Featured
ದರ್ಶನ್ – ರಕ್ಷಿತಾ ಜೋಡಿಯ ಕಲಾಸಿಪಾಳ್ಯ ಸಿನಿಮಾಗೆ 15 ವರ್ಷ : ದಾಖಲೆಗಳ ದರ್ಶನ ಆಗಿದ್ದು ಹೇಗೆ..?

ರೈಸಿಂಗ್ ಕನ್ನಡ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಸ್ಯಾಂಡಲ್ ವುಡ್ ನಲ್ಲಿ ನಂಬರ್ ಒನ್ ಪಟ್ಟ ತಂದು ಕೊಟ್ಟ ಸಿನಿಮಾ ಅಂದ್ರೆ ಕಲಾಸಿಪಾಳ್ಯ. 2004ರ ಅಕ್ಟೋಬರ್ 15ರಂದು ತೆರೆ ಕಂಡಿತ್ತು ಕಲಾಸಿಪಾಳ್ಯ. ಓಂ ಪ್ರಕಾಶ್ ನಿರ್ದೇಶನದ ಕಲಾಸಿಪಾಳ್ಯ ಸೂಪರ್ ಹಿಟ್ ಆಗಿತ್ತು. ಕನ್ನಡ ಸಿನಿಮಾದಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿ ಆ ಕಾಲಕ್ಕೆ ಹೆಸರು ಮಾಡಿತ್ತು.
ದರ್ಶನ್ ಗೆ ಮಾಸ್ ಹೀರೋ ಪಟ್ಟವನ್ನ ಗಟ್ಟಿ ಮಾಡಿದ ಸಿನಿಮಾ ಇದು. ಅಲ್ಲದೆ, ರಕ್ಷಿತಾ ಡ್ಯಾನ್ಸ್, ಹಾಡು ಚಿತ್ರಕ್ಕೆ ಹೈಲೆಟ್ ಆಗಿತ್ತು. ಸಾಧು ಕೋಕಿಲಾ ಮ್ಯೂಸಿಕ್ ಕಲಾಸಿಪಾಳ್ಯದ ಜೀವ ಅಂದ್ರೆ ತಪ್ಪಲ್ಲ. ಅಲ್ಲದೆ, ಸಾಧು ಕಾಮಿಡಿ ಕೂಡ ಇದಕ್ಕೆ ಸೂಪರ್ ಮಸಾಲದಂತೆ ಕೆಲಸ ಮಾಡ್ತು.
ದರ್ಶನ್ ಫೈಟ್ಸ್, ಡೈಲಾಗ್ಸ್, ಆಕ್ಷನ್ ಸೀನ್ಸ್ ಮಾಸ್ ಪ್ರೇಕ್ಷಕರನ್ನ ಪದೇ ಪದೇ ಥಿಯೇಟರ್ ಗೆ ಬರುವಂತೆ ಮಾಡ್ತು. ಒಟ್ನಲ್ಲಿ ದರ್ಶನ್ ಮಾಸ್ ಮಸಾಲ ಸಿನಿಮಾ ಕಲಾಸಿಪಾಳ್ಯ ಬಿಡುಗಡೆಯಾಗಿ 15 ವರ್ಷವಾದ್ರೂ, ಈಗಲೂ ನೆನಪಿನಲ್ಲಿ ಉಳಿಯುವಂತ ಸಿನುಮಾ ಅಂದ್ರೆ ತಪ್ಪಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?