Featured
ಬೆಳಗಾವಿ ರಾಜಕೀಯಕ್ಕೆ ಆಣೆ-ಪ್ರಮಾಣದ ಎಂಟ್ರಿ- ಜಾರಕಿಹೊಳಿ,ಹೆಬ್ಬಾಳ್ಕರ್ ಮಾತಿನ ಆಟಕ್ಕೆ ಹೊಸ ಟ್ವಿಸ್ಟ್..!
ರೈಸಿಂಗ್ ಕನ್ನಡ:
ಬೆಳಗಾವಿ:
ಬೆಳಗಾವಿ, ಕುಕ್ಕರ್ ವಿಚಾರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಧ್ಯೆ ಜಟಾಪಟಿ ಮುಂದುವರೆದಿದೆ. ರಮೇಶ ಜಾರಕಿಹೊಳಿ ಹೇಳಿಕೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತೀರುಗೇಟು ನೀಡಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮತ್ತೆ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದ್ದಾರೆ. ನಾನು ಎಲ್ಲಾ ರೀತಿಯ ಕಾನೂನು ಹೋರಾಟಕ್ಕೆ ಸಿದ್ಧವಾಗಿದ್ದೇನೆ. ಇನ್ನು ಹೇಳುವ ವಿಚಾರಗಳು ಸಾಕಷ್ಟಿವೆ. ಆದ್ರೆ ಬಿಜೆಪಿ ಕಾರ್ಯಕರ್ತರನ್ನ ಹುರಿದುಂಬಿಸಲು ಇರುವುದನ್ನ ಹೇಳಿರುವೆ. ಹೆಬ್ಬಾಳ್ಕರ್ ವ್ಯಕ್ತಿತ್ವ ಇಡೀ ಮೊಲೆ ಮೊಲೆಗೆ ಗೊತ್ತಿದೆ. ಚುನಾವಣೆಯಲ್ಲಿ ಮುಂದಿನ ರಣತಂತ್ರ ತೋರಿಸ್ತಿನಿ. ನಾನು ಯಾರಿಗೂ ವೈಯಕ್ತಿಕವಾಗಿ ನಿಂದನೆ ಮಾಡಬೇಕೆಂದು ಹೇಳಿಲ್ಲ. ನಾನು ಹೇಳಿದ್ದುನಿಜ. ಇಲ್ಲ ಎಂದು ಹೆಬ್ಬಾಳ್ಕರ್ ಅವರು ಅವರ ಮನೆ ದೇವರು ಹಟ್ಟಿ ವೀರಭದ್ರೇಶ್ವರನ ಮೇಲೆ ಆಣೆ ಮಾಡಲಿ. ನಾನು ಕೊಲ್ಲಾಪುರ ಮಹಾಲಕ್ಷ್ಮೀ ಮೇಲೆ ಆಣೆ ಮಾಡ್ತೀನಿ. ಹೆಬ್ಬಾಳ್ಕರ್ ನಮ್ಮ ಉಪಕಾರವಿಲ್ಲದೇ ಆರಿಸಿ ಬಂದಿದ್ದಾಳೆ ಅಂದ್ರೆ, ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇವೆ. ಆ ಹೆಣ್ಣು ಮಗಳಿಗೆ ರಾಜಕಾರಣ ಗೊತ್ತಿಲ್ಲ. ಮೊದಲು ನನಗೆ ಭೇಟಿ ಮಾಡಿದ ಹೆಬ್ಬಾಳ್ಕರ್ ನನ್ನ ಕಾಲಿಗೆ ಬಿದ್ದು ಬುಡಾ ಅಧ್ಯಕ್ಷ ಮಾಡುವಂತೆ ಕೇಳಿಕೊಂಡಿದ್ದಳು. ಇದು ದೇವರು ಸತ್ಯವಾಗಿ ಲಕ್ಷ್ಮೀ ದೇವರ ಆಣೆ ಮಾಡಿ ಹೇಳ್ತಿನಿ. ಒಳ್ಳೆಯ ಹೆಣ್ಣು ಮಗಳು, ಲಿಂಗಾಯತ ಸಮುದಾಯದ ಹೆಣ್ಣು ಮಗಳು ಅಂತಾ ಬೆಳೆಸಿದ್ದೇವೆ ಅಂತಾ ಸಚಿವ ರಮೇಶ ಜಾರಕಿಹೊಳಿ ಸವಾಲು ಹಾಕಿದ್ದಾರೆ.
You may like
ಬೆಳಗಾವಿ ಪುತ್ರ ಮೃಣಾಲ್ಗೆ ಆಶೀರ್ವಾದ ಮಾಡಿ : ಲಕ್ಷ್ಮೀ ಹೆಬ್ಬಾಳ್ಕರ್
ಎಲ್ಲಾ ಸಮೀಕ್ಷೆಗಳಲ್ಲೂ ಬೆಳಗಾವಿಯಲ್ಲಿ ನಾವೇ ಮುಂದು..! – ಸಿಎಂ
ಆಸ್ಪತ್ರೆಗೆ ದಾಖಲಾದ ಮಂಗ: ಮಾನವೀಯತೆ ಮೆರೆದ ಮಾನವ
Acid Attack | ಕಡಬ ಆ್ಯಸಿಡ್ ದಾಳಿ : ಸೂಕ್ತ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಆಸ್ತಿ ಪಡೆಯಲು ಪತಿಯ ಶವವನ್ನು ಇಟ್ಟು ಪತ್ನಿಯಿಂದ ಪ್ರತಿಭಟನೆ.
Lakshmi Hebbalkar | ನನಗೆ ಜಾತಿಯೇ ಇಲ್ಲ, ಮನುಷ್ಯತ್ವವೇ ನನ್ನ ಜಾತಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್