Featured
ಚಂದ್ರಶೇಖರ್ ಕಂಬಾರ ಮನೆಗೆ ಜೆ.ಪಿ. ನಡ್ಡಾ ಭೇಟಿ : ಕಾಶ್ಮೀರ, ಸ್ಥಳೀಯ ಭಾಷೆ ವಿಚಾರವಾಗಿ ಚರ್ಚೆ
![](https://risingkannada.com/wp-content/uploads/2019/09/WhatsApp-Image-2019-09-22-at-7.54.19-PM.jpeg)
ಬೆಂಗಳೂರು : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಂದ್ರಶೇಖರ್ ಕಂಬಾರ ನಿವಾಸಕ್ಕೆ ಇವತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡಿದ್ರು. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರೋ ಕಂಬಾರ ಮನೆಗೆ ಭೇಟಿ ನೀಡಿ, 370 ವಿಧಿ ರದ್ದತಿ ಬಗ್ಗೆ ಚರ್ಚೆ ನಡೆಸಿ, ಕಂಬಾರರ ಅಭಿಪ್ರಾಯ ಸಂಗ್ರಹಿಸಿದ್ರು. ಜೆ.ಪಿ. ನಡ್ಡಾ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕ ರವಿಸುಬ್ರಮಣ್ಯ, ಸಂಸದ ತೇಜಸ್ವಿ ಸೂರ್ಯ ಸಾಥ್ ನೀಡಿದ್ರು.
ಈ ವೇಳೆ ಮಾತ್ನಾಡಿದ ಸಾಹಿತಿ ಚಂದ್ರಶೇಖರ್ ಕಂಬಾರರು, ಭಾಷೆ ವಿಚಾರವಾಗಿ ಮಾತ್ನಾಡಿದೆ. ಭಾರತದಲ್ಲಿ 2 ಸಾವಿರ ಭಾಷೆಗಳಿವೆ. 24 ಭಾಷೆಗಳನ್ನು ಮಾತ್ರ ಸರ್ಕಾರ ಅಧಿಕೃತಗೊಳಿಸಿದೆ. ಎಲ್ಲಾ ಭಾಷೆಗಳನ್ನು ಸರ್ಕಾರ ಅಧಿಕೃತಗೊಳಿಸಬೇಕು ಎಂದು ಮನವಿ ಮಾಡಿರೋದಾಗಿ ಕಂಬಾರರು ಹೇಳಿದ್ರು.
![](https://risingkannada.com/wp-content/uploads/2019/09/WhatsApp-Image-2019-09-22-at-7.54.19-PM1-1024x576.jpeg)
ಕಾಶ್ಮೀರದಲ್ಲಿ ಏನು ಆಗುತ್ತಿದೆ, ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಿತ್ತಿದೆ ಎಂದು ಜೆ.ಪಿ. ನಡ್ಡಾ ವಿವರಿಸಿದ್ರು. 370 ರದ್ದು ಮಾಡಿದ್ದು ಯಾಕೆ ಅನ್ನೋದರ ಬಗ್ಗೆ ಚರ್ಚೆ ನಡೆಸಿದ್ರು ಅಂತ ಕಂಬಾರರು ಹೇಳಿದ್ರು.
ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ದೇಶಾದ್ಯಂತ 370 ರದ್ದತಿ ಕುರಿತು ಗಣ್ಯರ ಅಭಿಪ್ರಾಯ ಸಂಗ್ರಹಿಸ್ತಿದ್ದಾರೆ. ಇದರ ಭಾಗವಾಗಿ ಇವತ್ತು ಚಂದ್ರಶೇಖರ್ ಕಂಬಾರರ ನಿವಾಸಕ್ಕೆ ಭೇಟಿ ನೀಡಿ, ಅಭಿಪ್ರಾಯ ಸಂಗ್ರಹಿಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?