Featured
ಕಣ್ಣೀರಿಡುತ್ತಾ ಲಡಾಖ್ನತ್ತ ಚೀನಿ ಸೈನಿಕರು: ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೊ ವೈರಲ್
![](https://risingkannada.com/wp-content/uploads/2020/09/china-soldiers.jpg)
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಭಾರತ- ಚೀನಾ ಗಡಿಯಲ್ಲಿ ಸಂಘರ್ಷ ತಾರಕಕ್ಕೇರುತ್ತಿದೆ. ಗಡಿಯಲ್ಲಿ ಚೀನಾ ಮಾಡುತ್ತಿರುವ ಕುತಂತ್ರಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ಕೊಡುತ್ತಿದೆ. ಈ ನಡುವೆ ಚೀನಾ ಯೋಧರು ಅಳುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಚೀನಾದ ಪೀಪಲ್ ಲಿಬರೇಶನ್ ಸೇನೆ ಭಾರತ ಸೇನೆಗೆ ಸರಿಸಾಟಿಯೇ ಅಲ್ಲ. ಈ ಮಾತನ್ನ ಚೀನಾ ಒಪ್ಪುವುದಿಲ್ಲ. ಆದರೆ ಲಡಾಖ್ನಲ್ಲಿ ಭಾರತೀಯ ಸೇನೆಯನ್ನ ಎದುರಿಸುವುದು ತುಂಬ ಕಷ್ಟ ಎಂದು ಚೀನಾ ಸೈನಿಕರಿಗೆ ಗೊತ್ತಿರುವ ಸಂಗತಿಯಾಗಿದೆ.
ಚೀನಾ ತನ್ನ ಗಡಿಯಲ್ಲಿ ತನ್ನ ಸೈನಿಕರನ್ನ ನಿಯೋಜಿಸಿ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳುತ್ತಿದೆ. ಬೇರೆ ಪ್ರಾಂತ್ಯಗಳಿಂದಲೂ ಸಿಬ್ಬಂದಿಗಳನ್ನ ಕಳುಹಿಸುತ್ತಿದೆ. ಇದೀಗ ಚೀನಿ ಸೈನಿಕರು ಬಸ್ನಲ್ಲಿ ಅಳುತ್ತಿರುವ ವಿಡಿಯೊ ವೈರಲ್ ಆಗಿದೆ.
ಅಷ್ಟಕ್ಕೂ ಈ ವಿಡಿಯೊವನ್ನ ಪೋಸ್ಟ್ ಮಾಡಿರುವವರು ಪಾಕಿಸ್ತಾನ ಕಾಮಿಡಿಯನ್ ಝದ್ ಹಮೀದ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೀಪಲ್ ಲಿಬರೇಶನ್ನ ಯುವ ಸೈನಿಕರು ಲಡಾಖ್ ಗಡಿಗೆ ಬಸ್ನಲ್ಲಿ ಹೋಗುವಾಗ ಹಾಡು ಹಾಡುತ್ತಾ ಕಣ್ಣೀರು ಹಾಕುತ್ತಾ ಬರುತ್ತಿರುವ ದೃಶ್ಯದಲ್ಲಿದೆ.
ಸೇನಾ ಹಾಡು ಗ್ರೀನ್ ಫ್ಲವರ್ಸ್ ಇನ್ ದಿ ಆರ್ಮಿ ಯುವ ಸೈನಿಕರು ಕಷ್ಟಪಟ್ಟು ಹಾಡುತ್ತಿದ್ದಾರೆ.
ಸೈನಿಕರು ಹಾಡಿರುವ ಈ ಹಾಡು ವೀ ಚಾಟ್ ಪೇಜ್ನಲ್ಲಿ ಪೊಸ್ಟ್ ಮಾಡಲಾಗಿದೆ. ಇವರೆಲ್ಲಾ ಕಾಲೇಜು ಓದುತ್ತಿರುವ ವಿದ್ಯಾರ್ಥಿಗಳಾಗಿದ್ದು ಕೆಲವರಿಗೆ ಟಿಬೆಟ್ ಗಡಿಯಲ್ಲಿ ಕಾರ್ಯನಿರ್ವಹಿಸಲು ಕಳಿಸಿದೆ ಎಂದು ತಿಳಿದು ಬಂದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?