Featured
ದಂಡ ಕಟ್ಟಿದ ರಶೀದಿ ಕೇಳಿದ್ರೆ ಗೂಸಾ ಕೊಟ್ಟ ಪೊಲೀಸ್ : ಛೀ..ಥೂ.. ನಾಚಿಕೆ ಆಗಬೇಕು..!
![](https://risingkannada.com/wp-content/uploads/2019/09/WhatsApp-Image-2019-09-29-at-9.06.30-AM-1.jpeg)
ಚಿಕ್ಕಮಗಳೂರು : ಹೊಸ ಟ್ರಾಫಿಕ್ ರೂಲ್ಸ್ ಬಂದ್ಮೇಲೆ ಜನ ಭಯ ಪಡ್ತಿರೋದು ನಿಜ. ಆದ್ರೆ, ಇದರ ಜೊತೆ ಪೊಲೀಸರ ಹಾವಳಿ, ಪುಂಡಾಟ ಕೂಡ ಜಾಸ್ತಿ ಆಗ್ತಿದೆ. ಅದರಲ್ಲೂ ಟ್ರಾಫಿಕ್ ಪೊಲೀಸರು ವಿನಾಃ ಕಾರಣ ಸಾರ್ವಜನಿಕರ ಮೇಲೆ ಹಲ್ಲೆ ಮಾಡ್ತಿರೋ ಪ್ರಕರಣಗಳು ದಿನೇ ದಿನೇ ಜಾಸ್ತಿ ಆಗ್ತಿವೆ. ಇದಕ್ಕೆ ತಾಜಾ ಉದಾಹರಣೆ ಕಾಫಿ ನಾಡು ಚಿಕ್ಕಮಗಳೂರು.
ಚಿಕ್ಕಮಗಳೂರಿನಲ್ಲಿ ದಂಡ ಕಟ್ಟಿದ ಮೇಲೆ ರಶೀದಿ ಕೇಳಿದ್ರೆ, ಈ ಪೊಲೀಸ್ ಪೇದೆ ಕೂಗಾಡಿ, ಗಲಾಟೆ ಮಾಡಿ ಸವಾರನಿಗೆ ಥಳಿಸಿದ್ದಾನೆ. ರೆಸಿಪ್ಟ್ ಕೊಡಿ ಅಂತ ಕೇಳಿದ್ರೆ, ಬಾಯಿಗೆ ಬಂದಂತೆ ಬೈದಿದ್ದು, ಸಾರ್ವಜನಿಕವಾಗಿ ಕೂಗಾಡಿ, ರಂಪ ಮಾಡಿದ್ದಾರೆ ಈ ಪೊಲೀಸ್ ಪೇದೆ.
![](https://risingkannada.com/wp-content/uploads/2019/09/WhatsApp-Image-2019-09-29-at-9.06.28-AM-576x1024.jpeg)
ಹೀಗೆ, ಎಗರಾಡ್ತಿರೋ ಈ ಪೊಲೀಸ್ ಪೇದೆ ಹೆಸರು ಮಂಗಲ್ ದಾಸ್. ಕಾನೂನಿನ
ಪ್ರಕಾರ ಪೇದೆಗಳು ದಂಡ ವಿಧಿಸುವಂತೆ ಇಲ್ಲ. ಆದ್ರೆ, ಇದ್ಯಾವುದು ಪೊಲೀಸರಿಗೆ ಅನ್ವಯ ಆಗಲ್ಲ ಅನ್ನೋ
ರೀತಿಯಲ್ಲಿ ಕಾನೂನನ್ನು ತಾವೇ ಗಾಳಿಗೆ ತೂರಿ ವರ್ತನೆ ಮಾಡ್ತಿದ್ದಾರೆ. ಪೇದೆ ಮಂಗಲ್ ದಾಸ್ ದೌರ್ಜನ್ಯದ
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೇದೆ ಮಂಗಲ್ ದಾಸ್ ಅಮಾನತಿಗೆ ಸಾರ್ವಜನಿಕರು ಒತ್ತಾಯ
ಮಾಡಿದ್ದಾರೆ.
ಇದೇ ರೀತಿಯಾದ್ರೆ, ಪೊಲೀಸರ ಮಾನ ಮರ್ಯಾದ ಮೂರು ಕಾಸಿಗೆ ಹರಾಜು ಆಗೋದ್ರಲ್ಲಿ ನೋ ಡೌಟು. ಇನ್ನಾದ್ರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಹರಿಸಲಿ. ಮಂಗಲ್ ದಾಸ್ನಂತಹ ಪೇದೆಗಳ ದರ್ಪಕ್ಕೆ ಕಡಿವಾಣ ಬೀಳಲಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?