Featured
ಟ್ವಿಟ್ಟರ್‌ನಲ್ಲಿ ಅಯೋಧ್ಯೆ ವಾರ್ ಜೋರು – ಓವೈಸಿಯನ್ನು ರಜಾಕರ ಕಾಲಕ್ಕೆ ಹೋಲಿಸಿದ ತೇಜಸ್ವಿ ಸೂರ್ಯ..!
ಅಯೋಧ್ಯೆ ಭೂಮಿ ಪೂಜೆಯ ವಿಚಾರದಲ್ಲಿ ರಾಜಕೀಯ ಜೋರಾಗಿ ನಡೆಯುತ್ತಿದೆ. ಆಗಸ್ಟ್5 ರಂದು ನಡೆಯುವ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸ್ತಾರೆ ಅನ್ನುವ ಚರ್ಚೆ ಶುರುವಾಗಿದೆ. ಆದ್ರೆ ಪ್ರಧಾನಿಗಳ ಕಚೇರಿಯಿಂದ ಇಲ್ಲಿ ತನಕ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈ ನಡುವೆ ಅಖಿಲ ಭಾರತ ಮಜ್ಲಿಸ್ ಇ ಇಥೆಹಾದುಲ್ ಮುಸ್ಲಿಮಿನ್ (AIMIM) ಮುಖ್ಯಸ್ಥ ಮತ್ತು ಸಂಸದ ಅಸುದುದ್ದೀನ್ ಓವೈಸಿ ಆಯೋಧ್ಯೆ ಭೂಮಿ ಪೂಜೆಯಲ್ಲಿ ಮೋದಿ ಭಾಗಹಿಸುವುದು ಸಾಂವಿಧಾನಿಕ ಪ್ರಮಾಣ ಉಲ್ಲಂಘಿಸಿದಂತೆ ಎಂದು ಟ್ವೀಟ್ ಮಾಡಿದ್ದರು.
ಒವೈಸಿ ಟ್ವೀಟ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಖಡಕ್ ಉತ್ತರವನ್ನೇ ನೀಡಿದ್ದಾರೆ. ರಾಷ್ಟ್ರಪತಿಗಳು ಮತ್ತು ಮುಖ್ಯ ಮಂತ್ರಿಗಳ ಅಧಿಕೃತ ನಿವಾಸದಲ್ಲಿ ಇಫ್ತಾರ್ ಕೂಟ ಆಯೋಜಿಸುತ್ತಿದ್ದಾಗ ನಿಮ್ಮ ಜಾತ್ಯಾತೀತೆ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ರಜಾಕರಿಂದ ಸಂವಿಧಾನದ ಪಾಠ ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ತಿರುಗೇಟಯ ನೀಡಿದ್ದಾರೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ತೇಜಸ್ವಿ ಸೂರ್ಯ ಅಯೋಧ್ಯೆಯಲ್ಲಿ ದೇಗುಲ ನೆಲಸಮ ಮಾಡಿ ಮಸೀದಿ ಕಟ್ಟಲಾಗಿತ್ತು. ಈಗ ತಪ್ಪನ್ನು ಸರಿಪಡಿಸಿಕೊಳ್ಳಲಾಗುತ್ತಿದೆ ಎಂದು ಒವೈಸಿಯನ್ನು ಚುಚ್ಚಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?