Featured
Bird Flu : ರಾಜ್ಯಕ್ಕೂ ಬಂದೇ ಬಿಡ್ತಾ ಹಕ್ಕಿ ಜ್ವರ..? : ಕೋಳಿ ಮಾಂಸ, ಮೊಟ್ಟೆ ತಿನ್ನಬಹುದಾ.?
ರೈಸಿಂಗ್ ಕನ್ನಡ :- ಇಡೀ ದೇಶ ಒಂದೆಡೆ ಕೊರೋನಾಗೆ ಬೆಚ್ಚಿ ಬಿದ್ದಿದ್ರೆ, ಮತ್ತೊಂದೆಡೆ ಈಗ ಹಕ್ಕಿ ಜ್ವರ ಭೀತಿ ಶುರುವಾಗಿದೆ. ಈಗಾಗಲೇ ಕೇರಳ, ಹಿಮಾಚಲ ಪ್ರದೇಶ, ಆಂಧ್ರ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಆತಂಕ ಸೃಷ್ಟಿಸಿದೆ. ಇದ್ರಿಂದಾಗಿ ರಾಜ್ಯದಲ್ಲೂ ಕೂಡ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ನೆರೆ ರಾಜ್ಯಗಳಿಂದ ಕೋಳಿ ಮಾಂಸ ರಫ್ತು ನಿಷೇಧ ಮಾಡಲಾಗಿದೆ.
ಈವರೆಗೆ ರಾಜ್ಯದಲ್ಲೂ ಅಧಿಕೃತವಾಗಿ ಹಕ್ಕಿಜ್ವರ ದೃಢಪಟ್ಟಿಲ್ಲ. ಆದ್ರೆ, ಕಾಗೆಗಳು ಸೇರಿದಂತೆ ವಿವಿಧ ಪಕ್ಷಗಳ ಅಸಹಜ ಸಾವು ಆತಂತಕವನ್ನ ಉಂಟು ಮಾಡಿದೆ.
ಹಾಗಿದ್ರೆ, ಹಕ್ಕಿ ಜ್ವರದ ಲಕ್ಷಣಗಳೇನು.?
- ಬರ್ಡ್ ಫ್ಲ್ಯೂ ಅಂದರೆ ಏವಿಯನ್ ಫ್ಲೂ ಎಂದು ಅರ್ಥ
- ಪಕ್ಷಿಗಳಲ್ಲಿ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುವ ಜ್ವರದಿಂದ ಹರಡುವ ರೋಗ
- ಸೋಂಕಿತ ಪಕ್ಷಿಯ ಎಂಜಲು, ಹಿಕ್ಕೆಗಳ ಮೂಲಕ H5N1 ಫ್ಲೂ ವೈರಸ್ ಹರಡುತ್ತೆ
- ಪಕ್ಷಿಗಳಿಂದ ಪಕ್ಷಿಗಳಿಗೆ ಹಾಗೂ ಮನುಷ್ಯರಿಗೂ ಈ ಸೋಂಕು ಹರಡುತ್ತೆ
- ಪಕ್ಷಿಗಳ ಮೂಲಕ ಏವಿಯನ್ ಫ್ಲೂ ಮನುಷ್ಯನಿಗೆ ಹರಡುವ ಸಾಧ್ಯತೆ
- ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆ ಇನ್ನೂ ದೃಢಪಟ್ಟಿಲ್ಲ
- ಹಕ್ಕಿ ಜ್ವರ ಬಂದಿರುವ ವ್ಯಕ್ತಿಗಳಲ್ಲಿ ಕೆಮ್ಮು, ಜ್ವರ, ಗಂಟಲು ನೋವು
- ಮೈಕೈ ನೋವು, ನ್ಯೂಮೋನಿಯಾ ಪ್ರಮುಖವಾದವು ಕಾಣಿಸಿ
ಹಕ್ಕಿ ಜ್ವರ ಇದ್ರೂ ಕೋಳಿ ಮಾಂಸ, ಮೊಟ್ಟೆ ತಿನ್ನಬಹುದಾ..?
- ಮೊಟ್ಟೆ ಮತ್ತು ಮಾಂಸ ತಿನ್ನಬಹುದು
- ಆದ್ರೆ, ಸರಿಯಾಗಿ ಬೇಯಿಸಿ ಸೇವಿಸಬಹುದು
- 1 ಕೋಳಿಗೆ ಈ ವೈರಸ್ ಬಂದ್ರೆ ಇತರೆ ಕೋಳಿಗೂ ಕೂಡಲೇ ಸೋಂಕು ಬರುತ್ತೆ
- ಮೊಟ್ಟೆಯ ಹಳದಿ ಲೋಳೆ ಗಟ್ಟಿ ಆಗುವಂತೆ ಬೇಯಿಸಿ ತಿನ್ನಬೇಕು
- 70 ಸೆಲ್ಷಿಯಸ್ (158 ಡಿಗ್ರಿ) ಉಷ್ಣಾಂಶದಲ್ಲಿ ಹೆಚ್5ಎನ್1 ವೈರಸ್ ನಾಶವಾಗುತ್ತೆ
- ಹಾಫ್ ಬಾಯಿಲ್ಡ್ ಎಗ್ ತಿನಿಸುಗಳಿಗೆ ಕಡಿವಾಣ ಹಾಕಬೇಕು
ಒಟ್ನಲ್ಲಿ, ಹಕ್ಕಿ ಜ್ವರ ಸದ್ಯ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?