Featured
ಮತ್ತೆ ನರಿಬುದ್ಧಿ ಪ್ರದರ್ಶಿಸಿದ ಚೀನಾ – ಲಡಾಕ್ ಬಳಿಕ ಲಿಪುಲೇಖ್ ಬಳಿ ಡ್ರ್ಯಾಗನ್ ಸೇನೆ ಜಮಾವಣೆ- ಸಿಕ್ಕಿಂ, ಅರುಣಾಚಲ ಪ್ರದೇಶ ಗಡಿಭಾಗದಲ್ಲೂ ಅಪಾಯ..?
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಚೀನಾ ಮತ್ತು ಭಾರತ ನಡುವೆ ಸಮರ ಜೋರಾಗಿ ನಡೆಯುತ್ತಿದೆ. ಕೆಲ ತಿಂಗಳ ಹಿಂದೆ ಲಡಾಕ್ ಭಾಗದಲ್ಲಿ ಸೇನೆ ಜಮಾವಣೆ ಮಾಡಿದ್ದ ಚೀನಾ ಭಾರತದ ಪ್ರತಿರೋಧದ ಬಳಿಕ ಅಲ್ಲಿಂದ ಸೇನೆಯನ್ನು ಹಿಂತೆಗೆದುಕೊಂಡಿತ್ತು. ಆದರೆ ಈಗ ಚೀನಾ ಮತ್ತೆ ತನ್ನ ನರಿ ಬುದ್ದಿ ಪ್ರದರ್ಶಿಸಿದೆ. ಲಡಾಕ್ನಿಂದ ಸೇನೆ ಹಿಂದಕ್ಕೆ ಕರೆಸಿಕೊಂಡ ಬೆನ್ನಲ್ಲೇ ಉತ್ತರಾಖಂಡದ ಲಿಪುಲೇಖ್ ಬಳಿ ದೊಡ್ಡ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆ ಮಾಡುತ್ತಿದೆ.
ಗಲ್ವಾನ್ ಗುದ್ದಾಟದ ಬಳಿಕ ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಉನ್ನತ ಮಟ್ಟದ ಮಾತುಕತೆ ಬಳಿಕ ಉದ್ವಿಗ್ನ ಪರಿಸ್ಥಿತಿ ತಗ್ಗಿತ್ತು. ಭಾರತ ಮತ್ತು ಚೀನಾ ನಡುವೆ ಮಾತುಕತೆ ಇನ್ನೂ ನಡೆಯುತ್ತಿರುವ ಹೊತ್ತಿನಲ್ಲೇ ಲಿಪುಲೇಖ್, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳಲ್ಲಿ ಸೇನೆಯನ್ನು ನಿಯೋಜನೆ ಮಾಡುತ್ತಿದೆ.
ಚೀನಾದ ನರಿಬುದ್ಧಿ ಅರಿತುಕೊಂಡಿರಉವ ಭಾರತೀಯ ಸೇನೆ ಕೂಡ ತನ್ನ ಸೈನಿಕರನ್ನು ಲಿಪುಲೇಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಭಾಗಗಗಳಲ್ಲಿ ಜಮಾವಣೆ ಮಾಡುತ್ತಿದೆ. ಸದಾ ವಕ್ರಬುದ್ಧಿಯಿಂದಲೇ ಯೋಚನೆ ಮಾಡುವ ಚೀನಾ, ನೇಪಾಳವನ್ನು ಕೂಡ ಹೆದರಿಸುತ್ತಿದೆ. ಇನ್ನ ವಿಯೆಟ್ನಾಂ. ಬ್ರೂನೈನಂತಹ ದೇಶಗಳಿಗೂ ಚೀನಾದ ಭಯ ಇದ್ದೇ ಇದೆ. ಒಟ್ಟಾರೆ ಚೀನಾದ ಗಡಿ ವಿಸ್ತರಣೆಯ ಯೋಚನೆ ಜಗತ್ತಿನ ಉಳಿದ ದೇಶಗಳ ಕಣ್ಣು ಕೆಂಪಗಾಗಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?