Featured
#ByElection : ಕಂಡ ಕಂಡ ಕಡೆಯಲ್ಲಿ ಚಡ್ಡಿ ಬಿಚ್ಚಬಾರದು, ಶಾಸಕರ ತಲೆ ಹಿಡಿದವ ನೀನು : ವಿಶ್ವನಾಥ್ ವಿರುದ್ಧ ಸಾ.ರಾ. ಮಹೇಶ್ ರೋಶಾವೇಷ

ಮೈಸೂರು : ಕೋತಿಯಂತೆ ತಾನು ತಿಂದು ಮೇಕೆ ಬಾಯಿಗೆ ವರ್ಸೋಕೆ ಹೋಗ್ತಿರಲ್ಲ. ಹೇ, ನೀನು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಿಯಾ. ನಿನ್ನಂತ ಜೀವನ ನಾನೇನಾದ್ರೂ ಮಾಡಿದ್ರೆ ಹೋಳೆಯೋ, ಕೆರೆಯೋ ನೋಡ್ಕೊಂಡು ಹೋಗ್ತಿದ್ದೆ. ನಾನಾ ಅಯೋಗ್ಯ.? ಇಲ್ಲ ನೀವಾ.? ಅಯೋಗ್ಯರ..? ಎಂದು ತಿಳಿದುಕೊಳ್ಳಿ ಅಂತ ಅನರ್ಹ ಶಾಸಕರ ವಿಶ್ವನಾಥ್ ವಿರುದ್ಧ ಸಾ.ರಾ. ಮಹೇಶ್ ಆಕ್ರೋಶ ಹೊರಹಾಕಿದ್ರು.
ಇಷ್ಟೇ ಅಲ್ಲದೆ, ಚಡ್ಡಿ ಹೊಗೆದ್ರೆ ಪರವಾಗಿಲ್ಲ. ಆದ್ರೆ, ಕಂಡ ಕಂಡ ಕಡೆಯಲ್ಲಿ ಚಡ್ಡಿ ಬಿಚ್ಚಬಾರದು ಎಂದು ಹೀಯಾಳಿಸಿದ್ರು. ನಮ್ಮ ಶಾಸಕರನ್ನ ಬೇರೆ ಪಕ್ಷಕ್ಕೆ ತಲೆ ಹಿಡಿದವನು ನೀನು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿ, ನಮ್ಮಪಕ್ಷದ ತಲೆ ಕಾಯಬೇಕಾದವನು ನೀನು. ಆದ್ರೆ, ಬಾಂಬೆಗೆ ಹೋಗಿ ಬೇರೆ ಪಕ್ಷಕ್ಕೆ ನಮ್ಮ ಶಾಸಕರನ್ನ ತಲೆ ಹಿಡಿದವ ನೀನು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು.
ಅಲ್ಲದೆ, ನೀವು ವಕೀಲ ವೃತ್ತಿ ಮಾಡುವಾಗ ನೆನಪಿದೆಯಾ ಆದ ಘಟನೆಗಳು. ಓರ್ವ ವಿಧವೆ ಮಹಿಳೆ ನ್ಯಾಯಕ್ಕಾಗಿ ಮನೆಗೆ ಬಂದಾಗ. ಆಕೆಯ ಜೊತೆ ನೀವು ಹೇಗೆ ನಡೆದುಕೊಂಡ್ರಿ ಎಂದು. ಆ ನಂತರ ಮನೆಗೆ ಬಂದಾಗ ಹೇಗೆ ಬಾಗಿಲು ಹಾಕಿಕೊಂಡ್ರು. ಎಲ್ಲವು ಕೂಡ ನಮಗೆ ಗೊತ್ತಿದೆ ಎಂದು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ರು.
ಇಷ್ಟೆಲ್ಲಾ ಹೇಳಿದ ಸಾ.ರಾ. ಮಹೇಶ್, ಆದ್ರೆ, ನಾನು ವೈಯಕ್ತಿಕವಾಗಿ ಯಾರ ಬಗ್ಗೆಯು ತೇಜೋವದಧೆ ಮಾಡಿಲ್ಲ ಎಂದ್ರು. ಅನರ್ಹರಾದ ಬಳಿಕ ಹೆಚ್.ವಿಶ್ವನಾಥ್, ಹುಚ್ ವಿಶ್ವನಾಥ್ ಆಗಿದ್ದಾರೆ. ಕರೆದುಕೊಂಡು ಹೋಗಿ ಮೊದಲು ಅವ್ರಿಗೆ ನಿಮಾನ್ಸ್ಗೆ ಸೇರಿಸಿ ಎಂದು ವ್ಯಂಗ್ಯವಾಡಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?