ದೇಶ-ವಿದೇಶ
ಉತ್ತರಾಖಂಡ್ನಲ್ಲಿ ಬಿಜೆಪಿ ಹ್ಯಾಟ್ರಿಕ್ ಕ್ಲೀನ್ಸ್ವೀಪ್?
ಉತ್ತರಾಖಂಡ್ : 5 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡ್ ಬಿಜೆಪಿ ಭದ್ರಕೋಟೆ ಅಂತಲೇ ಹೇಳಬೇಕು. ಸದ್ಯ ಉತ್ತರಾಖಂಡ್ನ ಐದೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. 2014 ಹಾಗೂ 2019ರ ಚುನಾವಣೆಯಲ್ಲಿ ಎಲ್ಲಾ 5 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕೇಸರಿ ಪಕ್ಷ ಕ್ಲೀನ್ಸ್ವೀಪ್ ಮಾಡಿತ್ತು. ಆದರೆ ಈ ಬಾರಿ ಜನರ ನಿರ್ಧಾರವೇನು ಎಂಬುವುದು ನಮ್ಮ ಸಮೀಕ್ಷೆಯಲ್ಲಿ ಸೆರೆಯಾಗಿದೆ.
ರೈಸಿಂಗ್ ಕನ್ನಡ ಮೆಗಾ ಸರ್ವೆ ಸಮೀಕ್ಷೆಯಿಂದ ತಿಳಿದು ಬಂದಿರುವ ಜನಾಭಿಪ್ರಾಯ ಕೇಸರಿ ಪಾಳಯಕ್ಕೆ ಕೇಸರಿಬಾತ್ನಷ್ಟೇ ಸಿಹಿಯಾಗಿದೆ. ಈ ಬಾರಿಯೂ ಎಲ್ಲಾ 5 ಕ್ಷೇತ್ರಗಳಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎನ್ನುತ್ತಿದೆ ಸಮೀಕ್ಷೆ. ಶೇಕಡಾವಾರು ಮತದಾನ ಎಷ್ಟಿರಲಿದೆ ಎಂಬ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ.
ಉತ್ತರಾಖಂಡ್ನ ನೈನಿತಾಲ್-ಉಧಮ್ಸಿಂಗ್, ಅಲ್ಮೋರಾ, ತೆಹ್ರಿ ಗರ್ವಾಲ್, ಹರಿದ್ವಾರ ಹಾಗೂ ಗರ್ವಾಲ್ ಕ್ಷೇತ್ರಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಇಲ್ಲಿನ ಜನ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವುದಾಗಿ ತಿಳಿಸಿದ್ದಾರೆ. ಆ ಮೂಲಕ ಬಿಜೆಪಿ ಒಟ್ಟಾರೆ ಶೇ.62ರಷ್ಟು ಮತಗಳನ್ನು ಪಡೆದರೆ, ಕಾಂಗ್ರೆಸ್ ಶೇ.30ರಷ್ಟು ಹಾಗೂ ಇತರರು ಶೇ.8ರಷ್ಟು ಮತಗಳನ್ನು ಗಳಿಸಲಿದ್ದಾರೆ.
ಬಿಜೆಪಿ ಉತ್ತರಾಖಂಡ ಸೇರಿದಂತೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಲಾ ರಾಜ್ಯ ಲಕ್ಷ್ಮಿ ಶಾ ಅವರನ್ನು ತೆಹ್ರಿ ಗರ್ವಾಲ್‌ನಿಂದಲೇ ಸ್ಪರ್ಧಿಸುತ್ತಾರೆ. ಅಜಯ್ ತಮ್ತಾ ಸಹ ತಮ್ಮ ಕ್ಷೇತ್ರ ಅಲ್ಮೋರಾ (ಎಸ್‌ಸಿ) ನಿಂದ ಕಣಕ್ಕಿಳಿಯಲಿದ್ದಾರೆ. ಅಜಯ್ ಭಟ್ ಕೂಡ ನೈನಿತಾಲ್-ಉದಮ್ಸಿಂಗ್ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?