Featured
ಯಡಿಯೂರಪ್ಪ ನನ್ನ ನಂಬರ್ ಒನ್ ಶತ್ರು..! ಆದ್ರೆ, BSY ಇಲ್ಲಾಂದ್ರೆ ಬಿಜೆಪಿ ಇಲ್ಲ : ವಾಟಾಳ್ ನಾಗರಾಜ್ ಹೀಗೆ ಹೇಳಿದ್ಯಾಕೆ.?
ಚಾಮರಾಜನಗರ : ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ನಂಬರ್ ಒನ್ ಶತ್ರು. ಯಡಿಯೂರಪ್ಪ ಬಗ್ಗೆ ನನಗೇನು ಒಳ್ಳೆಯ ಅಭಿಪ್ರಾಯ ಇಲ್ಲ. ಹತ್ತು ವರ್ಷಗಳ ಕಾಲ ನನ್ನ ವಿರುದ್ಧ ಕ್ಯಾಂಡಿಡೇಟ್ ಹಾಕಿದ್ರು.. ಮುಖ್ಯಮಂತ್ರಿ ಆದಮೇಲೂ ಒಂದೇ ಒಂದು ದಿನ ಹೋಗಿ ಭೇಟಿಯಾಗಿಲ್ಲ. ನನ್ನಪಾಡಿಗೆ ನಾನು, ಇದ್ದೀನಿ.. ಅವನ ಪಾಡಿಗೆ ಅವನಿದ್ದಾನೆ.. ಹೀಗೆ ಹೇಳಿದ್ದು ವಾಟಾಳ್ ನಾಗರಾಜ್.
ಚಾಮರಾಜನಗರದಲ್ಲಿ ಮಾತ್ನಾಡಿದ ವಾಟಾಳ್, ಒಂದ್ ಕಡೆ ಯಡಿಯೂರಪ್ಪ ಅವರನ್ನ ತೆಗಳಿ ಮತ್ತೊಂದು ಕಡೆ ಹೊಗಳಿದ್ರು. ಯಡಿಯೂರಪ್ಪ ನನಗೆ ಬಂಬರ್ ಒನ್ ಶತ್ರು. ಅದರಲ್ಲಿ ಎರಡು ಮಾತೇ ಇಲ್ಲ ಎಂದ ವಾಟಾಳ್, ಯಡಿಯೂರಪ್ಪ ಇಲ್ಲದೆ ಬಿಜೆಪಿ ಇಲ್ಲ, ಯಡಿಯೂರಪ್ಪ ಇಲ್ಲದೆ ಯಾವ ಈಶ್ವರಪ್ಪನೂ ಇಲ್ಲ ಗಣೇಶಪ್ಪನೂ ಇಲ್ಲ ಎಂದು ಬಿಎಸ್ವೈ ಅವರನ್ನ ವಾಟಾಳ್ ಹೊಗಳಿದ್ರು.
ಒಂಡ್ ಕಡೆ ನನಗೆ ಶತ್ರು ಯಡಿಯೂರಪ್ಪ ಎಂದ ವಾಟಾಳ್, ಮತ್ತೊಂದು ಕಡೆ ಯಡಿಯೂರಪ್ಪ ಅವರಿಂದಲೇ ಬಿಜೆಪಿ ನಿಂತಿದೆ ಎಂದ್ರು. ಇದೇ ವೇಳೆ, ಬಂಡಿಪುರ ಮಾರ್ಗ ರಾತ್ರಿ ಸಂಚಾರ ನಿಷೇಧ ಮುಂದುವರೆಸಬೇಕು. ಯಾರ ಲಾಬಿಗೂ ಒಳಗಾಗಬಾರದು ಎಂದು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಕೂಡ ನಡೆಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?