ಬೆಂಗಳೂರು
ಬೆಂಗಳೂರಿನಲ್ಲಿ ಬತ್ತಿ ಹೋಗಿವೆ ಬೋರ್ವೆಲ್ಸ್: ಬೇಸಿಗೆಗೂ ಮುನ್ನವೇ ನೀರಿಗಾಗಿ ಹಾಹಾಕಾರ
![](https://risingkannada.com/wp-content/uploads/2024/02/water2-1.jpg)
ಬೆಂಗಳೂರು : ಬೆಂಗಳೂರು ನಗರಕ್ಕೆ ವಾರ್ಷಿಕ ಸುಮಾರು 10 ರಿಂದ 15 ಟಿಎಂಸಿ ಕುಡಿಯುವ ನೀರು ಬೇಕು. ಆದರೆ ಬೇಸಿಗೆ ಆರಂಭದ ದಿನಗಳಲ್ಲೇ ಬೋರ್ ವೆಲ್ಗಳು ಬತ್ತಿ ಹೋಗ್ತಿವೆ. ಈಗಾಗಲೇ 800ಕ್ಕೂ ಹೆಚ್ಚಿನ ಬೋರ್ ವೆಲ್‌ಗಳು ಬತ್ತಿಹೋಗಿವೆ.
ಬೇಸಿಗೆ ಆರಂಭದಲ್ಲೇ ಬರದ ಛಾಯೆ ಆವರಿಸುತ್ತಿದೆ. ಬೋರ್ ವೆಲ್ ಅಂಕಿ ಅಂಶಗಳನ್ನ ನೋಡಿದರೆ ಹೇಗಪ್ಪ ಈ ಬಾರಿಯ ಕಥೆ ಅನ್ನೋ ಆತಂಕ ಶುರುವಾಗುತ್ತದೆ. ಈಗಾಗಲೇ ನಗರದ ಅರ್ಧಕ್ಕರ್ಧ ಬೋರ್ ವೆಲ್‌ಗಳು ಬೇಸಿಗೆ ಆರಂಭದಲ್ಲೇ ಬತ್ತಿ ಹೋಗಿವೆ.
ಈ ಬಾರಿ ಮಳೆ ಕೈ ಕೊಟ್ಟಿದ್ರಿಂದ ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ ಶುರುವಾಗಿದೆ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರಿಗೆ ಸುಮಾರು 10 ರಿಂದ 15 ಟಿಎಂಸಿ ನೀರು ಬೇಕು. ಆದ್ರೇ ಬೇಸಿಗೆ ಆರಂಭದ ದಿನಗಳಲ್ಲೇ ಬೋರ್ ವೆಲ್ಗಳು ಬತ್ತಿ ಹೋಗ್ತಿವೆ. ಈಗಾಗಲೇ 800 ಕ್ಕೂ ಹೆಚ್ಚಿನ ಬೋರ್ ವೆಲ್‌ಗಳು ಬತ್ತಿಹೋಗಿವೆ. ಇನ್ನೊಂದು ತಿಂಗಳಲ್ಲಿ 11 ಸಾವಿರ ಬೋರ್ ವೆಲ್ ಪೈಕಿ ಅರ್ಧಕ್ಕರ್ಧ ಬತ್ತಿ ಹೋಗುವ ಸಾಧ್ಯತೆ ಹೆಚ್ಚಾಗಿದೆ.
![](https://risingkannada.com/wp-content/uploads/2024/03/watert-1024x1024.jpg)
ಬೇಸಿಗೆಯಲ್ಲಿ ನೀರಿನ ಬಳಕೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಉಷ್ಣಾಂಶ ಹೆಚ್ಚಾಗುವ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉಷ್ಣಾಂಶ ಹೆಚ್ಚಳದಿಂದ ಅಂತರ್ಜಲ ಮಟ್ಟ ಇನ್ನಷ್ಟು ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಬೋರ್ ವೆಲ್ ನೀರನ್ನ ಆಶ್ರಯಿಸಿದ್ದವರು ವಿಧಿಯಿಲ್ಲದೇ ಕಾವೇರಿ ನೀರನ್ನೇ ಆಶ್ರಯಿಸಬೇಕಾಗುತ್ತೆ.
ಬೆಂಗಳೂರು ಪೂರ್ವದಲ್ಲಿ 83 ಬೋರ್ ವೆಲ್ಗಳು ಬತ್ತಿ ಹೋಗಿವೆ. ಇನ್ನು ಬೆಂಗಳೂರು ಪಶ್ಚಿಮದಲ್ಲಿ 450 ಬೋರ್ ವೆಲ್ಸ್ ನಲ್ಲಿ ನೀರೇ ಇಲ್ಲ. ಬೆಂಗಳೂರು ಉತ್ತರದಲ್ಲಿ 168 ಹಾಗೂ ಬೆಂಗಳೂರು ದಕ್ಷಿಣದಲ್ಲಿ 124 ಬೋರ್ ವೆಲ್ಗಳು ಬತ್ತಿ ಹೋಗಿವೆ. ಬೆಂಗಳೂರಲ್ಲಿ ಒಟ್ಟು11,614 ಬೋರ್ ವೆಲ್‌ಗಳಿದ್ದು, ಇದರಲ್ಲಿ 825 ಬೋರ್ ವೆಲ್ ಈಗಾಗಲೇ ಬತ್ತಿ ಹೋಗಿವೆ. ಬೇಸಿಗೆ ವೇಳೆ ಶೇ. 10-20 ರಷ್ಟು ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ. ಮತ್ತಷ್ಟು ಬೋರ್‌ವೆಲ್‌ಗಳು ಬಿಸಿಲ ಬೇಗೆಯಲ್ಲಿ ಬತ್ತಿಹೋಗುವ ಭೀತಿ ಜಲಮಂಡಳಿ ಜೊತೆಗೆ ಜನರನ್ನು ಕಂಗಾಲಾಗಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?