Featured
ಅನ್ಟೋಲ್ಡ್ ಸ್ಟೋರಿಯಲ್ಲಿ ಅಚಾನಕ್ ತಿರುವು- ಧೋನಿಯ ಜೊತೆ ಹೆಜ್ಜೆಇಟ್ಟ ಜೀವದ ಗೆಳೆಯ- ವಿದಾಯದಲ್ಲೂ ರೈನಾ-ಧೋನಿ ಜುಗಲ್ಬಂಧಿ
![](https://risingkannada.com/wp-content/uploads/2020/08/RAINA-DHONI.jpg)
ಕಣ್ಣೀರು ಹರಿಸುವ ಭಾವನಾತ್ಮಕ ಭಾಷಣವಿಲ್ಲ, ವಿದಾಯದ ಪಂದ್ಯದ ಗೌರವವೂ ಬೇಡ… ತನಗೆ ಏನು ಬೇಕೋ ಅದನ್ನೇ ಮಾಡೊದು ಮಹೇಂದ್ರ ಸಿಂಗ್ ಧೋನಿ. ಆನ್ಫೀಲ್ಡ್, ಆಫ್ ದಿ ಫೀಲ್ಡ್ ಅಥವಾ ವೈಯಕ್ತಿಕ ನಿರ್ಧಾರಗಳೇ ಇರಲಿ. ಫರ್ಫೆಕ್ಟ್ ಆಗಿ ನಿರ್ಧಾರ ಮಾಡುವ ತಾಕತ್ತು ಧೋನಿಯಲ್ಲಿದೆ. ಧೋನಿಯ ಆಟ ಸಾಕು, ರಿಟೈರ್ಮೆಂಟ್ ಕೊಟ್ಟುಬಿಡು ಅಂತ ಬಾಯಿ ಬಡ್ಕೊಂಡಾಗಲೂ ಕ್ಯಾರೇ ಅಂದಿರಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾದಗಲೂ ತಲೆ ಕೆಡಿಸಿಕೊಂಡಿರಲಿಲ್ಲ. ಪ್ರೆಸ್ನವರು ಅಲ್ಲಿ ಇಲ್ಲಿ ಪ್ರಶ್ನೆ ಕೇಳಿದಾಗಲೂ ಹೆಚ್ಚು ಮಾತಾಡಿರಲಿಲ್ಲ. ಆದ್ರೆ ಸ್ವಾತಂತ್ರ್ಯ ದಿನದ ಸಂಜೆ ಧೋನಿಗೆ ಅಂತರಾಷ್ಟ್ರಿಯ ಕ್ರಿಕೆಟ್ ಸಾಕಾಗಿದೆ. ಯಾರಿಗೂ ಕೇಳಿಲ್ಲ. ಸಲಹೆ ಪಡೆದಿಲ್ಲ. ಅಂತಿಮ ಪಂದ್ಯ ಬೇಕು ಅಂತ ಹಠ ಹಿಡಿಯಲಿಲ್ಲ. ಇನ್ಸ್ಟಾಗ್ರಾಂನಲ್ಲೊಂದು ಚಿಕ್ಕ ವಿಡಿಯೋ.. 1929 ಗಂಟೆಯ ನಂತರ ರಿಟೈರ್ಡ್ ಕ್ರಿಕೆಟರ್ ಅನ್ನುವ ಟ್ಯಾಗ್ ಲೈನ್..
ಇದೇ ಕಾರಣಕ್ಕೆ ಧೋನಿ ಇಷ್ಟವಾಗೋದು. ಯಾರು ಏನನುತ್ತಾರೆ ಅನ್ನುವುದು ಬೇಕಾಗಿಲ್ಲ. ತಾನೇ ಏನು ಅನ್ನುವುದಷ್ಟಕ್ಕೆ ಗಮನ ಕೊಡುವ ಕ್ಯಾರೆಕ್ಟರ್ ಇಷ್ಟವಾಗಿ ಬಿಡುತ್ತದೆ. ರಾಂಚಿಯ ಗಲ್ಲಿಯೊಂದರಿಂದ ವಿಶ್ವ ಶ್ರೇಷ್ಟ ಕ್ರಿಕೆಟ್ ಆಟಗಾರನಾದ್ರೂ ಬದಲಾಗದ ಕ್ಯಾರೆಕ್ಟರ್ ಎಲ್ಲರಿಗೂ ಹಿಡಿಸಿಬಿಟ್ಟಿದೆ. ಉದ್ದ ಕೂದಲಿನ ಧೋನಿ ಮಾಯವಾಗಿ ಬಿಳಿ ಗಡ್ಡದ ಧೋನಿ ಎದುರಾದಗಲೂ ಅಭಿಮಾನಿಗಳ ಪ್ರೀತಿ ಕಡಿಮೆ ಆಗದೇ ಇರುವುದಕ್ಕೇ ಇದೇ ಸಿಂಪ್ಲಿಸಿಟಿ ಕಾರಣವಾಗಿತ್ತು. ಧೋನಿಯ ಅನ್ಟೋಲ್ಡ್ ಸ್ಟೋರಿಯಲ್ಲಿ ಅಚಾನಕ್ ತಿರುವು ಬಂದೇ ಬಿಡ್ತು.
![](https://risingkannada.com/wp-content/uploads/2020/08/RAINA-DHONI1-1024x768.jpg)
ಕ್ರಿಕೆಟ್ನಲ್ಲಿ ಧೋನಿ ಕೈಯಲ್ಲಿ ಪಳಗಿದವರೆಷ್ಟೋ.. ಜೀವನ ಕಂಡುಕೊಂಡವರೆಷ್ಟೋ.. ಆದ್ರೆ ಸದಾ ಧೋನಿಯ ಜೊತೆಗೆ ಇದ್ದಿದ್ದು ಸುರೇಶ್ ರೈನಾ. ಐಪಿಎಲ್ ತಂಡದಿಂದ ಹಿಡಿದು ಟೀಮ್ ಇಂಡಿಯಾದಲ್ಲಿ ಇರುವ ತನಕ ಧೋನಿ ಮತ್ತು ರೈನಾ ನಡುವೆ ಅದ್ಭುತ ಗೆಳೆತನ ಬೆಳೆದಿತ್ತು. ಧೋನಿ ಜೊತೆಗಿನ ರೈನಾ ಗೆಳೆತನ ಟೀಕೆಗೂ ಕಾರಣವಾಗಿತ್ತು. ಧೋನಿಯ ಕೃಪಾಕಟಾಕ್ಷವೇ ರೈನಾಗೆ ಸಾಥ್ ಅನ್ನುವ ಟೀಕೆಗೂ ಕೂಲ್ ಕ್ಯಾಪ್ಟನ್ ತಲೆ ಕೆಡಿಸಿಕೊಂಡಿರಲಿಲ್ಲ. ಹಾಗಂತ ರೈನಾ ಎಬಿಲಿಟಿ ಬಗ್ಗೆ ಪ್ರಶ್ನೆ ಎತ್ತುವ ಹಾಗೇಯೂ ಮಾಡಿರಲಿಲ್ಲ. ಸಿಎಸ್ಕೆ ತಂಡದಲ್ಲಂತೂ ಧೋನಿ-ರೈನಾ ಜುಗಲ್ಬಂಧಿಗೆ ತಡೆ ಒಡ್ಡುವವರೇ ಇರಲಿಲ್ಲ. ಈಗ ವಿದಾಯದಲ್ಲೂ ಜೀವದ ಗೆಳೆಯರು ಒಂದಾಗಿದ್ದಾರೆ. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಬೈ ಬೈ ಹೇಳಿದ ಮರುಕ್ಷಣ ರೈನಾ ಕೂಡ ಪ್ಯಾಡ್, ಗ್ಲೌಸ್ ಬಿಚ್ಚಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಗೆಳೆತನ ಅಂದ್ರೆ ಹೀಗಿರಬೇಕು ಅನ್ನುವುದನ್ನು ತೋರಿಸಿದ್ದಾರೆ. ರೈನಾ ನಿರ್ಧಾರ ತಪ್ಪು-ಸರಿ ಅನ್ನುವುದಕ್ಕಿಂತಲೂ ಧೈರ್ಯ ಮೆಚ್ಚುವಂತಹದ್ದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?