Connect with us

ವೈರಲ್

ಸುಂದರ ನಗುವಿನ ಚಿಕಿತ್ಸೆಗೆ ಒಳಪಡ್ತೀರಾ..?
ಡೆಂಟಲ್ ಕ್ಲಿನಿಕ್ ಗೆ ಹೋಗೋ ಮುನ್ನ ಎಚ್ಚರ..!

ಇತ್ತೀಚೆಗೆ ಕೃತಕ ನಗು ಪಡೆಯಲು ಹಲ್ಲುಗಳನ್ನ ಸ್ಮೈಲ್ ಡಿಸೈನಿಂಗ್ ಮಾಡಿಸೋರ ಸಂಖ್ಯೆ ಹೆಚ್ಚಾಗಿದೆ. ಇದಕ್ಕಾಗಿ ಯುವಕ ಯುವತಿಯರು ಡೆಂಟಲ್ ಕ್ಲಿನಿಕ್ ಮೊರೆ ಹೋಗುತ್ತಿದ್ದಾರೆ. ಈ ರೀತಿ ಹೋಗುವ ಮುನ್ನ ಈ ಸ್ಟೋರಿಯನ್ನ ಪೂರ್ತಿಯಾಗಿ ಓದಿ. ನಗುವನ್ನು ಹೆಚ್ಚಿಸಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಫೆಬ್ರವರಿ 16ರಂದು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಎಫ್‌ಎಂಎಸ್ ಇಂಟರ್‌ನ್ಯಾಶನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಲಕ್ಷ್ಮೀ ನಾರಾಯಣ ವಿಂಜಮ್‌ ಎಂಬ ವ್ಯಕ್ತಿ ‘ಸ್ಮೈಲ್ ಡಿಸೈನಿಂಗ್’ ಪ್ರಕ್ರಿಯೆಗೆ ಒಳಗಾಗುವಾಗ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀ ನಾರಾಯಣ ವಿಂಜಮ್‌ ಅನಸ್ತೇಶಿಯಾ ಒವರ್‌ಡೋಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮುಲು ವಿಂಜಮ್‌, ಶಸ್ತ್ರ ಚಿಕಿತ್ಸೆ ವೇಳೆ ಲಕ್ಷ್ಮೀ ನಾರಾಯಣ ಪ್ರಜ್ಞೆ ತಪ್ಪಿದ ನಂತರ ಸಿಬ್ಬಂದಿ ಕರೆ ಮಾಡಿ ಕ್ಲಿನಿಕ್‌ಗೆ ಬರುವಂತೆ ಹೇಳಿದರು. ತಕ್ಷಣವೇ ಹೋಗಿ ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದರು. ಶಸ್ತ್ರ ಚಿಕಿತ್ಸೆ ಬಗ್ಗೆ ಮಗ ನಮಗೆ ತಿಳಿಸಿರಲಿಲ್ಲ. ಆತನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅವನ ಸಾವಿಗೆ ವೈದ್ಯರೇ ಕಾರಣ ಎಂದು ರಾಹುಲ್‌ ವಿಂಜಮ್‌ ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜುಬಿಲಿ ಹಿಲ್ಸ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಕೆ ವೆಂಕಟೇಶ್‌ ರೆಡ್ಡಿ, ಫೆಬ್ರವರಿ 16ರಂದು ಮಧ್ಯಾಹ್ನ 2.30ರ ಸುಮಾರಿಗೆ ಲಕ್ಷ್ಮೀ ನಾರಾಯಣ್‌ ಕ್ಲಿನಿಕ್‌ಗೆ ಹೋಗಿದ್ದರು. ಸಂಜೆ 4.30ರ ಸುಮಾರಿಗೆ ಆತನನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಯಿತು. ಆಪರೇಷನ್‌ ಥಿಯೇಟರ್‌ನಲ್ಲಿ ಎರಡು ಗಂಟೆಗಳ ಕಾಲ ಆಪರೇಷನ್‌ ಪ್ರಕ್ರಿಯೆ ನಡೆದಿದೆ. ಸಂಜೆ 7 ರ ಸುಮಾರಿಗೆ ಕ್ಲಿನಿಕ್‌ನವರು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಆತನನ್ನು ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಲಕ್ಷ್ಮೀ ನಾರಾಯಣ್‌ ಸಾವನ್ನಪ್ಪಿದ್ದ ಎಂದು ಹೇಳಿದ್ದಾರೆ.

ಲಕ್ಷ್ಮೀ ನಾರಾಯಣ್‌ ವಂಜಮ್‌ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೆ ವೆಂಕಟೇಶ್‌ ರೆಡ್ಡಿ ಹೇಳಿದ್ದಾರೆ. ವಾರದ ಹಿಂದೆಯಷ್ಟೇ ಲಕ್ಷ್ಮೀ ನಾರಾಯಣ್‌ಗೆ ನಿಶ್ಚಿತಾರ್ಥ ಆಗಿ, ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು. ಆದರೆ, ಮದುವೆಗೂ ಮುನ್ನ ನಗುವನ್ನು ಹೆಚ್ಚಿಸಿಕೊಳ್ಳಲು ಹೋದ ಯುವಕ ಈಗ ಸಾವಿಗೀಡಾಗಿದ್ದಾನೆ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ