Featured
ಚೀನಾ ವಿರುದ್ಧ ಭಾರತಕ್ಕೆ ಗೆಲುವು- ಗಲ್ವಾನ್ನಿಂದ ಕಾಲ್ಕಿತ್ತ ಡ್ರ್ಯಾಗನ್ ಆರ್ಮಿ..!
ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಭಾರತದ ವಿರುದ್ಧ ತೊಡೆ ತಟ್ಟಿ ಗಡಿ ದಾಟಿದ್ದ ಚೀನಾ ಗಲ್ವಾನ್ ಗಲಾಟೆ ಬಳಿಕ ಕೊಂಚ ತಣ್ಣಗಾಗಿತ್ತು. ಗಲ್ವಾನ್ನಲ್ಲಿ ಭಾರತೀಯ ಸೈನಿಕರು ಚೀನಾ ಸೈನ್ಯಕ್ಕೆ ಕೊಟ್ಟ ಏಟಿನಿಂದ ಡ್ರ್ಯಾಗನ್ ದೇಶ ಕೊಂಚ ಗಲಿಬಿಲಿಗೊಂಡಿತ್ತು. ಈ ನಡುವೆ ಕೇಂದ್ರ ಸರಕಾರ ಚೀನಾ ವಿರುದ್ಧ ಡಿಜಿಟಲ್ ಸ್ಟ್ರೈಕ್ ಮಾಡಿತ್ತು. ಚೀನಾದ 59 ಆ್ಯಪ್ಗಳನ್ನು ಬ್ಯಾನ್ ಮಾಡಿತ್ತು. ಜೊತೆಗೆ ಚೀನಾ ಮೂಲದ ಸಂಸ್ಥೆಗಳಿಂದ ಪಡೆಯುತ್ತಿದ್ದ ಬಿಡಿಭಾಗಗಳನ್ನೂ ಮತ್ತು ಇತರೆ ವಸ್ತುಗಳ ಆಮದಿನ ಮೇಲೂ ನಿಷೇಧ ಹೇರಿತ್ತು.
ಕೆಲದಿನಗಳ ಹಿಂದೆ ಭಾರತ ಮತ್ತು ಚೀನಾದ 20ಕ್ಕೂ ಹೆಚ್ಚು ಯೋಧರ ಸಾವಿಗೆ ಗಲ್ವಾನ್ ಕಣಿವೆ ಸಂಘರ್ಷ ಕಾರಣವಾಗಿತ್ತು. ಆ ಬಳಿಕ ಎರಡೂ ದೇಶಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಆ ಎಲ್ಲಾ ಘಟನೆಗಳ ಬಳಿಕ ಮೊದಲ ಬಾರಿಗೆ ಚೀನಾ ಸೇನೆ ವಿವಾದಿತ ಸ್ಥಳದಿಂದ ಕಾಲ್ಕಿತ್ತಿದೆ. ಈ ಬಗ್ಗೆ ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿದ್ದು, ಗಲ್ವಾನ್ ಕಣಿವೆಯಲ್ಲಿ ಮೊಕ್ಕಾಂ ಹೂಡಿದ್ದ ಚೀನಾ ಸೇನೆ ಇದೀಗ ವಿವಾದಿತ ಪ್ರದೇಶದಿಂದ ಸುಮಾರು 1 ರಿಂದ 2 ಕಿ.ಮೀ ನಷ್ಚು ಹಿಂದಕ್ಕೆ ಹೋಗಿದೆ. ಅಲ್ಲದೆ ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ತನ್ನ ಟೆಂಟ್ ಗಳನ್ನೂ ಕೂಡ ಸ್ಥಳಾಂತರ ಮಾಡಿದೆ ಎಂದು ತಿಳಿದುಬಂದಿದೆ.
ಗಲ್ವಾನ್ ಸಂಘರ್ಷದ ಬಳಿಕ ಉಭಯ ದೇಶಗಳ ಸೇನಾಧಿಕಾರಿಗಳ ನಡುವಿನ ಮಾತುಕತೆ ನಡೆದಿತ್ತು. ಈಗ ಅದು ಫಲಪ್ರದವಾಗಿದ್ದು, ಚೀನಾ ಸೇನೆ ಮಾತ್ರವಲ್ಲದೇ ಭಾರತೀಯ ಸೇನೆ ಕೂಡ ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ನೀಡಿದೆ. ಇದರ ಮೊದಲ ಹಂತವಾಗಿ ಚೀನಾ ಸೇನೆ 2 ಕಿ.ಮೀ ಹಿಂದಕ್ಕೆ ಸರಿದಿದ್ದು, ವಿವಾದಿತ ಸ್ಥಳದಲ್ಲಿ ನಿರ್ಮಿಸಲಾಗಿದ್ದ ತನ್ನ ಟೆಂಟ್ ಗಳನ್ನು ಸ್ಥಳಾಂತರ ಮಾಡಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?