ಕ್ರೀಡೆ
ಟಾಸ್ ಗೆದ್ದ ಬೆಂಗಳೂರು ಟೀಂ, ಆರ್‌ಸಿಬಿ ಪ್ಲೇಯಿಂಗ್ 11ನಿಂದ ಸಿರಾಜ್-ಮ್ಯಾಕ್ಸಿ ಔಟ್!
Cricket : RCB ಪ್ಲೇಯಿಂಗ್ 11: ಫಾಫ್ ಡುಪ್ಲೇಸಿಸ್ (C), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಟಿದಾರ್, ಸೌರಭ್ ಚೌಹಾಣ್, ದಿನೇಶ್ ಕಾರ್ತಿಕ್ (WK), ಮಹಿಪಾಲ್ ಲೋಮ್ರೋರ್, ರಿಸ್ಸೆ ಟೋಪ್ಲೆ, ಲಾಕಿ ಫರ್ಗ್ಯೂಸನ್, ವೈಶಾಕ್ ವಿಜಯ್ ಕುಮಾರ್, ಯಶ್ ದಯಾಳ್.
SRH ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (wk), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (c), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಉತ್ತಮ ಬ್ಯಾಟಿಂಗ್ ಮೇಲ್ಮೈ ಹೊಂದಿದೆ. ಹೀಗಾಗಿ ಇದನ್ನು ಬ್ಯಾಟ್ಸ್ಮನ್ ಗಳ ಸ್ವರ್ಗವೆಂದೇ ಕರೆಯಲಾಗುತ್ತದೆ. ಆದರೆ ಈ ಋತುವಿನಲ್ಲಿ ಬೌಲರ್‌ಗಳು ಕೊಂಚ ಪ್ರಭಾವಬೀರುತ್ತಿದ್ದಾರೆ. ಹೀಗಾಗಿ ಮೈದಾನದಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಬಹುದು.
ಇನ್ನು, accuweather.com ಪ್ರಕಾರ, ಬೆಂಗಳೂರಿನ ಹವಾಮಾನವು ಕ್ರಿಕೆಟ್ ಆಟಕ್ಕೆ ಉತ್ತಮವಾಗಿದೆ ಎಂದು ಹೇಳಲಾಗಿದೆ. ಪಂದ್ಯದ ದಿನವಾದ ಇಂದು ಬೆಂಗಳೂರಿನಲ್ಲಿ ತಾಪಮಾನವು 30% ಆರ್ದ್ರತೆಯೊಂದಿಗೆ ಸುಮಾರು 25 ° C ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಅಂದರೆ ಸೋಮವಾರದಂದು ಇಬ್ಬನಿಯು ದೊಡ್ಡ ಪಾತ್ರವನ್ನು ವಹಿಸುವುದಿಲ್ಲ.
ಹೀಗಾಗಿ ಬ್ಯಾಟಿಂಗ್ ಮತ್ತು ಬೌಲರ್ ಗಳಿಗಿಬ್ಬರಿಗೂ ಇಂದಿನ ಪಂದ್ಯದಲ್ಲಿ ಸಹಾಯಕವಾಗಲಿದ್ದು, ಸಂಪೂರ್ಣ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ 22 ಬಾರಿ ಮುಖಾಮುಖಿಯಾಗಿದೆ.
ಆರ್‌ಸಿಬಿ 10 ಪಂದ್ಯಗಳನ್ನು ಗೆದ್ದಿದ್ದರೆ, ಎಸ್‌ಆರ್‌ಎಚ್ 12 ಪಂದ್ಯಗಳನ್ನು ಗೆದ್ದಿದೆ. ಒಟ್ಟಾರೆಯಾಗಿ ಅಂಕಅಂಶದಲ್ಲಿ ಆರ್‌ಸಿಬಿ ತಂಡಕ್ಕಿಂತ ಹೈದರಾಬಾದ್ ತಂಡವು ಹೆಚ್ಚು ಬಲಿಷ್ಠವಾಗಿದ್ದಂತೆ ಕಾಡಣುತ್ತಿದೆ. ಅಲ್ಲದೇ ಈ ಸೀಸನ್ ನಲ್ಲಿಯೂ ಹೈದರಾಬಾದ್ ಸಖತ್ ಸ್ಟ್ರಾಂಗ್ ಆಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?