ರಾಜಕೀಯ
ಮೈಸೂರಿನ ಅಗ್ರಹಾರದಲ್ಲಿ ಕೇಂದ್ರ ಸರ್ಕಾರದ ಭಾರತ್ ಅಕ್ಕಿಗಾಗಿ ಕಿತ್ತಾಟ
ಮೈಸೂರು ; ಭಾರತ್ ರೈಸ್ಗಾಗಿ ಮೈಸೂರಿನ ಅಗ್ರಹಾರದಲ್ಲಿ ಕಿತ್ತಾಟ ನಡೆದಿದೆ. ಅಗ್ರಹಾರದ ವೃತ್ತದಲ್ಲಿ ಸಂಸದ ಪ್ರತಾಪ್ ಸಿಂಹ ಭಾರತ್ ಅಕ್ಕಿ ವಿತರಣೆಗೆ ಚಾಲನೆ ನೀಡಿದರು. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದು ಅಕ್ಕಿಗಾಗಿ ನೂಕಾಟ-ತಳ್ಳಾಟ ನಡೆದಿದೆ.
ಮೈಸೂರಿನ ಅಗ್ರಹಾರ ವೃತ್ತ, ಕುವೆಂಪುನಗರದ ಶಾಂತಿಸಾಗರ್ ಬಳಿ, ವಿವೇಕಾನಂದ ವೃತ್ತ ಹಾಗೂ ಚಾಮುಂಡಿಪುರಂ ವೃತ್ತದಲ್ಲಿಂದು ಭಾರತ್ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ತಲಾ 10 ಕೆಜಿ ಭಾರತ್ ಅಕ್ಕಿ ಚೀಲವನ್ನು 290 ರೂಪಾಯಿ ನೀಡಿ ಜನರು ಖರೀದಿಸುತ್ತಿದ್ದಾರೆ. ಒಂದು ಕೆಜಿ ಅಕ್ಕಿಗೆ 29 ರೂಪಾಯಿಯಂತೆ 10 ಕೆಜಿ ಅಕ್ಕಿಗೆ 290 ರೂಪಾಯಿ ನಿಗದಿ ಮಾಡಲಾಗಿದೆ.
ಬಡ, ಮಧ್ಯಮ, ಮೇಲ್ವರ್ಗದ ಜನರನ್ನು ಗುರಿಯಾಗಿಸಿಕೊಂಡು ಭಾರತ್ ಅಕ್ಕಿ ಮಾರಾಟಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅದರಂತೆ ಇಂದು ಸಾವಿರಾರು ಮಂದಿ ಭಾರತ್ ಅಕ್ಕಿಯನ್ನು ಖರೀದಿ ಮಾಡಿದ್ದಾರೆ. ಮೈಸೂರಿನ ನಗರ ಭಾಗದಲ್ಲಿ ಪ್ರಮುಖ ವೃತ್ತಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?