Connect with us

Featured

CM ಯಡಿಯೂರಪ್ಪ ಆಶೀರ್ವಾದ ಪಡೆದ “ಚಿನ್ನ ಜಿಯರ್ ಸ್ವಾಮೀಜಿ” ಯಾರು..?

ಹೈದರಾಬಾದ್​ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದುವರೆಗೆ ಕರ್ನಾಟಕ ಜನತೆಗೆ ಗೊತ್ತಿಲ್ಲದ ಸ್ವಾಮೀಜಿಯೊಬ್ಬರ ಆಶೀರ್ವಾದ ಪಡೆದಿದ್ದಾರೆ. ಇಷ್ಟು ದಿನ ಯಡಿಯೂರಪ್ಪ ಸೇರಿದಂತೆ ಕರ್ನಾಟಕದ ರಾಜಕಾರಣಿಗಳು, ಕೇರಳ ಹಾಗೂ ಶೃಂಗೇರಿ ಸೇರಿದಂತೆ ಹಲವು ಸ್ವಾಮೀಜಿಗಳ ಆಶೀರ್ವಾದ, ಸಲಹೆ ಪಡೆಯುತ್ತಿದ್ದರು. ಆದ್ರೆ, ಇದೇ ಮೊದಲ ಬಾರಿಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಸ್ವಾಮೀಜಿಯನ್ನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿ ಆಶೀರ್ವಾದ ಪಡೆದ ಸ್ವಾಮೀಜಿ ಹೆಸರು ಚಿನ್ನ ಜಿಯರ್ ಸ್ವಾಮೀಜಿ. ಹೈದರಾಬಾದ್​​ನ ಶಂಶಾಬಾದ್​ನಲ್ಲಿ ಇವರ ಆಶ್ರಮವಿದ್ದು, ಯಡಿಯೂರಪ್ಪ ನಿನ್ನೆ ಸಂಜೆ ಭೇಟಿಯಾಗಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರ್​ ರಾವ್​ ಒಂದು ಯಾಗ ಮಾಡ್ತಿದ್ದು, ಇವತ್ತು ಬೆಳಗ್ಗೆ ಆ ಯಾಗದಲ್ಲೂ ಯಡಿಯೂರಪ್ಪ ಭಾಗಿಯಾದರು. ಯಾಗದಲ್ಲಿ ಭಾಗಿಯಾದ ಯಡಿಯೂರಪ್ಪ ಅಲ್ಲಿಂದ, ಶಂಶಾಬಾದ್​ ಆಶ್ರಮದಲ್ಲೇ ಇರುವ ಶ್ರೀರಾಮನಗರಂ ಅಂದ್ರೆ, ಶ್ರೀರಾಮ ದೇವಾಲಯದ ಪ್ರದಕ್ಷಿಣೆ ಹಾಕಿ, ಅದ್ಭುತವಾಗಿದೆ ಎಂದು ಹೇಳಿದ್ರು. ಇಷ್ಟೇ ಅಲ್ಲದೆ, 15 ದಿನಗಳಲ್ಲಿ ಮತ್ತೆ ಆಶ್ರಮಕ್ಕೆ ಬರುವುದಾಗಿ ಯಡಿಯೂರಪ್ಪ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹಾಗಿದ್ದರೆ ಯಾರು ಈ ಚಿನ್ನ ಜಿಯರ್ ಸ್ವಾಮೀಜಿ.?

ಹೀಗೊಂದು ಪ್ರಶ್ನೆ ನಿನ್ನೆ ಸಂಜೆಯಿಂದ ಬಹಳಷ್ಟು ಜನರನ್ನ ಕಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಯಾಗಿ, ಆಶೀರ್ವಾದ ಪಡೆದ ಆ ಚಿನ್ನ ಜಿಯರ್ ಸ್ವಾಮೀಜಿ ಯಾರು..? ಇಷ್ಟು ದಿನ ಕರ್ನಾಟಕ ಜನರಿಗೆ ಗೊತ್ತಿಲ್ಲದೇ ಇದ್ದ ಈ ಸ್ವಾಮೀಜಿ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕೊಡುತ್ತೆ ನಿಮ್ಮ ರೈಸಿಂಗ್ ಕನ್ನಡ.ಕಾಮ್.

Advertisement

ಚಿನ್ನ ಜಿಯರ್ ಸ್ವಾಮೀಜಿ, ಆಂಧ್ರ ಹಾಗೂ ತೆಲಂಗಾಣ ರಾಜಕೀಯದಲ್ಲಿ ಪ್ರಭಾವಿಗಳು. ಅದರಲ್ಲೂ ತೆಲಂಗಾಣ ಸಿಎಂ ಕೆಸಿಆರ್​, ಇವರು ಹೇಳಿದಂತೆ ಕೇಳ್ತಾರೆ. ಹೀಗಾಗಿಯೇ ಈಗ ಕೆಸಿಆರ್ 100 ಎಕರೆ ಪ್ರದೇಶದಲ್ಲಿ ಯಾಗ ನಡೆಸ್ತಿದ್ದಾರೆ. ಈ ಹಿಂದೆಯೂ 300 ಎಕರೆ ಪ್ರದೇಶದಲ್ಲಿ ಯಾಗ ನಡೆಸಿದ್ರು. ಕೇವಲ ಕೆಸಿಆರ್ ಅಷ್ಟೇ ಅಲ್ಲದೆ, ಆಂಧ್ರ ಸಿಎಂ ಜಗನ್ ಕೂಡ ಚಿನ್ನ ಜಿಯರ್ ಸ್ವಾಮೀಜಿ ಮಾತನ್ನ ತಳ್ಳಿ ಹಾಕುವುದಿಲ್ಲ. ಅಷ್ಟರ ಮಟ್ಟಿಗೆ ಎರಡೂ ರಾಜ್ಯಗಳಲ್ಲಿ ಪ್ರಭಾವಿ ಸ್ವಾಮೀಜಿ.

ಹೈದರಾಬಾದ್​​ನ ಶಂಶಾಬಾದ್​ನಲ್ಲಿ ಇವರ ಆಶ್ರಮವಿದೆ. ವಿಶಿಷ್ಠಾದ್ವೈತಾ ಸಿದ್ಧಾಂತದ ಪ್ರತಿಪಾದಕರು. ತನ್ನ 23ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದವರು. ಅಮೆರಿಕಾ, ಲಂಡನ್​, ಸಿಂಗಾಪುರ, ಹಾಂಕಾಂಗ್​​, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಇವರು ಯಾಗಗಳನ್ನ ನೆರವೇರಿಸಿದ್ದಾರೆ.

ಸದ್ಯ ಶಂಶಾಬಾದ್​ನ ಚಿನ್ನ ಜಿಯರ್ ಸ್ವಾಮೀಜಿ ಆಶ್ರಮದಲ್ಲೇ ಶ್ರೀರಾಮ ದೇಗುಲ ನಿರ್ಮಾಣ ಆಗಿದೆ. ಇದಕ್ಕೆ ಶ್ರೀರಾಮನಗರಂ ಎಂದು ಹೆಸರಿಡಲಾಗಿದೆ. ಇದರ ಉದ್ಘಾಟನೆ ಇವತ್ತು ನೆರವೇರಿದ್ದು, ಈ ಮಹತ್ಕಾರ್ಯದಲ್ಲಿ ಕರ್ನಾಟಕದ ಸಿಎಂ ಯಡಿಯೂರಪ್ಪ ಕೂಡ ಭಾಗಿಯಾಗಿದ್ದು ವಿಶೇಷ. ಯಡಿಯೂರಪ್ಪ ಅವರ ಮುಂದಿನ ರಾಜಕೀಯ ಭವಿಷ್ಯ ಚೆನ್ನಾಗಿರಲಿ. ರಾಜ್ಯದ ಅಭಿವೃದ್ಧಿ ಹಾಗು ಲೋಕಕಲ್ಯಾಣಕ್ಕಾಗಿ ಯಡಿಯೂರಪ್ಪ ಶ್ರಮಿಸಲಿ ಎಂದು ಚಿನ್ನ ಜಿಯರ್ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ.

ಒಟ್ಟಿನಲ್ಲಿ ಚಿನ್ನ ಜಿಯರ್ ಸ್ವಾಮೀಜಿ ಆಶೀರ್ವಾದ ಪಡೆದಿರೋ ಸಿಎಂ ಯಡಿಯೂರಪ್ಪ, ಹೊಸ ಉತ್ಸಾಹದೊಂದಿಗೆ ಕೆಲಸ ಶುರು ಮಾಡಲಿದ್ದಾರೆ. ಇನ್ಮುಂದೆ ಮತ್ಯಾವ ಮಠ-ಮಂದಿರಗಳಿಗೆ ಭೇಟಿ ನೀಡಿ, ಯಾರ ಯಾರ ಆಶೀರ್ವಾದ ಪಡೀತಾರೋ ಕಾದುನೋಡೋಣ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ