Featured
ಸೌಂದರ್ಯ ಪ್ರಿಯರೇ ಎಸಿ ಬಳಸುವುದಕ್ಕೂ ಮುನ್ನಎಚ್ಚರ.!
ರೈಸಿಂಗ್ ಕನ್ನಡ :- ಬೇಸಿಗೆ ಸಮಯದಲ್ಲಿ ತಂಪಾದ ವಾತಾವರಣ ಸಿಕ್ಕರೆ ಅಮೃತ ಸಿಕ್ಕಷ್ಟೇ ಖುಷಿಯಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಎಸಿಯಿದ್ದರೆ ಖುಷಿಯಾಗುತ್ತದೆ. ಸೂರ್ಯನ ಶಾಖ ಹೆಚ್ಚಾದಂತೆ ಎಸಿಯು ತಂಪನ್ನೂ ಹೆಚ್ಚು ಮಾಡುತ್ತೇದೆ. ಬೇಸಿಗೆಯಲ್ಲಿ ನಗರದ ಬಹುತೇಕ ಕಟ್ಟಡಗಳಲ್ಲಿ ಮತ್ತು ಮನೆಗಳಲ್ಲಿ ಎಸಿ ಬಳಕೆ ಹೆಚ್ಚಾಗಿರುತ್ತದೆ.
ಎಸಿ ನಮ್ಮ ದೇಹವನ್ನು ತಂಪಾಗಿರುಸುತ್ತದೆ. ಜೊತೆಜೊತೆಗೆ ಬಿಸಿಬಿಸಿ ಅನಾರೋಗ್ಯವನ್ನು ನಮ್ಮ ದೇಹದೊಳಗೇ ಬಚ್ಚಿಟ್ಟಿರುತ್ತದೆ. ಎಸಿಯಿಂದ ನಮಗೆ ಆಗುವ ಅಪಾಯಗಳು ನೋಡೋಣ.
ತಲೆನೋವು :- ನೀವು ಎಸಿ ರೂಮಿಗೆ ಹೊಸಬರಾದರೆ ಆರಂಭದಲ್ಲಿ ಕಾಣಿಸಿಕೊಳ್ಳುವ ಅನಾರೋಗಗಳಿವು. ನಿಮ್ಮ ಶ್ವಾಸಕೋಶಕ್ಕೆ ತಣ್ಣನೆ ಹವಾ ಕಿರಿಕಿರಿ ಎನಿಸಿದರೆ , ಉಸಿರಾಟಕ್ಕೂ ಸಮಸ್ಯೆ ಆಗುತ್ತದೆ. ಇದರಿಂದ ತಲೆನೋವು, ತಲೆಸುತ್ತು, ವಾಂತಿ ಕಾಣಿಸಿಕೊಳ್ಳುತ್ತದೆ.
ಅಲರ್ಜಿ :- ಎಸಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಹೋದಲ್ಲಿ ಇದರಿಂದ ಅಲರ್ಜಿ ಹಾಗೂ ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಎಸಿಯಿಂದ ಎದುರಾಗುವ ಸಮಸ್ಯೆಗಳಿಂದ ದೂರವಿರಲು ಸಲಹೆಗಳನ್ನು ನೋಡೋಣ
- ದಿನಕ್ಕೆ 8-10 ಗ್ಲಾಸ್ ಗಳಷ್ಟು ನೀರನ್ನು ಕುಡಿಯಿರಿ. ದೇಹಕ್ಕೆ ಎದುರಾಗುವ ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ.
- ಹೆಚ್ಚು ಬಿಸಿ ಇರುವ ನೀರಿನ ಬಳಕೆಯನ್ನು ಕಡಿಮೆ ಮಾಡಿ. ಆದಷ್ಟೂ ತಣ್ಣೀರಲ್ಲಿ ಸ್ನಾನ ಮಾಡಿ.
- ಗ್ಲಿಸರಿನ್ ಅಂಶವಿರುವ ಸೋಪುಗಳ ಬಳಕೆ ಮಾಡಿ. ಅದರ ಬಗ್ಗೆ ವೈದ್ಯರ ಬಳಿ ಸಲಹೆ ಪಡೆಯುವುದು ಉತ್ತಮ.
- ಅಗತ್ಯವಿಲ್ಲದಿದ್ದಾಗ ಎಸಿ ಬಳಕೆ ಮಾಡುವುದನ್ನು ಕಡಿಮೆ ಮಾಡಿ. ಆದಷ್ಟು ನ್ಯಾಚುರಲ್ ಗಾಳಿಯನ್ನು ಪಡೆಯಲು ಪ್ರಯತ್ನಿಸುವುದು ಉತ್ತಮ.
- 4-5 ವಾರಗಳಿಗೊಮ್ಮೆ ಎಸಿ ಫಿಲ್ಟರ್ ಗಳನ್ನು ಬದಲಾಯಿಸುತ್ತಿರಿ. ಫಿಲ್ಟರ್ ಗಳನ್ನು ಆಗಾಗ ಸ್ವಚ್ಚಗೊಳಿಸಿ, ಇದರಿಂದ ಎಸಿಯಿಂದ ಎದುರಾಗುವ ಸೋಂಕುಗಳನ್ನು ತಡೆಗಟ್ಟಬಹುದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?