Health tips : ಬೇಸಿಗೆಗಾಲದಲ್ಲಿ ಮಾಡಿ ತಿನ್ನುವಂತ ಸ್ನ್ಯಾಕ್ಸ್ನಲ್ಲಿ ಹೆಸರುಬೇಳೆ ಬೋಂಡಾ ತುಂಬಾ ಬೆಸ್ಟ್ ಎಂದೇ ಹೇಳಬಹುದು. ಇದು ದೇಹಕ್ಕೆ ತಂಪು ನೀಡುವ ಜೊತೆಗೆ ನಾಲಿಗೆಗೆ ಹೊಸ ಟೇಸ್ಟ್ ಕೂಡ ನೀಡುತ್ತದೆ. ಹೆಸರುಬೇಳೆ ಬೋಂಡಾ ಮಾಡಿಟ್ಟ ಐದೇ ನಿಮಿಷದಲ್ಲಿ ಎಲ್ಲಾ ಖಾಲಿ ಮಾಡುವಷ್ಟು ರುಚಿಕರವಾಗಿರುತ್ತದೆ. ಹೆಸರುಬೇಳೆ ನೆನೆಸಿಟ್ಟಿದ್ದರೆ, ಐದೇ ನಿಮಿಷದಲ್ಲಿ ಬೋಂಡಾ ತಿನ್ನುವುದಕ್ಕೆ ರೆಡಿಯಾಗುತ್ತದೆ. ಹಾಗಾದ್ರೆ ಯಾವ ರೀತಿ ಹೆಸರುಬೇಳೆ ಬೋಂಡಾ ಮಾಡೋದು ಅಂತ ನೋಡೋಣ.
ಹೆಸರುಬೇಳೆ ಬೋಂಡಾ ಮಾಡಲು ಬೇಕಾಗುವ ಸಾಮಾಗ್ರಿಗಳು
. ಹೆಸರುಬೇಳೆ – 1 ಕಪ್
. ಕರಿಮೆಣಸಿನಪುಡಿ – ಅರ್ಧ ಟೀ ಸ್ಪೂನ್
. ಹಸಿಮೆಣಸಿನಕಾಯಿ – 5
. ಅಕ್ಕಿಹಿಟ್ಟು – 1 ಟೀ ಸ್ಪೂನ್
. ಉಪ್ಪು – ರುಚಿಗೆ ತಕ್ಕಷ್ಟು
. ಎಣ್ಣೆ – ಕರಿಯಲು ಬೇಕಾಗುವಷ್ಟು
ಮೊದಲಿಗೆ ಹೆಸರುಬೇಳೆಯನ್ನು ತೊಳೆದು 5 ಗಂಟೆಗಳ ಕಾಲ ನೆನೆಸಿಡಬೇಕು. 5 ಗಂಟೆ ನಂತರ ನೆನೆಸಿಟ್ಟಿದ್ದ ಹೆಸರುಬೇಳೆಯನ್ನು ಮಿಕ್ಸಿ ಜಾರ್ ಗೆ ಹಾಕಿ ಮೃದುವಾಗಿ ರುಬ್ಬಿಕೊಳ್ಳಬೇಕು.
ರುಬ್ಬಿಕೊಂಡ ಹೆಸರುಬೇಳೆ ಪೇಸ್ಟ್ ಅನ್ನು ಒಂದು ಬೌಲ್ ಗೆ ಹಾಕಿ, ಅದಕ್ಕೆ ಕರಿಮೆಣಸಿನಪುಡಿ, ಅಕ್ಕಿಹಿಟ್ಟು, ಸಣ್ಣಗೆ ಕಟ್ ಮಾಡಿರುವ ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಹೆಸರುಬೇಳೆ ಬೋಂಡಾ ಮಾಡುವ ವಿಧಾನ
ಈಗ ಸ್ಟೌವ್ ಮೇಲೆ ಬಾಣಲಿ ಇಟ್ಟು ಕರಿಯಲು ಅಗತ್ಯವಿದ್ದಷ್ಟು ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಹೆಸರುಬೇಳೆ ಹಿಟ್ಟನ್ನು ಬೋಂಡಾದಂತೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಬೇಕು.
ಕೊನೆಗೆ ಟೊಮೆಟೋ ಚಟ್ನಿಯೊಂದಿಗೆ ಹೆಸರುಬೇಳೆ ಬೋಂಡಾವನ್ನು ಪ್ಲೇಟ್ ಮೇಲೆ ಸರ್ವ್ ಮಾಡಿದರೆ ತಿನ್ನಲು ಆಹ್ಲಾದಕರವಾಗಿರುತ್ತದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?