Featured
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿಎಂ ಬೊಮ್ಮಾಯಿ ಪ್ರವಾಹ ಪ್ರವಾಸ : ಕಣ್ಣೀರಿಟ್ಟ ಶಾಲಾ ಮಕ್ಕಳು

ರೈಸಿಂಗ್ ಕನ್ನಡ, ಉತ್ತರ ಕನ್ನಡ :
ಸಿಎಂ ಆದ ಮೊದಲ ದಿನವೇ ಚುರುಕಾಗಿದ್ದ ಬೊಮ್ಮಾಯಿ, ಎರಡನೇ ದಿನ ಗುರುವಾರ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಯಲ್ಲಾಪರ ತಾಲೂಕಿನ ಕಳಚೆ ಗ್ರಾಮ, ಅರಬೈಲು ಘಟ್ಟ, ಗುಳ್ಳಾಪುರ ಸೇರಿ ಹಲವು ಪ್ರದೇಶದಲ್ಲಿ ಸಿಎಂ ಪರಿಶೀಲನೆ ನಡೆಸಿದ್ರು. ಈ ವೇಳೆ ಸಿಎಂ ಬಳಿ ತಮ್ಮ ಸಮಸ್ಯೆ ಹೇಳುತ್ತಾ ಮಕ್ಕಳು ಕಣ್ಣೀರಿಟ್ರು. ಪ್ರವಾಹದಿಂದಾಗಿ ಶಾಲೆಗೂ ಹೋಗಕ್ಕಾಗ್ತಿಲ್ಲ. ಇಂಟರ್ನೆಟ್ ಸಮಸ್ಯೆಯಿಂದ ಆನ್ಲೈನ್ ಕ್ಲಾಸ್ಗೆ ಸಮಸ್ಯೆ ಆಗ್ತಿದೆ ಅಂತಾ ವಿದ್ಯಾರ್ಥಿಗಳು ಸಿಎಂ ಬಳಿ ಕಣ್ಣೀರಿಟ್ರು. ಇಂದು ಮುಖ್ಯಮಂತ್ರಿ @BSBommai ರವರು ಅತಿವೃಷ್ಟಿಯಿಂದಾಗಿ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ಉಂಟಾದ ಹಾನಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ @ShivaramHebbar, ಭಟ್ಕಳ್ ಶಾಸಕ ಸುನೀಲ್ ನಾಯ್ಕ, ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/LUiiWCg5mG— CM of Karnataka (@CMofKarnataka) July 29, 2021
ಪ್ರವಾಹದಿಂದಾಗಿ ಬದುಕು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡೋದಾಗಿ ಸಿಎಂ ಭರಸವೆ ನೀಡಿದ್ರು. ಬಳಿಕ ತಾಲೂಕು ಆಸ್ಪತ್ರೆ ಬಳಿಯಿರೋ ಕೋವಿಡ್ ಸೆಂಟರ್ಗೂ ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದ್ರು. ಈ ವೇಳೆ ಸಿಎಂಗೆ ಶಾಸಕ ಶಿವರಾಂ ಹೆಬ್ಬಾರ್, ಡಿಸಿ ಮುಲ್ಲಯ್ ಮುಹಿಲನ್ ಸಾಥ್ ನೀಡಿದ್ರು. ಮುಖ್ಯಮಂತ್ರಿ @BSBommai ರವರು ಇಂದು ಯಲ್ಲಾಪುರ ತಾಲ್ಲೂಕಿನ ಬಾರೇಕಳಚೆ – ಕೈಗಾ ರಸ್ತೆ, ಕುಸಿದ ಸೇತುವೆ ಮೊದಲಾದ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ವೀಕ್ಷಿಸಿದರು.
ಮಾಜಿ ಸಚಿವ @ShivaramHebbar ಮತ್ತಿತರರು ಉಪಸ್ಥಿತರಿದ್ದರು. pic.twitter.com/dWsLGKQEcq— CM of Karnataka (@CMofKarnataka) July 29, 2021
ಬಳಿಕ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಅಂಕೋಲಾ ತಾಲೂಕು ಕಚೇರಿಯಲ್ಲಿ ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ರು. ಈ ವೇಳೆ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ರು.
ಪ್ರಧಾನಮಂತ್ರಿ @narendramodi ರವರು ಇಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ @BSBommai ರವರು ಅಂಕೋಲಾ ತಾಲ್ಲೂಕು ಕಚೇರಿಯಿಂದ ಪಾಲ್ಗೊಂಡರು.#NationalEducationPolicy @PMOIndia @dpradhanbjp pic.twitter.com/t9uwFWdBMt— CM of Karnataka (@CMofKarnataka) July 29, 2021
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?