ಟಾಪ್ ನ್ಯೂಸ್
ಬಿಜೆಪಿ ಜೊತೆ ಮೈತ್ರಿಗೆ ಚಂದ್ರಬಾಬು ಕಾತರ : ಹಿಂದಿರೋ ತಂತ್ರವೇನು..? ಯಾಕಿಷ್ಟು ಮಹತ್ವ..?
ಆಂಧ್ರ ಪ್ರದೇಶ : ಆಂಧ್ರ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಇದಕ್ಕಾಗಿ ಆಂಧ್ರ ಪ್ರದೇಶದ ಎಲ್ಲ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿವೆ. ಆಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಸಿದ್ಧಂ ಹೆಸರಿನಲ್ಲಿ ಱಲಿಗಳನ್ನು ಏರ್ಪಡಿಸುತ್ತಿದೆ. ಆಂಧ್ರದ ಪ್ರಮುಖ ಪ್ರತಿಪಕ್ಷ ತೆಲುಗು ದೇಶಂ ಈಗಾಗಲೇ ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು, 118 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಸಹ ಘೋಷಿಸಲಾಗಿದೆ. ಇದೆಲ್ಲದರ ನಡುವೆ ಟಿಡಿಪಿ ಅಧಿನಾಯಕ ಚಂದ್ರಬಾಬು ನಾಯ್ಡು ದೆಹಲಿಗೆ ಭೇಟಿ ನೀಡಿದ್ದು, ಬಿಜೆಪಿ ನಾಯಕರ ಜೊತೆ ಮೈತ್ರಿ ಚರ್ಚೆ ನಡೆಸುತ್ತಿದ್ದಾರೆ. 6 ವರ್ಷಗಳ ಹಿಂದೆ ಎನ್ ಡಿಎ ಮೈತ್ರಿಕೂಟಕ್ಕೆ ವಿದಾಯ ಹೇಳಿದ್ದ ಚಂದ್ರಬಾಬು ನಾಯ್ಡು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು 2019ರ ಚುನಾವಣೆಯನ್ನು ಎದುರಿಸಿದ್ದರು. ಇದು ಟಿಡಿಪಿಗೆ ಮಾರಕವಾಗಿ ಪರಿಣಮಿಸಿತ್ತು. ಇದಾದ 6 ವರ್ಷಗಳ ಬಳಿಕ ಚಂದ್ರಬಾಬು ಎನ್ ಡಿಎ ತೆಕ್ಕೆಗೆ ಮರಳಲು ಉತ್ಸಾಹ ತೋರಿಸುತ್ತಿದ್ದಾರೆ. ಇದಕ್ಕೆ ಹಲವಾರು ಕಾರಣಗಳು ಇವೆ.
ವೈ.ಎಸ್.ಜಗನ್ ಕೆಳಗಿಳಿಸುವುದೇ ಮುಖ್ಯ ಗುರಿ ಟಿಡಿಪಿ ಅಧಿನಾಯಕ ಚಂದ್ರಬಾಬು, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಇಬ್ಬರೂ ಒಂದೇ ಗುರಿ ಹೊಂದಿದ್ದಾರೆ. ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಏರಿದ ಬಳಿಕ ಅಧಿಕಾರ ಯಂತ್ರ ಹಳ್ಳ ಹಿಡಿದಿದೆ. ಮದ್ಯ ನಿಷೇಧ ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಜಗನ್ ತಮ್ಮ ಮಾತು ತಪ್ಪಿದ್ದಾರೆ. ಮದ್ಯ ನಿಷೇಧದ ಬದಲಿಗೆ ಕಡಿಮೆ ಬೆಲೆಯ ಕಳಪೆ ಮದ್ಯ ಪೂರೈಸುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ, ಮರಳಿನ ಬೆಲೆ ನಿಯಂತ್ರಣ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದಿದ್ದ ಜಗನ್ ಅದನ್ನೂ ಮಾಡಿಲ್ಲ.
ಸರ್ಕಾರಿ ಸೇವೆಗಳನ್ನು ಮನೆ ಮನೆಗೆ ತಲುಪಿಸಲು ನೇಮಿಸಿದ್ದ ಸ್ವಯಂ ಸೇವಕರಲ್ಲಿ ಬಹುತೇಕರು ವೈ ಎಸ್ ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂಬ ಆರೋಪವನ್ನು ಪವನ್ ಕಲ್ಯಾಣ್ ಮಾಡಿದ್ದರು. ಅಲ್ಲದೇ ಚುನಾವಣೆಗೆ ಎರಡು ವರ್ಷ ಮೊದಲೇ ಈ ಬಾರಿ ವೈ ಎಸ್ ಆರ್ ಕಾಂಗ್ರೆಸ್ ವಿರುದ್ಧ ಇರುವ ಮತಗಳು ಚದುರಲು ಬಿಡಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದರು. ಇದಕ್ಕಾಗಿ ಅವರು ಮಾಡಬೇಕಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ಇದೇ ಕಾರಣಕ್ಕೆ ಒಂದೆಡೆ ಬಿಜೆಪಿ ಮತ್ತೊಂದೆಡೆ ತೆಲುಗು ದೇಶಂ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೇಗಾದರೂ ಮಾಡಿ ಜಗನ್ ಮೋಹನ್ ರೆಡ್ಡಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪವನ್, ಚಂದ್ರಬಾಬು ಎಲ್ಲ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
ಎನ್ ಡಿಎ ಜೊತೆಗಿದ್ದರೆ ಟಿಡಿಪಿಗೆ ಲಾಭ.. ಇಲ್ಲದಿದ್ದರೆ ನಷ್ಟ..!
ಚಂದ್ರಬಾಬು ನಾಯ್ಡು ಎನ್ ಡಿಎ ಜೊತೆ ಈ ಹಿಂದೆ ಎರಡು ಬಾರಿ ಮೈತ್ರಿ ಮಾಡಿಕೊಂಡಿದ್ದಾರೆ. ಎನ್ ಡಿಎ ಜೊತೆ ಟಿಡಿಪಿ ಜೊತೆಯಾಗಿರುವಾಗ ತೆಲುಗು ದೇಶಂ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಸಿಕ್ಕಿವೆ, ಶೇಕಡವಾರು ಮತ ಪ್ರಮಾಣವೂ ಹೆಚ್ಚಾಗಿದೆ. 2002ರಲ್ಲಿ ಗೋಧ್ರಾ ಹತ್ಯಾಕಾಂಡ, ಗೋಧ್ರೋತ್ತರ ಗಲಭೆ ಕಾರಣ ನೀಡಿ ಚಂದ್ರಬಾಬು ಎನ್ ಡಿಎ ಮೈತ್ರಿಕೂಟಕ್ಕೆ ತಿಲಾಂಜಲಿ ನೀಡಿದ್ದರು. ಇದಾದ ಬಳಿಕ 2004ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರವನ್ನೇ ಕಳೆದುಕೊಂಡರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಆಂಧ್ರ ಪ್ರದೇಶ ವಿಭಜನೆ ಮಾಡಿದ ನಂತರ ಚಂದ್ರಬಾಬು ನಾಯ್ಡು ಮತ್ತೆ ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದರು.
ಇದಾದ ಬಳಿಕ 2014ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರ ಪಡೆದಿದ್ದರು. ಆಗಲೂ ಟಿಡಿಪಿ-ಜನಸೇನಾ-ಬಿಜೆಪಿ ಮೂರು ಮೈತ್ರಿ ಮಾಡಿಕೊಂಡಿದ್ದವು. ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದ ಚಂದ್ರಬಾಬು ಕೇಂದ್ರ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದರು. ಮೈತ್ರಿಯಾಗುವ ವೇಳೆ ವಿಶೇಷ ಪ್ಯಾಕೇಜ್, ಪೋಲವರಂ ಯೋಜನೆಗೆ ಹೆಚ್ಚಿನ ನೆರವು ಸೇರಿ ಅನೇಕ ಭರವಸೆ ನೀಡಲಾಗಿತ್ತು. ಈ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಎನ್ ಡಿಎಗೆ ವಿದಾಯ ಹೇಳಿದ್ದರು. ಬಳಿಕ 2019ರಲ್ಲಿ ನಡೆದ ಚುನಾವಣೆಯಲ್ಲಿ ಚಂದ್ರಬಾಬು ಅಧಿಕಾರ ಕಳೆದುಕೊಂಡಿದ್ದರು. ಹೀಗಾಗಿ ಟಿಡಿಪಿ ಎನ್ ಡಿಎ ಜೊತೆಗಿದ್ದರೆ ಲಾಭ ಪಡೆಯುತ್ತೆ, ಎನ್ ಡಿಎ ಕೈ ಬಿಟ್ಟರೆ ನಷ್ಟ ಅನುಭವಿಸುತ್ತೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?