ಸಿನಿಮಾ
ಬಿಗ್ಬಾಸ್-17 ಅನುರಾಗ್ ದೋಬಲ್ ಐಶಾರಾಮಿ ಕಾರು ವಶ, 3 ಕೋಟಿ ದಂಡ

Cinema : ಬಿಗ್ಬಾಸ್ ಹಿಂದಿ ಸೀಸನ್ 17ರ ಸ್ಪರ್ಧಿ ಅನುರಾಗ್ ದೋಬಲ್ 4 ಕೋಟಿ ಬೆಲೆಯ ಐಶಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, 3 ಕೋಟಿ ದಂಡ ವಿಧಿಸಿದ್ದಾರೆ.
ಬಿಗ್ಬಾಸ್ 17 ಮಾಜಿ ಸ್ಪರ್ಧಿಗಳ ಟೈಂ ಸರಿ ಇಲ್ಲ. ಬಿಗ್ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಎಲ್ವಿಶ್ ಯಾದವ್, ಹಾವಿನ ವಿಷದ ರೇವ್ ಪಾರ್ಟಿ ಆಯೋಜಿಸಿದ ಆರೋಪದಲ್ಲಿ ಕೆಲ ದಿನಗಳ ಹಿಂದಷ್ಟೆ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಬಿಗ್ಬಾಸ್ 17ರ ವಿಜೇತ ಮುನಾವತ್ ಫಾರುಖಿ ಹುಕ್ಕಾ ಬಾರ್ ಒಂದರಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಇದೀಗ ಬಿಗ್ಬಾಸ್ 17ರ ಸ್ಪರ್ಧಿ ಆಗಿದ್ದ ಜನಪ್ರಿಯ ಯೂಟ್ಯೂಬರ್ ಅನುರಾಗ್ ದೋಬಲ್ ಸಹ ಪೊಲೀಸರಿಂದ ಸಮಸ್ಯೆ ಎದುರಿಸಿದ್ದಾರೆ. ಅನುರಾಗ್ರ ಅತ್ಯಂತ ದುಬಾರಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂರು ಕೋಟಿ ದಂಡ ವಿಧಿಸಿದ್ದಾರೆ.
ಯೂಟ್ಯೂಬರ್ ಅನುರಾಗ್ ದೋಬಲ್, ಯುಕೆ 07 ರೈಡರ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಐಶಾರಾಮಿ ಕಾರು, ಬೈಕ್ಗಳನ್ನು ಖರೀದಿ ಮಾಡಿ ಚಲಾಯಿಸುತ್ತಾರೆ. ಸೆಲೆಬ್ರಿಟಿಗಳೊಟ್ಟಿಗೆ ಕಾರ್ನಲ್ಲಿ ರೈಡ್ ಸಹ ಹೋಗುತ್ತಾರೆ. ಐಪಿಎಲ್ ಸಮಯವಾದ್ದರಿಂದ ಐಪಿಎಲ್ನ ಸೆಲೆಬ್ರಿಟಿಗಳೊಟ್ಟಿಗೆ ವಿಡಿಯೋ ಮಾಡಲು ಚೆನ್ನೈಗೆ ತಮ್ಮ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅನುರಾಗ್ ದೋಬಲ್ ತಂದಿದ್ದರು. ಇಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಜೊತೆ ವಿಡಿಯೋ ಮಾಡಿ ಇನ್ನೇನು ಹೊರಡಬೇಕಾದರೆ ಅವರ ಕಾರನ್ನು ಚೆನ್ನೈ ಪೊಲೀಸರು ಸೀಜ್ ಮಾಡಿದ್ದಾರೆ.
ಸುಮಾರು 4 ಕೋಟಿಗೂ ಹೆಚ್ಚು ಬೆಲೆಯ ಲ್ಯಾಂಬೊರ್ಗಿನಿ ಹುರಿಕೇನ್ ಕಾರನ್ನು ಅನುರಾಗ್ ದೋಬಲ್ ಇತ್ತೀಚೆಗಷ್ಟೆ ಖರೀದಿ ಮಾಡಿದ್ದರು. ವಿಶೇಷವಾಗಿ ಐಪಿಎಲ್ ಸೀಸನ್ನಲ್ಲಿ ಕಂಟೆಂಟ್ ಕ್ರಿಯೇಷನ್ ಮಾಡಲೆಂದು ಈ ಕಾರು ಖರೀದಿ ಮಾಡಲಾಗಿತ್ತು. ಅದರಂತೆ ಚೆನ್ನೈಗೆ ಕಾರನ್ನು ಪ್ಲಾಟ್ಬೆಡ್ ಮೇಲೆ ಟ್ರಾನ್ಸ್ಪೋರ್ಟ್ ಮಾಡಿಕೊಂಡು ಇಲ್ಲಿ ಸುರೇಶ್ ರೈನಾ ಜೊತೆ ಶೂಟ್ ಮಾಡಿದ್ದ ಅನುರಾಗ್ ದೋಬಲ್, ಮುಂದಿನ ಶೂಟ್ಗಾಗಿ ಕಾರನ್ನು ಫ್ಲ್ಯಾಟ್ ಬೆಡ್ ಮೇಲೆ ಇರಿಸಿ ದೊಡ್ಡ ಲಾರಿಯೊಂದಕ್ಕೆ ಕಾರನ್ನು ಹಾಕಿ ದೆಹಲಿಗೆ ಕಳಿಸಿ ತಾವು ದೆಹಲಿಗೆ ವಿಮಾನದಲ್ಲಿ ಹೋಗಲು ತಯಾರಾಗಿದ್ದರು. ಆದರೆ ಆ ಲಾರಿಗೆ ಸೂಕ್ತವಾದ ದಾಖಲೆಗಳು ಇಲ್ಲದ ಕಾರಣ ಚೆನ್ನೈ ಪೊಲೀಸರು ಲಾರಿ ಜೊತೆಗೆ ಲ್ಯಾಂಬೊರ್ಗಿನಿ ಕಾರನ್ನು ಸಹ ಸೀಜ್ ಮಾಡಿದ್ದಾರೆ.
ವ್ಲಾಗರ್ ಆಗಿರುವ ಅನುರಾಗ್ ದೋಬಲ್ ತಮ್ಮ ಕಾರನ್ನು ಟ್ರಾನ್ಸ್ಪೋರ್ಟ್ ಮಾಡುತ್ತಿರುವ ದೃಶ್ಯಗಳನ್ನು, ಸೀಜ್ ಆಗಿರುವ ವಿವರಗಳನ್ನು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ತಮಗೆ 3 ರಿಂದ 3.50 ಕೋಟಿ ರೂಪಾಯಿ ದಂಡ ಪಾವತಿ ಮಾಡಬೇಕಾಗಿ ಬರಬಹುದು ಎಂದು ಸಹ ಅನುರಾಗ್ ದೋಬಲ್ ಹೇಳಿಕೊಂಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?