Featured
IRB ಬಟಾಲಿಯನ್ ಗೆ ಉಸ್ತುವಾರಿ ಸಚಿವರ ಭೇಟಿ: ಅಧಿಕಾರಿಗಳ ಸಾಮಾಜಿಕ ಕಾರ್ಯಕ್ಕೆ ಬಿ.ಸಿ.ಪಾಟೀಲ್ ಶ್ಲಾಘನೆ
ರೈಸಿಂಗ್ ಕನ್ನಡ ವೆಬ್:
ಕೊಪ್ಪಳ : ನಾಗಾರಾಜ್ ವೈ
ಕೊಪ್ಪಳ ಜಿಲ್ಲೆಯ ಮುನಿರಬಾದ್ನಲ್ಲಿರುವ ಐ.ಆರ್.ಬಿ ಬಟಾಲಿಯನ್ ಗೆ ಕೃಷಿ ಸಚಿವ ಹಾಗೂ ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮುನಿರಬಾದ್ನ ಇಂಡಿಯನ್ ರಿಸರ್ವ್ ಬಟಾಲಿಯನ್ ಮತ್ತು ಪೊಲೀಸ್ ತರಬೇತಿ ಕೇಂದ್ರಕ್ಕೆ ಆಗಮಿಸುತ್ತಿದ್ದಂತಯೇ ಅಲ್ಲಿನ ಪರಿಸರ ಹಾಗೂ ಅಭಿವೃದ್ದಿ ಕಾರ್ಯ ನೋಡಿ ಹರ್ಷ ವ್ಯಕ್ತಪಡಿಸಿದ್ರು.
IRBಯಲ್ಲಿ ಕೆರೆ ಅಭಿವೃದ್ದಿಗೆ ನೀರಾವರಿ ಇಲಾಖೆಯಿಂದ ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿತ್ತು. ಇದ್ರಿಂದ ಸಂಪೂರ್ಣವಾಗಿ ಕೆರೆ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಇನ್ನು ಹಣದ ಅವಶ್ಯಕತೆ ಇತ್ತು. ಇದ್ರಿಂದ IRB ಯ ಸಹಾಯಕ ಕಮಾಂಡೆಂಟ್ ಸತೀಶ್ ಸೇರಿದಂತೆ ಅಲ್ಲಿನ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳು ತಮ್ಮ ಸಂಬಳದ ಹಣ ನೀಡಿ ಹಾಗೂ ದಾನಿಗಳ ಸಹಾಯದಿಂದ ತಾವೇ ಶ್ರಮದಾನ ಮಾಡೋ ಮೂಲಕ ಕೆರೆ ಕಾಮಗಾರಿ ಸಂಪೂರ್ಣಗೊಳಿಸಿದ್ರು. ಇದರ ಮಾಹಿತಿ ಪಡೆದ ಸಚಿವ ಬಿ.ಸಿ ಪಾಟೀಲ್ ಪೊಲೀಸರ ಇಚ್ಛಾಶಕ್ತಿಗೆ ಶಹಬ್ಬಾಸ್ ಹೇಳಿದ್ರು. ಅಲ್ಲದೇ ಇದೇ IRB ಯಲ್ಲಿ ಮೂರು ಸಾವಿರ ಗಿಡಗಳನ್ನು ಹಾಕಿದ ಸಹಾಯಕ ಕಮಾಂಡೆಂಟ್ ಸತೀಶ್, ಇನ್ನೀತರ ಅಧಿಕಾರಿ ಸಿಬ್ಬಂದಿಗಳ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
IRB ಕಮಾಂಡೆಂಟ್ ಸೇರಿದಂತೆ ಸಿಬ್ಬಂದಿಗಳು ಐ.ಆರ್.ಬಿ ಕ್ವಾಟ್ರಸಗಳಲ್ಲಿ ಡಾಂಬಾರ್ ರಸ್ತೆಗಳ ಅವಶ್ಯಕತೆ ಇದ್ದು, ರಸ್ತೆಗಳನ್ನು ಮಾಡಿಸಿಕೊಡಿ ಎಂದು ಸಚಿವರಲ್ಲಿ ಮನವಿ ಮಾಡಿದ್ರು. ಐಆರ್ ಬಿ ಕಮಾಂಡೆಂಟ್ ಮಹಾದೇವ ಪ್ರಸಾದ, ಪೊಲೀಸ್ ತರಬೇತಿ ಶಾಲೆ ಕಮಾಂಡೆಂಟ್ ಡಾ. ರಾಮಕೃಷ್ಣ, ಸಹಾಯಕ ಕಮಾಂಡೆಂಟ್ ಸತೀಶ್, ಕೊಪ್ಪಳ ಎಸ್ಪಿ ಜಿ. ಸಂಗೀತಾ, ಸಹಾಯಕ ಆಯುಕ್ತರಾದ ನಾರಯಣ ಕನಕರಡ್ಡಿ, ಸಿಪಿಐ ರವಿ ಉಕ್ಕುಂದ್, ತಾಲೂಕ ಪಂಚಾಯತ್ ಸದಸ್ಯ ಪಾಲಾಕ್ಷಪ್ಪ, ಬಿಜೆಪಿ ಮುಖಂಡ ಪ್ರದೀಪ್ ಹಿಟ್ನಾಲ್ ಸೇರಿದಂತೆ ಐ ಆರ್ ಬಿ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?