Featured
#ByElection : ಶರತ್ ಬಚ್ಚೇಗೌಡಗೆ ಬಿಜೆಪಿ ಟಿಕೆಟ್ ಇಲ್ಲ : MTB ನಾಗರಾಜ್ ವಿರುದ್ಧ ಬಂಡಾಯ ಅಭ್ಯರ್ಥಿ ಆಗ್ತಾರಾ ಬಚ್ಚೇಗೌಡರ ಮಗ..?
ಬೆಂಗಳೂರು : ಉಪ ಚುನಾವಣಾ ಕಣ ರಂಗೇರಿದೆ. ಅನರ್ಹ ಶಾಸಕರಿಗೆ ಅಥವಾ ಅವರ ಕುಟುಂಬದವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದಂತೆ ಕಾಣ್ತಿದೆ. ಇತ್ತ, ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಈವರೆಗೆ ಬಿಜೆಪಿ ಅಭ್ಯರ್ಥಿಗಳಾಗಿದ್ದವರು ರೆಬೆಲ್ಗಳಾಗೋ ಲಕ್ಷಣಗಳು ಕಾಣ್ತಿವೆ. ಈಗಾಗಲೇ ಹೊಸಕೋಟೆ ಕ್ಷೇತ್ರ ರಣರಂಗದಂತೆ ಕಾಣ್ತಿದೆ.
ಕಾಂಗ್ರೆಸ್ನಲ್ಲಿದ್ದ ಎಂಟಿಬಿ ನಾಗರಾಜ್ಗೆ ಮೊದಲಿನಿಂದಲೂ ಪೈಪೋಟಿ ನೀಡಿ, ಬಿಜೆಪಿಯನ್ನ ಕಟ್ಟಿ ಬೆಳೆಸಿದ್ದು ಬಚ್ಚೇಗೌಡ. ಬಚ್ಚೇಗೌಡ ಚಿಕ್ಕಬಳ್ಳಾಪುರ ಸಂಸದರಾದ ಬಳಿಕ ಅವರ ಪುತ್ರ ಶರತ್ ಬಚ್ಚೇಗೌಡ ಕೂಡ ಎಂಟಿಬಿ ನಾಗರಾಜ್ ಎದುರಾಳಿಯಾಗಿ ಕಳೆದ ಚುನಾವಣೆಯಲ್ಲಿ ಕಣಕ್ಕೆ ಇಳಿದಿದ್ರು. ಆದ್ರೀಗ, ಶರತ್ ಬಚ್ಚೇಗೌಡಗೆ ಬಿಜೆಪಿ ಟಿಕೆಟ್ ನೀಡಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರಂತೆ.
ಎಂಟಿಬಿ ನಾಗರಾಜ್ ನಮ್ಮನ್ನೇ ನಂಬಿ ಬಂದಿದ್ದಾರೆ. ಅವರಿಂದಾಗಿಯೇ ನಾವು ಇವತ್ತು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ಹೀಗಾಗಿ, ನಂಬಿದವರಿಗೆ ಮೋಸ ಮಾಡಲು ಆಗಲ್ಲ. ಎಂಟಿಬಿಗೆ ಹೊಸಕೋಟೆ ಟಿಕೆಟ್ ಖಚಿತ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶರತ್ ಬಚ್ಚೇಗೌಡ ಹಾಗೂ ಬೆಂಬಲಿಗರಿಗೆ ಯಡಿಯೂರಪ್ಪ ಈ ರೀತಿ ಹೇಳಿರೋದು ಆಕ್ರೋಶ ಹಾಗೂ ಬೇಸರಕ್ಕೆ ಕಾರಣವಾಗಿದೆ.
ಇದರಿಂದಾಗಿ ಶರತ್ ಬಚ್ಚೇಗೌಡ ಮುಂದೇನು ಮಾಡಬೇಕು ಅನ್ನೋದು ತೋಚದೆ ಕಂಗಾಲಾಗಿದ್ದಾರೆ. ಯಾಕಂದ್ರೆ, ಬಚ್ಚೇಗೌಡ ಬಿಜೆಪಿಯ ಸಂಸದರು. ಹೀಗಾಗಿ, ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿ ಆಗ್ತಾರಾ..? ಅಥವಾ ಕಾಂಗ್ರೆಸ್ನಿಂದ ಕಣಕ್ಕೆ ಇಳೀತಾರಾ ಗೊತ್ತಿಲ್ಲ. ಈಗಾಗ್ಲೇ ಸಿದ್ದರಾಮಯ್ಯ ಅವರ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ಶರತ್ ಬಚ್ಚೇಗೌಡ ಮುಗಿಸಿದ್ದಾರೆ. ಆದ್ರೆ, ಬಚ್ಚೇಗೌಡರು ಇದಕ್ಕೆ ಒಪ್ತಾರಾ..? ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ಇತ್ತ ಶರತ್ ಬಚ್ಚೇಗೌಡಗೆ ಮಾತ್ರ ಹೊಸಕೋಟೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ. ಇವತ್ತು ಸಿಎಂ ಯಡಿಯೂರಪ್ಪ ಮನೆ ಮುತ್ತಿಗೆ ಯತ್ನವೂ ನಡೆದಿದೆ. ಫೇಸ್ಬುಕ್ನಲ್ಲಿ, ಟ್ವಿಟ್ಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶರತ್ ಬಚ್ಚೇಗೌಡ ಪರ ಅಭಿಯಾನ ಶುರುವಾಗಿದೆ. ಅಲ್ಲದೆ, ಎಂಟಿಬಿ ನಾಗರಾಜ್ ಅವರನ್ನ ಬಿಜೆಪಿಗರೇ ಸೋಲಿಸೋದಾಗಿ ಶರತ್ ಬಚ್ಚೇಗೌಡ ಅಭಿಮಾನಿಗಳು ಪೋಸ್ಟ್ ಮಾಡ್ತಿದ್ದಾರೆ.
ಹೀಗಾಗಿ, ಶರತ್ ಬಚ್ಚೇಗೌಡ ಮುಂದಿನ ನಡೆ ಏನು ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?