ಬೆಂಗಳೂರು : ಬಹು ನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ, ಬಿಗ್ ಬಾಸ್ ಸೀಸನ್ 7ಗೆ ಆರಂಭಿಕ ಶಾಕ್ ಎದುರಾಗಿದೆ. ಈ ಬಾರಿ ವಿಶೇಷ ಎನ್ನುವಂತೆ 18 ಮಂದಿ ಸ್ಪರ್ಧಿಗಳು ಕೂಡ ಸೆಲಬ್ರಿಟಿಗಳು. ಆದ್ರೆ, ಮೊದಲ ದಿನ ಮುಗಿಸಿ, ಎರಡನೇ ದಿನದ ಆರಂಭದಲ್ಲೇ ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್ ಬಾಸ್ ಹೌಸ್ನಿಂದ ಹೊರ ಬಂದಿದ್ದಾರೆ. ಕೇವಲ 36 ಗಂಟೆಗಳಲ್ಲಿ ರವಿ ಬೆಳಗೆರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ರವಿ ಬೆಳಗೆರೆ ಬಿಗ್ ಬಾಸ್ ಹೌಸ್ನಲ್ಲಿ ಇದ್ದಾರೆ ಅನ್ನೋ ಕಾರಣಕ್ಕೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಯಾಕಂದ್ರೆ, ಎಲ್ಲಾ ರಂಗಗಳಲ್ಲೂ ಪರಿಣಿತಿ ಪಡೆದಿದ್ದ ರವಿ ಬೆಳಗೆರೆ, ಬಿಗ್ ಬಾಸ್ ಹೌಸ್ನಲ್ಲಿ ಯಾವ ರೀತಿ ಇರ್ತಾರೆ ಅನ್ನೋ ಕುತೂಹಲ ಇತ್ತು. ಇದೇ ಕಾರಣಕ್ಕಾಗಿ, ರವಿ ಬೆಳಗೆರೆ ಸಿಗರೇಟ್ ಕೇಳುವ ಪ್ರೋಮೋ ಕೂಡ ರಿಲೀಸ್ ಆಗಿತ್ತು. ಆದ್ರೆ, ಮೊದಲ ದಿನ ಮುಗಿಸಿ, ಎರಡನೇ ದಿನ ಬೆಳಗ್ಗೆಯೇ ಶೌಚಗೃಹದಲ್ಲಿ ರವಿ ಬೆಳಗೆರೆ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಯ ಶೌಚಗೃಹದಲ್ಲಿ ಕಾಲು ಜಾರಿ ಬಿದ್ದ ರವಿ ಬೆಳಗೆರೆಯನ್ನ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸೇರಿಸಿ, ಅಲ್ಲಿಂದ ಪದ್ಮನಾಭ ನಗರದ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸದ್ಯ, ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೀತಿದ್ದಾರೆ. ಹೀಗೆ, ಬಿಗ್ ಬಾಸ್ ಮನೆ ಪ್ರವೇಶಿಸಿದ ಒಂದೇ ದಿನಗಳಲ್ಲಿ ದಿಢೀರ್ ಅಂತ ವಾಪಸ್ ಬಂದ ಮೊದಲ ಉದಾಹರಣೆ ಇದು ಎನ್ನಲಾಗಿದೆ.
ಮತ್ತೊಂದೆಡೆ, ಬಿಗ್ ಬಾಸ್ ಮನೆ ಪ್ರವೇಶಿಸಿದಾಗಲೇ ರವಿ ಬೆಳಗೆರೆಗೆ ಅನಾರೋಗ್ಯ ಇತ್ತು ಎನ್ನಲಾಗಿದೆ. ನಡೆಯಲು ಕೂಡ ಆಗ್ತಿರಲಿಲ್ಲ. ಒಬ್ಬರ ಸಹಾಯದಿಂದ ರವಿ ಬೆಳಗೆರೆ ನಡೆಯಬೇಕಿತ್ತು. ಇದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. ಈ ನಡುವೆ, ಗುಣಮುಖರಾದ್ಮೇಲೆ ರವಿ ಬೆಳಗೆರೆ ಮತ್ತೆ ಬಿಗ್ ಬಾಸ್ ಹೌಸ್ ಸೇರ್ತಾರಾ.? ಇಲ್ವಾ ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿದ್ದು, ಬಿಗ್ ಬಾಸ್ ಆಯೋಜಕರು ಸ್ಪಷ್ಟನೆ ನೀಡಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?