Featured
ಟಿಕ್‌ಟಾಕ್, ಹೆಲೋ ಬ್ಯಾನ್‌ನಿಂದಾಗಿ 45 ಸಾವಿರ ಕೋಟಿ ನಷ್ಟ..! – ಇದು ಭಾರತದ ಕೊಟ್ಟ ಡಿಜಿಟಲ್ ಸ್ಟ್ರ್ಕೈಕ್..!
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಚೀನಾ ವಿರುದ್ಧ ಭಾರತ ಸಾರಿದ ಡಿಜಿಟಲ್ ಸ್ಟ್ರೈಕ್‌ನಿಂದಾಗಿ ಡ್ರ್ಯಾಗನ್ ರಾಷ್ಟ್ರ ಸಾವಿರಾರು ಕೋಟಿ ನಷ್ಟಕ್ಕೆ ಸಿಲುಕಲಿದೆ. ಜೂನ್ 15 ರಂದು ಭಾರತ-ಚೀನಾ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಅದಾದ ಬಳಿಕ ಭಾರತದಾದ್ಯಂತ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿದ್ದು, ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು. ಇದರ ಬೆನ್ನಲ್ಲೇ ಸರ್ಕಾರ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿತ್ತು.
ಭಾರತದಲ್ಲಿ ಟಿಕ್‌ಟಾಕ್, ಹೆಲೋ ನಿಷೇಧದಿಂದ ಚೀನಾದ ಬೈಟ್‌ಡ್ಯಾನ್ಸ್ ಕಂಪೆನಿಗೆ 45,000 ಕೋಟಿವರೆಗೆ ನಷ್ಟವಾಗುವ ಸಾದ್ಯತೆ ಇದೆ. ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ 7 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಈಗ ಆ್ಯಪ್‌ಗಳಳ ನಿಷೇಧದಿಂದಾಗಿ ವಹಿವಾಟು ಸ್ಥಗಿತಗೊಳ್ಳಲಿದೆ. ಪರಿಣಾಮವಾಗಿ 45,000 ಕೋಟಿವರೆಗೂ ನಷ್ಟವಾಗುವ ಸಾಧ್ಯತೆ ಇದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ ಎಂದು ಚೀನಾ ಪತ್ರಿಕೆ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಟಿಕ್‌ಟಾಕ್ ಚೀನಾದ ಬೈಟ್ ಡ್ಯಾನ್ಸ್ ಕಂಪನಿಯ ವೀಡಿಯೋ ಶೇರಿಂಗ್ ಪ್ಲಾಟ್‌ಫಾರ್ಮ್ ಹೊಂದಿದ್ದರೇ, ಹೆಲೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿದೆ. ವಿಗೊ ವೀಡಿಯೋ ಸಹ ನಿಷೇಧಿತ ಪಟ್ಟಿಯಲ್ಲಿರುವ ಇನ್ನೊಂದು ಆ್ಯಪ್ ಆಗಿದ್ದು, ಇದೂ ಬೈಟ್‌ಡ್ಯಾನ್ಸ್ ಕಂಪನಿಯದ್ದಾಗಿದೆ.
ಚೀನಾದ 59 ಆ್ಯಪ್‌ಗಳನ್ನೂ ನಿಷೇಧಿಸಿರುವ ಭಾರತದ ಸರ್ಕಾರ, ಅವುಗಳನ್ನೂ ಬ್ಲಾಕ್ ಮಾಡುವಂತೆ ಸ್ಥಳೀಯ ದೂರಸಂಪರ್ಕ ಆಪರೇಟರ್‌ಗಳಿಗೆ ಸೂಚಿಸಿದೆ. ಟಿಕ್‌ಟಾಕ್ ಮತ್ತು ಹೆಲೋ ಭಾರತದ ಆ್ಯಪ್ ಸ್ಟೋರ್‌ಗಳಲ್ಲಿ ಈಗಾಗಲೇ ಸಿಗುತ್ತಿಲ್ಲ. ಈ ಹಿಂದೆ ಡೌನ್‌ಲೋಡ್ ಮಾಡಿರುವವರ ಮೊಬೈಲ್‌ಗಳಲ್ಲೂ ಕಾರ್ಯನಿರ್ವಹಿಸುತ್ತಿಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?