್ವೈ ಹೇಳಿಕೆ
ರೈಸಿಂಗ್ ಕನ್ನಡ:
ಬೆಂಗಳೂರು:
ಕೊರೊನಾ ವಿಚಾರವಾಗಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಿಎ. ಬಿಎಸ್ವೈ ಖಾಸಗಿ ಆಸ್ಪತ್ರೆಗಳಲ್ಲಿ 2500 ಬೆಡ್ ಕೊರೋನಾ ರೋಗಿಗಳಿಗೆ ಸಿದ್ಧ ಮಾಡಿಟ್ಡುಕೊಳ್ಳಲು ಸೂಚಿಸಿದ್ದಾರೆ. ಕೊರೊನಾ ಮಹಾಮಾರಿಯನ್ನು ಮಟ್ಟಹಾಕಲು ಸರ್ಕಾರದ ಜೊತೆ ಖಾಸಗಿ ಆಸ್ಪತ್ರೆಗಳು ಕೂಡ ಸಹಕರಿಸಲು ಕೋರಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ತಡೆಯಲು ಯಶಸ್ವಿ ಆಗಿದ್ದೇವೆ. ದೇಶದ ಬೇರೆ ನಗರಗಳಿಗೆ ಹೋಲಿಸಿಕೊಂಡ್ರೆ ನಗರದಲ್ಲಿ ನಿಯಂತ್ರಣದಲ್ಲಿದೆ. ಜನ ಗಾಬರಿ, ಆತಂಕ ಪಡಬೇಕಿಲ್ಲ ಎಂದು ಸಿ.ಎಂ.ಯಡಿಯೂರಪ್ಪ ಹೇಳಿದರು.
ನಾವು, ಸಚಿವರು ಅಧಿಕಾರಿಗಳು, ಎಲ್ಲರೂ ಹೊರಗೆ ಬಂದಿದ್ದೇವೆ. ಖಾಸಗಿ ಆಸ್ಪತ್ರೆಯವರು ಮಾತಾಡಿಕೊಂಡು ಒಂದು ನಿರ್ಧಾರಕ್ಕೆ ಬರಲಿ ಎಂದು ಹೇಳಿ ಬಂದಿದ್ದೇವೆ. ನಾಳೆಯೊಳಗೆ 2500 ಬೆಡ್ ಗಳನ್ನು ನೀವು ಕೊಡಲೇಬೇಕು ಎಂದು ಹೇಳಿದ್ದೇವೆ
- ಬಿ.ಎಸ್. ಯಡಿಯೂರಪ್ಪ
ಸರ್ಕಾರದ ಬೆಡ್ ಗಳ ಬೇಡಿಕೆ, ದರ ನಿಗಧಿ ಕುರಿತು ಖಾಸಗಿ ಆಸ್ಪತ್ರೆ ಅಡಳಿತ ಮಂಡಳಿ, ಮುಖ್ಯಸ್ಥರು ಚರ್ಚೆ ನಡೆಸಿದರು. ಸಮ್ಮೇಳನ ಸಭಾಂಗಣದಲ್ಲಿ ಕುಳಿತು ವೈದ್ಯರೇ ಸಿಎಂ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿದರು. ನಾಳೆ ಒಳಗೆ ಖಾಸಗಿ ಆಸ್ಪತ್ರೆಗಳು ಚರ್ಚಿಸಿ ಅಂತಿಮ ನಿರ್ಧಾರ ತಿಳಿಸುವಂತೆ ಸೂಚನೆ ನೀಡಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?