ಟಾಪ್ ನ್ಯೂಸ್
ಬಿಡಿಎ ನಿವೇಶನ ಮಾಲೀಕರಿಗೆ ಬಿಗ್ ಶಾಕ್: ಸೈಟ್ ಖರೀದಿಸಿ ಮನೆ ಕಟ್ಟಿಲ್ಲದಿದ್ರೆ ದಂಡ!
![](https://risingkannada.com/wp-content/uploads/2024/03/bda.jpg)
Bengalore : ಬಿಡಿಎ ನಿವೇಶನ ಖರೀದಿಸಿದ್ದು, ನೀವಿನ್ನೂ ಮನೆ ಕಟ್ಟಿಲ್ಲ ಅನ್ನೋದಾದ್ರೆ, ಈ ಸುದ್ದಿಯನ್ನ ಮಿಸ್ ಮಾಡ್ದೆ ಓದಿ. ಬಿಡಿಎ ನಿವೇಶನ ಖರೀದಿಸಿ ಐದು ವರ್ಷವಾಗಿದ್ರೂ ಇನ್ನು ಮನೆ ನಿರ್ಮಾಣ ಮಾಡದೆ ಇದ್ದವರಿಗೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ದಂಡ ವಿಧಿಸೋಕೆ ಚಿಂತನೆ ನಡೆಸುತ್ತಿದೆ. ಬಿಡಿಎ ಸೈಟು ಖರೀದಿಸಿ ನಿವೇಶನ ಕಟ್ಟದವರಿಗೆ ಶೇ. 25ರಷ್ಟು ದಂಡ ವಿಧಿಸೋಕೆ ಮುಂದಾಗಿದೆ. 2020ರಲ್ಲಿ ದಂಡದ ದರ ನಿಗದಿ ಮಾಡಲಾಗಿತ್ತು. ಅದ್ರಂತೆ 20X30 ಅಳತೆಯ ನಿವೇಶನಕ್ಕೆ 5 ಸಾವಿರ ರೂಪಾಯಿ, 50X80 ಅಳತೆಯ ನಿವೇಶನಕ್ಕೆ 3.75 ಲಕ್ಷ ರೂಪಾಯಿ ದಂಡ ನಿಗದಿ ಮಾಡಲಾಗಿದೆ. ಇನ್ನುಳಿದಂತೆ 50X80ಕ್ಕೂ ಮೇಲ್ಪಟ್ಟ ಅಳತೆಯ ನಿವೇಶನಗಳಿಗೆ 6 ಲಕ್ಷರೂಪಾಯಿ ದಂಡದ ದರ ನಿಗದಿ ಮಾಡಲಾಗಿತ್ತು.
ಬಡವರು ಸೂರು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ಬಿಡಿಎ ಬಡಾವಣೆಗಳನ್ನು ನಿರ್ಮಿಸಿ, ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿಕೊಡುತ್ತಿದೆ. ಆದರೆ ಹಣವಂತರು ಇವುಗಳನ್ನು ಖರೀದಿಸಿ ನಂತರ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಾರೆ. ಇನ್ನೂ ಕೆಲವರು ಹೂಡಿಕೆ ಉದ್ದೇಶಕ್ಕಾಗಿಯೇ ಖರೀದಿಸಿ ವರ್ಷಾನುಗಟ್ಟಲೆ ಮನೆ ಕಟ್ಟದೆ ಹಾಗೆಯೇ ಖಾಲಿ ಬಿಟ್ಟಿರುತ್ತಾರೆ. ಈ ಖಾಲಿ ನಿವೇಶನಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ ಈ ಅಕ್ರಮಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಬಿಡಿಎ ಇಂತಹದ್ದೊಂದು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಲೋಕಸಭೆ ಚುನಾವಣೆ ಬಳಿಕ ಈ ದಂಡಾಸ್ತ್ರವನ್ನ ಜಾರಿಗೆ ತರುವ ಸಾಧ್ಯತೆ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?