Featured
ATMಗೆ ತುಂಬಿಸಬೇಕಿದ್ದ 99 ಲಕ್ಷ ರೂಪಾಯಿ ಜೊತೆ ಪರಾರಿ ಆಗಿದ್ದ ಚಾಲಕ ಪವನ್ ಬಂಧನ..!
![](https://risingkannada.com/wp-content/uploads/2019/09/atm.jpg)
ಬೆಂಗಳೂರು : ಎಟಿಎಂಗೆ ತುಂಬಿಸಬೇಕಿದ್ದ ಬರೋಬ್ಬರಿ 99 ಲಕ್ಷ ರೂಪಾಯಿ ಜೊತೆ ಪರಾರಿಯಾಗಿದ್ದ ಕಸ್ಟೋಡಿಯನ್ ವಾಹನದ ಚಾಲಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಸ್ಟೋಡಿಯನ್ ವಾಹನದ ಚಾಲಕ ಪವನ್, ಬಂಧಿತ ಆರೋಪಿ. ಬೆಂಗಳೂರಿನ ಬಾಣಸವಾಡಿ ಪೊಲೀಸರು ಆರೋಪಿ ಪವನ್ನನ್ನ ಬಂಧಿಸಿದ್ದಾರೆ.
ಶನಿವಾರವಷ್ಟೇ ಐಸಿಐಸಿಐ ಬ್ಯಾಂಕ್ನ ಎಟಿಎಂಗೆ ಹಣ ತುಂಬಿಸಬೇಕಿತ್ತು. ಹಣ ತುಂಬಿಸಲು ಎಟಿಎಂ ಬಳಿ ವಾಹನ ನಿಲ್ಲಿಸಿದ್ರು. ಈ ವೇಳೆ ವಾಹನದಲ್ಲಿದ್ದ ಇತರೆ ನಾಲ್ವರು ಕೆಳಗೆ ಇಳಿಯುತ್ತಿದ್ದಂತೆ, ವಾಹನ ಚಾಲಕ ಪವನ್ ಅಲ್ಲಿಂದ ಹಣದ ಸಮೇತ ವಾಹನದಲ್ಲಿ ಎಸ್ಕೇಪ್ ಆಗಿದ್ದ. ದೂರು ದಾಖಲಿಸಿಕೊಂಡ ಪೊಲೀಸರು, ಪವನ್ ಜೊತೆಯಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು.
ಕೊನೆಗೆ ಆರೋಪಿ ಬೆನ್ನತ್ತಿದ ಬಾಣಸವಾಡಿ ಪೊಲೀಸರು, ಆರೋಪಿ ವಾಹನ ಚಾಲಕ ಪವನ್ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಹಣ ಹಾಗೂ ಇತರೆ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?