Featured
ಆಗಸ್ಟ್‌ನಲ್ಲಿ 17 ದಿನ ಬ್ಯಾಂಕ್ ರಜೆ – ಬ್ಯಾಂಕ್ ಕೆಲಸವಿದ್ರೆ, ದಿನಾಂಕ ನೆನಪಿನಲ್ಲಿಟ್ಟುಕೊಳ್ಳಿ..!
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಆಗಸ್ಟ್ ಬಂತಂದ್ರೆ, ವಿಶೇಷ ದಿನಗಳು ಸಾಲು ಸಾಲಾಗಿ ಬರುತ್ತವೆ. ಹೀಗಾಗಿ ಆರ್‌ಬಿಐ ಮಾರ್ಗದರ್ಶನದಂತೆ, ಬ್ಯಾಂಕುಗಳಿಗೂ ಸಾಲು ಸಾಲು ರಜೆ. 2020ರಲ್ಲೂ ಆಗಸ್ಟ್‌ನಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ಆರ್‌ಬಿಐ ಪ್ರಕಾರ ದೇಶದಲ್ಲಿ ಸುಮಾರು 17 ರಜೆಗಳು ಬ್ಯಾಂಕ್‌ಗಳಿಗಿವೆ. ಹೀಗಾಗಿ ಬ್ಯಾಂಕ್ ಕೆಲಸದಲ್ಲಿ ಹೆಚ್ಚು ನಿರತರಾಗೋರು, ಒಮ್ಮೆ ಯಾವತ್ತು ಯಾವತ್ತೂ ರಜೆ ಅನ್ನೋದನ್ನ ಒಮ್ಮೆ ತಿಳಿದುಕೊಳ್ಳಿ.
ಆ. 1 ಬಕ್ರೀದ್
ಆ.1ರಂದು ದೇಶದಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತೆ. ಮುಸ್ಲಿಮರಿಗೆ ಈ ಹಬ್ಬ ವಿಶೇಷವಾಗಿರುವುದರಿಂದ ದೇಶದಾದ್ಯಂತ ಶನಿವಾರ ಸರಕಾರಿ ರಜೆ ಇದೆ. ಇನ್ನು
ಆ.3ಕ್ಕೆ ರಕ್ಷಾ ಬಂಧನ
ಕೆಲವು ರಾಜ್ಯಗಳಲ್ಲಿ ರಕ್ಷಾಬಂಧನವನ್ನ ಮುಖ್ಯ ಹಬ್ಬವಾಗಿ ಆಚರಿಸಲಾಗುತ್ತೆ. ಕಆದರೆ ರಕ್ಷಾ ಬಂಧನ ದಿನ ಕರ್ನಾಟಕದಲ್ಲಿ ರಜೆ ಇರುವುದಿಲ್ಲ. ಇನ್ನು ಆ.8ರಂದು ಎರಡನೇ ಶನಿವಾರ ಆಗಿರುವುದರಿಂದ ಸಾಮಾನ್ಯವಾಗಿ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.
ಆ. 11ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ
ಇನ್ನೂ ಆಗಸ್ಟ್ 11ಕ್ಕೆ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಇದೆ. ಈ ದಿನ ಸರ್ಕಾರಿ ರಜೆ ಇದೆ. ಇನ್ನು ಕೆಲವು ರಾಜ್ಯಗಳಲ್ಲಿ ಆ.12ರಂದು ಕೂಡ ಹಬ್ಬ ಆಚರಿಸುವುದರಿಂದ, ಈ ದಿನವು ರಜೆ ಘೋಷಣೆ ಮಾಡಲಾಗುತ್ತೆ. ಕೆಲವೆಡೆ ಎರಡು ದಿನಗಳ ಕಾಲ ರಜೆ ಇರುತ್ತದೆ. ಆ.13ರಂದು ಸ್ವಾತಂತ್ರ್ಯ ಹೋರಾಟಗಾರರ ದಿನವನ್ನಾಗಿ ಘೋಷಣೆ ಮಾಡಿರುವುದರಿಂದ ಈಶಾನ್ಯ ಭಾರತ ಸೇರಿ ಕೆಲವು ರಾಜ್ಯಗಳಲ್ಲಿ ಈ ದಿನದಂದು ರಜೆ ಘೋಷಣೆ ಮಾಡುವ ಹಿನ್ನೆಲೆ ಬ್ಯಾಂಕ್ ಬಂದ್ ಇರುತ್ತದೆ.
ಆ. 15ಕ್ಕೆ ಸ್ವಾತಂತ್ರ್ಯ ದಿನಾಚರಣೆ
ಇನ್ನು ಆ.15ರಂದು ಸ್ವಾತಂತ್ರೋತ್ಸವ ಇಡೀ ದೇಶವೇ ಸ್ವಾತಂತ್ರ್ಯವನ್ನ ಹಬ್ಬಂದತೆ ಕೊಂಡಾಡುತ್ತದೆ. ಈ ದಿನ ಸರ್ಕಾರಿರಿ ಕಚೇರಿಗಳು ಬ್ಯಾಂಕುಗಳು ಇಡೀ ದೇಶದಾದ್ಯಂತ ಮುಚ್ಚಿರುತ್ತದೆ. ಮರು ದಿನ ಭಾನುವಾರವಾಗಿರುವುದರಿಂದ ಸಹಜವಾಗೇ ಬ್ಯಾಂಕ್ ಕ್ಲೋಸ್ ಆಗಿರುತ್ತದೆ. ಹೀಗಾಗಿ ನಿರಂತರ ಎರಡು ದಿನಗಳ ಕಾಲ ಬ್ಯಾಂಕ್ ಬಂದಾದ ಹಾಗೆ ಆಗುತ್ತದೆ.
ಆ. 22ಕ್ಕೆ ಗಣೇಶೋತ್ಸವ..!
ಆ.22ರ ಶನಿವಾರ ಮತ್ತೆ ರಜೆ ಇದೆ. ಈ ದಿನದಂದು ಗಣೇಶೋತ್ಸವ ಹಿನ್ನೆಲೆ ದೇಶದಾದ್ಯಂತ ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ಈ ದಿನ ಎಲ್ಲರು ಮನೆ ಹಾಗೂ ಸಾರ್ವಜನಿಕವಾಗಿ ಗಣೇಶನ ಹಬ್ಬವನ್ನ ಆಚರಿಸುತ್ತಾರೆ. ಇನ್ನು ಆ. 27 ರಂದು ಪಂಜಾಬ್‌ನಲ್ಲಿ ಬಾಬಾ ಶ್ರೀ ಚಾಂದ್ ಜಿ ಜಯಂತಿ ಇರುವುದರಿಂದ ಇಲ್ಲಿ ಬ್ಯಾಂಕ್‌ಗಳು ರಜೆ ಇರುತ್ತದೆ. ಇನ್ನು 28 ರಂದು ರಾಜಸ್ಥಾನದಲ್ಲಿ ತೇಜ ದಶಮಿ ಅನ್ನುವ ಹಬ್ಬ ಇರುವುದರಿಂದ ಇಲ್ಲಿ ಅಂದು ಬ್ಯಾಂಕ್‌ಗಳು ತೆರೆದಿರುವುದಿಲ್ಲ.
ಇನ್ನು ಆ.31ಕ್ಕೆ ಕೇರಳದಲ್ಲಿ ತಿರು ಓಣಂ ಆಚರಣೆ ಹಿನ್ನೆಲೆ ಇಲ್ಲಿನ ಎಲ್ಲಾ ಬ್ಯಾಂಕ್‌ಗಳು ಬಾಗಿಲು ಹಾಕಿರುತ್ತವೆ. ಇದಲ್ಲದೆ ಈ ತಿಂಗಳಲ್ಲಿ ಒಟ್ಟು ನಾಲ್ಕು ಭಾನುವಾರ ಬರುವುದರಿಂದ ಅವುಗಳಿಗೆ ಎಂದಿನಂತೆ ರಜೆ ಇದೆ. ಅಲ್ಲದೇ ನಾಲ್ಕನೇ ಶನಿವಾರ ಕೂಡ ಒಂದು ರಜೆ ಇದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?