Featured
ಕಾರವಾರದಲ್ಲಿ ಗಾಳಿ ರಭಸಕ್ಕೆ ಮಗುಚಿ ಬಿದ್ದ ಬೋಟ್: ಲಕ್ಷಾಂತರ ರೂಪಾಯಿ ನಷ್ಟ
![](https://risingkannada.com/wp-content/uploads/2020/09/Honnavara-1.jpg)
ರೈಸಿಂಗ್ ಕನ್ನಡ:
ಕಾರವಾರ:
ಮಳೆಗಾಲ ಆರಂಭದಲ್ಲಿ ಸಮುದ್ರದಲ್ಲಿ ದುರಂತಗಳು ಸಂಭವಿಸುತ್ತಲ್ಲೇ ಇವೆ. ಆದರೆ ಈ ಬಾರಿ ಮಳೆಗಾಲ ಮುಗಿಯುವ ಕಾಲಕ್ಕೂ ಕಡಲಿನಲ್ಲೊಂದು ದುರಂತ ಸಂಭವಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮುದ್ರದಲ್ಲಿ ದುರಂತವೊಂದು ಸಂಭವಿಸಿದೆ. ಹೊನ್ನಾವರದ ಅಳಿವೆಯಲ್ಲಿ ಮಿನುಗಾರಿಕೆಗೆ ತೆರಳಿದ ಪರ್ಸಿಯನ್ ಬೋಟ್ ವೊಂದು ಸಮುದ್ರ ಪಾಲಾಗಿದೆ. ಅದರಲ್ಲಿದ್ದ ಎಲ್ಲಾ ಮೀನುಗಾರರು ತಕ್ಷಣ ಎಚ್ಚೆತು ಸಮುದ್ರಕ್ಕೆ ದುಮುಕಿ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ಬೆಳಗ್ಗೆ 6.30ಕ್ಕೆ ಹೊನ್ನಾವರ ಮೂಲದ ಪರ್ಸಿಯನ್ ಬೋಟ್ನಲ್ಲಿ ಮೀನುಗಾರಿಕೆಗಾಗಿ ತೆರಳಿ ಸ್ವಲ್ಪ ದೂರ ಸಮುದ್ರದಲ್ಲಿ ತೆರಳುತ್ತಿದ್ದಾಗ ಏಕಾಏಕಿ ಗಾಳಿ ಜೋರಾಗಿ ಶುರುವಾಗಿದೆ. ಇದರಿಂದ ಬೋಟ್ ನಿಯಂತ್ರಣ ಕಳೆದು ಕೊಂಡು ಮುಳುಗುವ ಸ್ಥಿತಿಯನ್ನು ತಲುಪಿದ್ದಾಗ ಬೋಟ್ ಬಚಾವ್ ಮಾಡಲು ಪ್ರಯತ್ನ ನಡೆದಿದೆ. ಆದರೆ ಬೋಟ್ ರಕ್ಷಿಸುವುದು ಅಸಾಧ್ಯ ಆದಾಗ ಮಿನುಗಾರರು ಎಚ್ಚೆತ್ತು ನೀರಿಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಇದ್ದ ಮಿನುಗಾರು ರಕ್ಷಣೆಗೆ ಬಂದಿದ್ದಾರೆ. ಬೋಟ್ ಬಚಾವ್ ಮಾಡಲು ಸಾಧ್ಯವಾಗಲಿಲ್ಲ ಬದಲಾಗಿ ಎಲ್ಲಾ ಮೀನುಗಾರರನ್ನು ಬಚಾವು ಮಾಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಏಕಾಏಕಿ ರಭಸದಲ್ಲಿ ಗಾಳಿ ಬೀಸಿದ್ದರಿಂದ ಪ್ರಸಕ್ತ ಬೋಟ್ ದುರಂತ ಸಂಭವಿಸಿದೆ. ಹೊನ್ನಾವರದ ಅಳಿವೆ ಅಂಚಿನಲ್ಲಿಯೇ ದುರ್ಘಟನೆಗೆ ನಡೆದಿರುವುದರಿಂದ ದೊಡ್ಡ ಪ್ರಮಾಣದ ಅಪಾಯ ತಪ್ಪಿದೆ ಎಂದು ಅನುಭವಿ ಮೀನುಗಾರರು ಹೇಳುತ್ತಿದ್ದಾತೆ.
ಪ್ರಕರಣದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಬೋಟ್ ಹಾಗೂ ಅದರಲ್ಲಿದ್ದ ಲಕ್ಷಾಂತರ ರೂ. ಬೆಲೆಯ ಬಲೆಗಳು ಸಮುದ್ರಪಾಲಾಗಿದೆ.
ಬೋಟ್ ಮುಳುಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಮೀನುಗಾರರು ಎಚ್ಚತ್ತುಕೊಂಡಿದ್ದಾರೆ. ಈ ತರಹದ ಹವಾಮಾನ ವೈಪರಿತ್ಯ ಆಗಾಗ ಆಗುವುದರಿಂದ ಮೀನುಗಾರಿಕೆಗೆ ಅಡ್ಡಿಯಾಗಿ ಅದನ್ನೆ ನಂಬಿದ ಮೀನುಗಾರರ ಬದುಕನ್ನು ದುಸ್ಥರವಾಗಿದ್ದು ಕಷ್ಟಕ್ಕೆ ಸಿಲುಕಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?